ಕೆ.ಆರ್.ಪುರ: ಬಡವರ ಆರೋಗ್ಯ ದೃಷ್ಟಿಯಿಂದ ಆಯೋಜಿಸುವ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಲಕ್ಷ್ಮೀ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯ ಸಿಇಒ ರಾಘವೇಂದ್ರ ಸುಂಟ್ರಳ್ಳಿ ತಿಳಿಸಿದರು.
ಕೆ.ಆರ್.ಪುರದಲ್ಲಿ ಶ್ರೀಲಕ್ಷೀ ಗ್ರೂಪ್ ಆಫ್ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕೆ.ಆರ್.ಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಡವರಿದ್ದು, ರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಬಡವವರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಹಲವು ರ್ಷಗಳಿಂದ ಅರೋಗ್ಯ ಶಿಬಿರದಂತಹ ಕರ್ಯಕ್ರಮಗಳನ್ನು, ಹಮ್ಮಿಕೊಂಡು ಬರಲಾಗುತ್ತಿದೆ. ವೈದ್ಯಕೀಯ ಸೇವೆಯಲ್ಲಿ ಆಸ್ಪತ್ರೆ ಸದಾ ಮುಂದಿದ್ದು ಉತ್ತಮ ಸೇವೆ ಮಾಡಲು ಸ್ಥಳೀಯರ ಸಹಕಾರ ಮುಖ್ಯವಾಗುತ್ತದೆ ಎಂದರು.
ಆಸ್ಪತ್ರೆಯ ಮುಖ್ಯಸ್ಥ ಡಾ.ಸಂಬಾಶಿವ ಮಾತನಾಡಿ, ಉಚಿತ ಶಿಬಿರದಲ್ಲಿ ನರರೋಗ, ಮೂತ್ರಪಿಂಡ, ಮೂತ್ರಕೋಶ, ಹೃದಯಭಾಗ, ಕ್ಯಾನ್ಸರ್ ರೋಗ, ಮೂಳೆ, ಮಧುಮೇಹ, ಮಕ್ಕಳ ಚಿಕಿತ್ಸೆ ಸೇರಿದಂತೆ ವಿವಿಧ ರೋಗಗಳ ಉಚಿತ ತಪಾಸಣೆಯನ್ನು ಸರ್ವಜನಿಕರು ಮಾಡಿಸಿಕೊಂಡು ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದರು.ಆಸ್ಪತ್ರೆಯ ವೈದ್ಯರಾದ ಜಯಮಾಲಾ ಇದ್ದರು.