ಮಳವಳ್ಳಿ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಇಂದು ಸಂಜೆ ಪತ್ರಿಕೆಯ ತಾಲ್ಲೂಕು ಪತ್ರಕರ್ತ ಎಸ್.ಮಂಜು ಆಯ್ಕೆಯಾದರು.
ಈಚೆಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಎಸ್.ಮಂಜು ೧೩ ಮತ ಪಡೆದು ಜಯಶೀಲರಾದರು.
ಚುನಾವಣಾಧಿಕಾರಿಯಾಗಿ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತಿಕೆರೆ ಜಯರಾಮ್ ಕಾರ್ಯನಿರ್ವಹಿಸಿದರು. ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಡಿ.ಶಶಿಧರ್ ಕಾಡು ಕೋತ್ತನಹಳ್ಳಿ, ಉಪಾಧ್ಯಕ್ಷರಾದ ರವಿ ಸಾವಂದಿಪುರ, ಕಾರ್ಯದರ್ಶಿ ಶಿವರಾಜ್ ಜಿಲ್ಲಾ ನಿರ್ದೇಶಕರದ ಎಂ ನಾಗೇಶ್ ಚೇತನ್ ಕುಮಾರ್ ಸೇರಿದಂತೆ ಹಲವು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಮಳವಳ್ಳಿ ತಾಲ್ಲೂಕು ಪತ್ರಕರ್ತರ ಸಂಘಕ್ಕೆ ಎಸ್.ಮಂಜು ಉಪಾಧ್ಯಕ್ಷ



