ದೆಹಲಿ: ಇಂದು ನಡೆದಿರುವ ವಿರೋಧ ಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿ ಕೂಟ ಸಭೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಗೈರಾಗಿದ್ದಾರೆ.
ಇದರಿಂದ ಕೆಂಡಾಮಂಡಲವಾಗಿರುವ ಅಧೀರ್ ರಂಜನ್ ಚೌಧರಿ ಅವರು ಮಮತಾ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ಮಮತಾ ಬ್ಯಾನರ್ಜಿ ಅಪ್ರಮಾಣಿಕೆ ಹಾಗೂ ದುರಂಕಾರಿ ಎಂದು ದೂರಿದ್ದಾರೆ.
ತನ್ನನ್ನು ಬೆಳೆಸಿದವರ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ, ರಾಜೀವ್ಗಾಂಧಿ, ಸೋನಿಯಾಗಾಂಧಿ ಅವರಿಂದ ಬೆಳೆದಿದ್ದ ಆಕೆಯ ವರ್ತನೆ ಸರಿಯಲ್ಲ ಎಂದಿರುವ ಅವರು, ಸೋನಿಯಾ ನಿಮ್ಮ ಬಳಿ ಭಿಕ್ಷೆ ಬೇಡುವುದಿಲ್ಲ ಎಂದಿದ್ದಾರೆ.