ಬೆಂಗಳೂರು: ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬುಚ್ಚಳ್ಳಿ ಗ್ರಾಮದ ಬಳಿ ಬುಲನ್ ಪಾಸ್ವಾನ್ ಬಿಹಾರ್ ಮೂಲದ ವ್ಯಕ್ತಿಯು ನಡೆದು ಹೋಗುವಾಗ ರಾತ್ರಿ 8:30 ಸುಮಾರಿಗೆ ಮೂರು ಜನ ಅಪರಿಚಿತರು ಚಾಕುವಿನಿಂದ ಬೆದರಿಸಿ ಒಂದು ಲಕ್ಷ ರೂಪಾಯಿ ನಗದು ಹಾಗೂ 17000 ಬೆಲೆ ಬಾಳುವ ಒಪ್ಪೋ ಮೊಬೈಲ್ ಫೋನನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ.ದೂರುದಾರ ಬುಲನ್ ಪಾಸ್ವಾನ್ ಬಿಹಾರ್ ರಾಜ್ಯದವನಾಗಿದ್ದು ಲೇಬರ್ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿರುತ್ತಾನೆ, ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ಪತ್ತೆ ಮಾಡಲು ಕ್ರಮ ಕೈಗೊಂಡಿರುತ್ತಾರೆ.



