ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವತಿಯಿಂದ ರಾಜ್ಯದ ಸೌಹಾರ್ದ ಸಹಕಾರಿಗಳ ನಿರ್ದೆಶಕರುಗಳಿಗಾಗಿ ಎರಡು ದಿನಗಳ ಆಡಳಿತ ಪರಿಣಿತಿ ಮತ್ತು ವ್ಯವಹಾರ ಅಭಿವೃದ್ಧಿ ತರಬೇತಿಯನ್ನು ಸೌಹಾರ್ದ ಸಹಕಾರಿ ಸೌಧ, ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ ಇಲ್ಲಿ ಆಯೋಜಿಸಲಾಗಿತ್ತು.
ಸೌಹಾರ್ದ ಸಹಕಾರಿಗಳಿಂದ ಸಹಕಾರ ಕ್ಷೆತ್ರಕ್ಕೆ ಉತ್ತಮ ಕೊಡುಗೆ ಎಂಬುದನ್ನು ಮಾನ್ಯ ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್ ಡಾ. ರಾಜೇಂದ್ರ ಕೆ.ರವರು ತಮ್ಮ ಭಾಷನದಲ್ಲಿ ತಿಳಿಸಿದರು.ದಿನಾಂಕ 28.05.2024ರಂದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಯಾಪ್ಟನ್ ಡಾ. ರಾಜೇಂದ್ರ ಕೆ.ಭಾ.ಆ.ಸೇ, ಮಾನ್ಯ ಸಹಕಾರ ಸಂಘಗಳ ನಿಬಂಧಕರು, ಸಹಕಾರ ಇಲಾಖೆ ಇವರು ನೆರವೇರಿಸಿದರು.
ಧಕ್ಷತೆ, ಪ್ರಾಮಾಣಿಕತೆ, ಸಹಕಾರ ಸಂಸ್ಥೆಗಳ ಅಳತೆಗೋಲು ಎಂದು ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಶ್ರೀ ಜಿ ನಂಜನಗೌಡ ರವರು ತಮ್ಮ ಭಾಷಣದಲ್ಲಿ ತಿಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯುಕ್ತ ಸಹಕಾರಿಯ ಮಾನ್ಯ ಅಧ್ಯಕ್ಷರಾದ ಜಿ ನಂಜನಗೌಡ ಇವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಗನ ಕೆ. ಮಾನ್ಯ ಉಪನಿಬಂಧಕರು ಹಾಗೂ ಪೀಠಾಧಿಕಾರಿಗಳು ದಾವಾ ಪಂಚಾಯಿತಿ ನ್ಯಾಯಾಲಯ (ನಿ.441) ಬೆಂಗಳೂರು, ಹಾಗೂ ಶ್ರೀ ಶಶಿಧರ ಮಾನ್ಯ ಸಹಕಾರ ಸಂಘಗಳ ಉಪ ನಿಬಂಧಕರು ಬೆಂಗಳೂರು, ಇವರು ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಸಂಯುಕ್ತ ಸಹಕಾರಿಯ ಮಾನ್ಯ ವ್ಯವಸ್ಥಾಪಕ ನಿರ್ದೆಶಕರಾದ ಶರಣಗೌಡ ಜಿ ಪಾಟೀಲ ಇವರು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸಂಯುಕ್ತ ಸಹಕಾರಿಯ ಮಾಜಿ ನಿರ್ದೆಶಕರಾದ ಶ್ರೀ ವೈ ಟಿ ಪಾಟೀಲ ಹಾಗೂ ಎಲ್ ಎಸ್ ಆನಂದ್ ಇವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಸಂಯುಕ್ತ ಸಹಕಾರಿಯ ಸಿಬ್ಬಂದಿಯವರಾದ ಶ್ರೀಮತಿ ವಿಜಯಶ್ರೀ ಇವರು ನೆರವೇರಿಸಿದರು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶ್ರೀ ಶಿವಕುಮಾರ್ ಬೀರಾದರ್ ನೆರವೇರಿಸಿದರು, ಹಾಗೂ ನಿರೂಪಣೆಯನ್ನು ಶ್ರೀಮತಿ ಸವಿತರವರು ನೇರವೇರಿಸಿಸದರು. ಇದೇ ಸಂದರ್ಭದಲ್ಲಿ ಕ್ಯಾಪ್ಟನ್ ಡಾ. ರಾಜೇಂದ್ರ ಕೆ. ಭಾ.ಆ.ಸೇ, ಮಾನ್ಯ ಸಹಕಾರ ಸಂಘಗಳ ನಿಬಂಧಕರು, ಸಹಕಾರ ಇಲಾಖೆ ಇವರಿಗೆ ಸಂಯುಕ್ತ ಸಹಕಾರಿಯ ವತಿಯಿಂದ ಸನ್ಮಾನಿಸಲಾಯಿತು. ಈ ತರಬೇತಿ ಕಾರ್ಯಕ್ರಮದಲ್ಲಿ 75 ಸೌಹಾರ್ದ ಸಹಕರಿಗಳಿಂದ 122 ಪ್ರತಿನಿಧಿಗಳು ಭಾಗವಹಿಸಿರುತ್ತಾರೆ.