ಬೆಂಗಳೂರು: ಇಂದಿನ ವಿಧಾನಸಭೆ ಕಾರ್ಯಕಲಾಪ ಶುರುವಾಗುತ್ತಿದ್ದಂತೆಯೇ ವಿಪಕ್ಷ ನಾಯಕ ಅಶೋಕ ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಿದರು.ಈ ಸಂದರ್ಭದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ನಿಲುವಳಿ ಸೂಚನೆ ಮಂಡಿಸಲು ಆಗದು ಅಂತ 70 ರ ದಶಕದಲ್ಲಿ ಅಗಿರುವ ರೂಲಿಂಗ್ ಅನ್ನು ನಿಯಮಾವಳಿ ಪುಸ್ತಕದಿಂದ ಓದಿ ಹೇಳಿದರು.
ಆಗ ಅಶೋಕ ಬೆಂಬಲಕ್ಕೆ ಬಂದ ಹಿರಿಯ ಬಿಜೆಪಿ ಶಾಸಕ ಸುರೇಶ್ ಕುಮಾರ್, ನಿಯಮಾವಳಿಯ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆ ಚರ್ಚೆಗೆ ನಿಲುವಳಿ ಸೂಚನೆ ಮಂಡಿಸಲು ಬಾರದು ಅನ್ನೋದನ್ನ ಒಪ್ಪುತ್ತೇನೆ, ಅದರೆ ಇದಕ್ಕೆ ಮೊದಲು ಹತ್ತಾರು ಬಾರಿ ಚರ್ಚೆಗೆ ಅವಕಾಶ ಸಿಕ್ಕಿದೆ, ಅದು ನಿಮಗೂ ಗೊತ್ತಿದೆ ಅಂದಾಗ ಪರಮೇಶ್ವರ್, ವಿಷಯವನ್ನು ಸ್ಫೀಕರ್ ಒಪ್ಪಿಗೆ ಮೇರೆಗೆ ಬೇರೆಯದರಲ್ಲಿ ಚರ್ಚೆಗೆ ತೆಗೆದುಕೊಳ್ಳಬಹುದು, ನಿಯಮ ಏನು ಹೇಳುತ್ತದೆ ಅಂತಷ್ಟೇ ತಾನು ಹೇಳಿದ್ದು ಅನ್ನುತ್ತಾರೆ. ಮಧ್ಯೆ ಪ್ರವೇಶ ಮಾಡಿದ ಸ್ಪೀಕರ್ ಯುಟಿ ಖಾದರ್ ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು.