ಈಗಾಗಲೇ ಕಾಂಗ್ರೆಸ್ನಿಂದ ಬಹುತೇಕ ಅಭ್ಯರ್ಥಿ ಫೈನಲ್, ಅಧಿಕೃತ ಘೋಷಣೆಯೊಂದೇ ಬಾಕಿ.ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಬಹುತೇಕ ಖಚಿತ.ಆದ್ರೆ, ಸ್ಟಾರ್ ಚಂದ್ರು ಅವರನ್ನು ಹೋಲಿಸಿದ್ರೆ, ಈ ಹಿಂದೆ ಸಣ್ಣ ಅವಧಿಗೆ (ಕೇವಲ ಆರು ತಿಂಗಳು ಮಾತ್ರ) ಸಂಸದೆಯಾಗಿ ಕಾರ್ಯನಿರ್ವಹಣೆ ಮಾಡಿದ್ದ ರಮ್ಯಾ ಅವರೇ ಹೆಚ್ಚು ಫೇಮಸ್.
ಇಂತಹ ವಾತಾವರಣ ಮಂಡ್ಯದಲ್ಲಿದ್ರೂ ರಮ್ಯಾ ಬದಲಿಗೆ ಸ್ಟಾರ್ ಚಂದ್ರು ಅವರಿಗೆ ಮಣೆ ಹಾಕುತ್ತಿರುವ ಕಾಂಗ್ರೆಸ್.ಹಾಗಾದ್ರೆ, ರಮ್ಯಾ ಅವರ ರಾಜಕಾರಣದ ಜೀವನ ಇಲ್ಲಿಗೆ ಅಂತ್ಯವಾಗಿ ಹೋಯ್ತಾ?ಅತ್ತ ಸಿನಿಮಾ ಕ್ಷೇತ್ರದಲ್ಲೂ ಸಕ್ರಿಯವಾಗಿಲ್ಲದೇ, ಇತ್ತ ರಾಜಕಾರಣದಲ್ಲೂ ಮುಂದೆ ಬರಲಾಗದೇ ಸೈಲೆಂಟ್ ಆಗಿ ಸೈಡ್ಲೈನ್ ಆಗಿಬಿಟ್ಟಿದ್ದಾರಾ ರಮ್ಯಾ?
ಹೌದು ಎನ್ನುತ್ತಿದೆ ಕಾಂಗ್ರೆಸ್ನ ಮೂಲಗಳು.ಹಾಗಾದ್ರೆ, ರಮ್ಯಾ ರಾಜಕಾರಣ ಅಂತ್ಯವಾಗಿ ಹೋಯ್ತಾ?ಏನಿದು ರಮ್ಯಾ ರಾಜಕಾರಣದ ಹೊಸ ಕಥೆ?ಇಂದು ಸಂಜೆ ಬಿಚ್ಚಿಡುತ್ತಿದೆ, ರಮ್ಯಾ ರಾಜಕಾರಣದ ಅಂತ್ಯದ ವ್ಯಥೆಯ ಕಥೆ.
1. ರಮ್ಯಾ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಂಪಾದನೆ ಮಾಡಿ ಉನ್ನತ ಸ್ಥಾನದಲ್ಲಿದ್ದಾಗಲೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ರು.
2. 2012 ರಲ್ಲಿ ಅಧಿಕೃತವಾಗಿ ಯೂತ್ ಕಾಂಗ್ರೆಸ್ಗೆ ಎಂಟ್ರಿ ಕೊಟ್ಟು, ತಮ್ಮ ರಾಜಕೀಯ ಗುರು ಎಸ್.ಎಂ.ಕೃಷ್ಣರ ಗರಡಿಯಲ್ಲಿ ಪಾಲಿಟಿಕ್ಸ್ ಶುರು ಮಾಡಿದವರು.
3. ರಾಜ್ಯ ಕಾಂಗ್ರೆಸ್ ನಾಯಕರುಗಳು ಸೇರಿದಂತೆ ತಮಗಿರುವ ಹೆಸರು, ವರ್ಚಸ್ಸು ಹಾಗೂ ಭಾಷಾ ಜ್ಞಾನದಿಂದ ಹೈಕಮಾಂಡ್ ನಾಯಕರ ತನಕವು ಸಂಪರ್ಕ ವೃದ್ಧಿಸಿಕೊಂಡವರು.
4. ಬಳಿಕ 2013 ರಲ್ಲಿ ಅಂದಿನ ಮಂಡ್ಯ ಸಂಸದರಾಗಿದ್ದ ಎನ್. ಚೆಲುವರಾಯಸ್ವಾಮಿ ವಿಧಾನಸಭೆಗೆ ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾದ ಕಾರಣ, ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಎದುರಾದ ಉಪ-ಚುನಾವಣೆ.
5. ಆ ಉಪ-ಚುನಾವಣೆಯಲ್ಲಿ ಸ್ಫರ್ಧಿಸಿ, ತಮ್ಮ ಹೆಸರು ಮತ್ತು ವರ್ಚಸ್ಸಿನಿಂದಲೇ ಸಂಸತ್ ಪ್ರವೇಶಿಸಿದ ರಮ್ಯಾ.
6. ಬಳಿಕ 2014 ರಲ್ಲಿ ಹಾಲಿ ಸಂಸದೆ ಖೋಟಾದಡಿಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡು ಕಣಕ್ಕಿಳಿದಿದ್ದ ರಮ್ಯಾ.
7. ಆದ್ರೆ, ಆ ಚುನಾವಣೆಯಲ್ಲಿ ರಮ್ಯಾಗೆ 5,500 ಮತಗಳ ಸಣ್ಣ ಅಂತರದ ಸೋಲು.
8. ಈ ಸೋಲಿನ ಬಳಿಕ ರಾಜಕಾರಣದಲ್ಲಿ ಅಷ್ಟಾಗಿ ಆಸಕ್ತಿ ತೋರದ ರಮ್ಯಾ.
9. ಇತ್ತ ರಾಜ್ಯದಲ್ಲಿ 2013 ರಿಂದ 2018 ರವರೆಗೂ 5 ವರ್ಷಗಳ ಕಾಲ ಕಾಂಗ್ರೆಸ್ನ ಸಿದ್ಧರಾಮಯ್ಯರ ಸರ್ಕಾರವೇ ಅಧಿಕಾರದಲ್ಲಿದ್ರೂ ಅಷ್ಟಾಗಿ ಕಾಣಿಸಿಕೊಳ್ಳದ ರಮ್ಯಾ.
10. ಇತ್ತ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ಆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ದಾಖಲೆಯ ಮತಗಳ ಅಂತರದಿಂದ ಸಂಸತ್ ಪ್ರವೇಶಿಸಿದ್ದಾರೆ.
11. ಇದೆಲ್ಲಾ ಹಳೆಯ ಕಥೆ ಅನ್ನಿಸಿದ್ರೂ, ಇತಿಹಾಸದ ಪುಟಗಳನ್ನು ಸೇರಿದ್ದಾಗಿದೆ.
12. ಇದರ ಮಧ್ಯೆ ಇದೀಗ ಸ್ಟಾರ್ ಚಂದ್ರು ಎಂಬಾತನನ್ನು ಡಿ.ಕೆ. ಶಿವಕುಮಾರ್ ಅಭ್ಯರ್ಥಿ ಮಾಡಲು ಮುಂದಾಗಿದ್ದು ಅವರಿಗಿಂತ ರಮ್ಯಾರಿಗೆ ಫೇಸ್ ವ್ಯಾಲ್ಯೂ ಹೆಚ್ಚು ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ಆರಂಭವಾಗಿದೆ.
ಇದೆಲ್ಲಾ ಒಂದು ಕಡೆಯಾದ್ರೆ, ಇನ್ನು ಖುದ್ದು ರಮ್ಯಾ ಅವರೇ ತಮ್ಮ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಂಡಿದ್ದಾರೆ ಎಂಬ ಚರ್ಚೆಗಳು ಸದ್ದು ಮಾಡಲಾರಂಭಿಸಿದೆ.ಹಾಗಾದ್ರೆ, ರಮ್ಯಾ ಅವರೇ ತಮ್ಮ ರಾಜಕೀಯ ಜೀವನವನ್ನು ಹಾಳು ಮಾಡಿಕೊಂಡಿದ್ಹೇಗೆ? ಎಂಬುದನ್ನು ನೋಡುವುದಾದ್ರೆ,
1. 2013 ರ ಉಪ-ಚುನಾವಣೆಗೂ ಮುನ್ನಾ ತಾವೇ ಅಭ್ಯರ್ಥಿ ಎಂಬುದು ಅಧಿಕೃತ ಆಗುತ್ತಿದ್ದಂತೆ, ಮಂಡ್ಯದಲ್ಲಿ ಮನೆ ಮಾಡಿದ್ದ ರಮ್ಯಾ.
2. ಉಪ-ಚುನಾವಣೆಯಲ್ಲಿ ಆಯ್ಕೆಯಾಗಿ ಕೇವಲ 6 ತಿಂಗಳು ಮಾತ್ರ ಸಣ್ಣ ಅವಧಿಯ ಸಂಸದೆಯಾಗಿ ಕಾರ್ಯನಿರ್ವಹಣೆ ಮಾಡಿದ್ದ ರಮ್ಯಾ, 2014 ರ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಮಂಡ್ಯ ತ್ಯಜಿಸಿದ್ದು.
3. ಯಾರಿಗೂ ಹೇಳದೇ ಕೇಳದೇ, ಮನೆಯನ್ನು ಖಾಲಿ ಮಾಡಿದ್ದು.
4. 2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ದಿ.ಅಂಬರೀಶ್ ಮತ್ತು ಅವರ ತಂಡವನ್ನು ರಮ್ಯಾ ಎದುರು ಹಾಕಿಕೊಂಡಿದ್ದು.
5. ಜಿಲ್ಲೆಯ ಹಿರಿಯ ರಾಜಕಾರಣಿಗಳ ಪಟ್ಟಿಯಲ್ಲಿದ್ದ ಜಿ. ಮಾದೇಗೌಡ, ಆತ್ಮಾನಂದರಂತಹವನ್ನು ಕಡೆಗಣನೆ ಮಾಡಿದ್ದು.
6. ಉಪ-ಚುನಾವಣೆಯಲ್ಲಿ ರಮ್ಯಾರ ಗೆಲುವಿಗಾಗಿ ಶ್ರಮಿಸಿದ್ದ ಪ್ರಮುಖ ನಾಯಕರು ಕಾಂಗ್ರೆಸ್ ಬಿಟ್ಟು ಜೆಡಿಎಸ್ನತ್ತ ವಾಲಿದಾಗ ಅವರ ಬೆನ್ನಿಗೆ ನಿಂತು ಸಂತೈಸದೇ ಮೌನಕ್ಕೆ ಶರಣಾಗಿದ್ದು.
7. 2014 ರ ಲೋಕಸಭಾ ಚುನಾವಣೆಯಲ್ಲಿನ ಸೋಲಿನ ಬಳಿಕ ಯಾರಿಗೂ ತಿಳಿಯದ ಅಜ್ಞಾತ ಸ್ಥಳಕ್ಕೆ ತೆರಳಿ ವಾಸವಾಗಿದ್ದು.
8. ಇದರ ಮಧ್ಯೆ 2017 ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ತಮ್ಮ ರಾಜಕೀಯ ಗುರು ಎಸ್.ಎಂ. ಕೃಷ್ಣರ ಜೊತೆಗೂ ಒಡನಾಟವನ್ನು ಕಡಿಮೆ ಮಾಡಿಕೊಂಡಿದ್ದು.
9. ಡಿಕೆ ಸಹೋದರರು ಇರಬಹುದು, ಸಿಎಂ ಸಿದ್ಧರಾಮಯ್ಯ ಇರಬಹುದು, ಯಾರೊಂದಿಗೂ ಅಷ್ಟಾಗಿ ಬೇರೆಯದೇ ಅಂತರ ಕಾಯ್ದುಕೊಂಡಿದ್ದು.
10. ಇಷ್ಟು ಮಾತ್ರವಲ್ಲದೇ ಮಂಡ್ಯ ಜಿಲ್ಲೆಯ ಕಾಂಗ್ರೆಸ್ನ ನಾಯಕರು ತಮ್ಮ ಬೆನ್ನಿಗೆ ನಿಲ್ಲುತ್ತಿಲ್ಲ ಎಂಬ ಸತ್ಯ ಗೊತ್ತಿದ್ರೂ ಮೌನಕ್ಕೆ ಶರಣಾಗಿದ್ದು.
11. ಇನ್ನು ಕಳೆದ ವರ್ಷ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವುದು, ಪ್ರಚಾರ ಕಾರ್ಯದಲ್ಲಿ ತೊಡಗುವುದು ಮಾಡಿದ್ರೂ, ಅದು ತಮ್ಮ ಕೈ ಹಿಡಿಯದೇ ಇರುವುದು.
12. ಲೋಕಸಭಾ ಚುನಾವಣೆಯಲ್ಲಿ 2014 ರಲ್ಲಿ ರಮ್ಯಾ ಪರಾಭವಗೊಂಡಿದ್ರೂ, ಕಾಂಗ್ರೆಸ್ನ ಹೈಕಮಾಂಡ್ ನಾಯಕರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಸ್ಥೆ ಮಾಡಿತ್ತು.
13. ಅಲ್ಲಿಯೂ ಸರಿಯಾದ ಹೆಸರು ಮಾಡಲಾಗದೇ, ಸುಮ್ಮನಾದ ರಮ್ಯಾ.
14. ಸದ್ಯ ಸಿನಿಮಾರಂಗದ ನಂಟನ್ನು ಅಷ್ಟು ದೊಡ್ಡ ಪ್ರಮಾಣದಲ್ಲಿ ಇರಿಸಿಕೊಳ್ಳಲಾಗದೇ, ರಾಜಕೀಯದಲ್ಲೂ ಸಕ್ರಿಯರಾಗಿಲ್ಲದೇ ರಾಜಕೀಯ ಜೀವನವನ್ನೇ ಅಂತ್ಯಗೊಳಿಸಿಕೊಳ್ಳುತ್ತಿರುವ ರಮ್ಯಾ.
15. ಎಸ್.ಎಂ.ಕೃಷ್ಣ ಕೂಡ ಸದ್ಯ ಮಂಡ್ಯ ಜಿಲ್ಲೆಯ ರಾಜಕಾರಣದಿಂದಾಂತರ ಕಾಯ್ದುಕೊಂಡಿದ್ದು, ಸಿದ್ಧರಾಮಯ್ಯ, ಡಿಕೆ ಬ್ರದರ್ಸ್ ಕೂಡ ರಮ್ಯಾ ಬೆನ್ನಿಗೆ ನಿಲ್ಲದೇ ಇಂದು ಆರ್ಥಿಕವಾಗಿಯೂ ಬ್ಯಾಕ್ ಆಪ್ ಮಾಡಿಕೊಳ್ಳಲಾಗಿದೆ.
ಹೀಗೆ ಸಾಲು ಸಾಲು ತಮ್ಮದೇ ಆದ ತಪ್ಪಿನಿಂದ ತಮ್ಮ ರಾಜಕೀಯ ಹಾಗೂ ಹಾಗೂ ಸಿನಿಮಾ ಜೀವನವನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆಯೇ ಎಂಬುದಕ್ಕೆ ರಮ್ಯ ಅವರೇ ಉತ್ತರಿಸಬೇಕಿದೆ.ಇಂದು ಸಂಜೆ ಬಿಚ್ಚಿಟ್ಟಿದೆ ರಮ್ಯಾ ಅವರ ಹಿಂದಿನ ಹಾಗೂ ರಾಜಕೀಯ ಜೀವನದ ಬಗ್ಗೆ ಕಂಪ್ಲೀಟ್ ಮಾಹಿತಿ.