ಬೆಂಗಳೂರು: ಮಂಡ್ಯದಲ್ಲಿ ಕೈಗಾರಿಕಾ ಸ್ಥಾಪನೆ ಸಂಬAಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಂಡ್ಯ ಶಾಸಕ ರವಿಗಣಿಗ ನಡುವೆ ಆರೋಪ-ಪ್ರತ್ಯಾರೋಪ ಮಾತಿನ ಸಮರ ನಡೆದಿದೆ.
ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಸೂಕ್ತ ಸ್ಥಳವಿಲ್ಲ ಎಂದು ಕೇಂದ್ರ ಕೈಗಾರಿಕ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರು. ಇದಕ್ಕೆ ಪೂರಕವೆಂಬAತೆ ರಾಜ್ಯ ಸರ್ಕಾರ ಸದನದಲ್ಲಿ ಉತ್ತರ ನೀಡಿ ಕೈಗಾರಿಕಾ ಸ್ಥಾಪನೆಗಾಗಿ ಮಂಡ್ಯದಲ್ಲಿ ಸೂಕ್ತ ಸ್ಥಳವಿಲ್ಲ ಎಂದು ಸ್ಪಷ್ಟಪಡಿಸಿತ್ತು ಎನ್ನಲಾಗಿದೆ.
ಇದಕ್ಕೆ ಪ್ರತಿಯಾಗಿ ಮಂಡ್ಯ ಕ್ಷೇತ್ರದ ಶಾಸಕ ರವಿಗಣಿಗ ಅವರು ಮಂಡ್ಯದಲ್ಲಿ ೧೦೦ ಎಕರೆ ಸ್ಥಳ ಕೈಗಾರಿಕೆ ಸ್ಥಾಪನೆಗೆ ನೀಡಲಾಗುವುದು. ಅಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.ಸ್ಥಳ ನೀಡುವುದರ ಜತೆಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಈ ವಿಷಯ ಜ್ಯಾತ್ಯಾತೀತ ಜನತಾದಳದವರಿಗೂ, ಕಾಂಗ್ರೆಸ್ನವರಿಗೂ ತೀವ್ರ ಸವಾಲಾಗಿ ಪರಿಣಮಿಸಿದೆ. ಕೈಗಾರಿಕಾ ಸ್ಥಾಪನೆಗೆ ಜಾಗವಿಲ್ಲವೆಂದು ರಾಜ್ಯ ಸರ್ಕಾರ ಹೇಳಿದೆ ಎಂದು ಜೆಡಿಎಸ್ನವರು ಹೇಳತೊಡಗಿದ್ದಾರೆ. ಆದರೆ ಜಾಗ ಪತ್ತೆ ಹಚ್ಚುವುದಕ್ಕೆ ಸಂಬAಧಪಟ್ಟAತೆ ಶಾಸಕ ರವಿಗಣಿಗ ಅವರು ಜಿಲ್ಲಾಧಿಕಾರಿಯವರನ್ನು ಮಂಡ್ಯದ ಶಾಸನೂರು ಬಿಳಿಯಿರುವ ವಿ.ಸಿ.ಫಾರ್ಮಾ ಕಾಡಾ ಪ್ರದೇಶದಲ್ಲಿ ೧೦೦ ಎಕರೆ ಜಾಗವಿರುವುದಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆ ಪ್ರದೇಶದಲ್ಲಿ ಕೈಗಾರಿಕೆಗೆ ಸೂಕ್ತ ಸ್ಥಳವಾಗಿದ್ದು, ಅಲ್ಲಿಗೆ ಬೇಕಾದ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ಕೈಗಾರಿಕೆ ಸ್ಥಾಪನೆ ಸಂಬAಧ ಕೈಗಾರಿಕಾ ಸಚಿವರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಂಡ್ಯ ಕ್ಷೇತ್ರದ ಶಾಸಕ ಮಾತಿನ ಸಮರಕ್ಕೆ ಎಡೆಮಾಡಿಕೊಟ್ಟಿದೆ.
ಕೈಗಾರಿಕಾ ಸ್ಥಾಪನೆ ವಿವಾದ: ಎಚ್ಡಿಕೆಗೆ ಮಂಡ್ಯ ಶಾಸಕ ರವಿಗಣಿಗ ಸವಾಲ್



