ಬೆಂಗಳೂರು: ಕುಮಾರ ಕೃಪಾ ಅತಿಥಿಗೃಹದ ಸ್ವಾಗತಕಾರರಾದ ಮಂಜುನಾಥ್. ಕೆ.ಆರ್ ಅವರಿಗೆ ಕರ್ನಾಟಕ ಸುಮನ ಸಾಧಕ ಪ್ರಶಸ್ತಿ 2026 ನೀಡಿ ಗೌರವಿಸಲಾಯಿತು. ಕರ್ನಾಟಕ ಸರ್ಕಾರದ ಶಿಷ್ಟಾಚಾರ ಇಲಾಖೆಯಲ್ಲಿ ಮಂಜುನಾಥ್.ಕೆ.ಆರ್ ಅವರು 33 ವರ್ಷಗಳ ಕಾಲ ಸಲ್ಲಿಸಿದ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸುಮನ ಸಾಧಕ ಪ್ರಶಸ್ತಿ 2026 ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಧರ್ಮಪತ್ನಿ ಬಿ.ಎನ್.ಶ್ರೀಲತಾ, ಪುತ್ರ ಡಾ ಭರತ್, ಸೊಸೆ ಶ್ರೀಮತಿ ಬಿಂದು ಭರತ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಉಪಾಧ್ಯಕ್ಷ ಪ್ರಶಾಂತ್ ಕುಮಾರ್, ಕುಮಾರ ಕೃಪ ಅತಿಥಿ ಗೃಹದ ಅಧೀಕ್ಷಕ ಕೆ. ಮಂಜುಕುಮಾರ್, ಲೆಕ್ಕಪತ್ರ ಅಧೀಕ್ಷಕ ಚೇತನ್ ಕುಮಾರ್ ಈ ಸಂಧರ್ಭದಲ್ಲಿ ಹಾಜರಿದ್ದರು.
ಮಂಜುನಾಥ್.ಕೆ.ಆರ್ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀ ಸಿ.ಎಸ್.ಷಡಾಕ್ಷರಿ ಅವರು ಪ್ರಶಸ್ತಿಗೆ ಶಿಫಾರಸು ಮಾಡಿ ಪ್ರಶಸ್ತಿ ಲಭಿಸಲು ಕಾರಣಿಭೂತರಾಗಿದ್ದಾರೆ. ಅವರಿಗೆ ವಿಶೇಷ ಧನ್ಯವಾದಗಳು.
2026 ನೇ ಸಾಲಿನ ಕರ್ನಾಟಕ ಸುಮನ ಸಾಧಕ ಪ್ರಶಸ್ತಿ ಗೌರವಕ್ಕೆ ಭಾಜನರಾದ ಮಂಜುನಾಥ್.ಕೆ.ಆರ್.



