ಶ್ರೀ ಸೋಮೇಶ್ವರಸ್ವಾಮಿ ದೇವಾಲಯ ಜೀರ್ಣೋದ್ದಾರ ಸಮಿತಿ ಮಣ್ಣೆ (ಮಾನ್ಯಪುರ), ನೆಲಮಂಗಲ ತಾ, ಬೆಂಗಳೂರು ಗ್ರಾ. ಜಿಲ್ಲೆ. ಇವರ ವತಿಯಿಂದ ಗ್ರಾಮದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಮುಂಭಾಗ ನಿರ್ಮಿಸಿರುವ ಪ್ರವೇಶ ದ್ವಾರ ಮತ್ತು ದೇವಾಲಯದ ರಾಜಗೋಪುರ ಕಳಶ ಪ್ರತಿಷ್ಠಾಪನೆಯ ಕಾರ್ಯಕ್ರಮವು ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ಜರುಗಿತು.
ನಾನಾ ರೀತಿಯ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮಣ್ಣೆ ಗ್ರಾಮಸ್ಥರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವು ಮೆರುಗು ಪಡೆಯಿತು. ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು. ಮಹದೇವಪ್ಪನವರು ದಾಸೋಹ ವ್ಯವಸ್ಥೆ ಮಾಡಿದ್ದರು. ನಟರಾಜುರವರು ಪೂಜಾ ಕೈಂಕರ್ಯ ನೆರೆವೇರಿಸಿಕೊಟ್ಟರು. ದಿ. ನಂಜುಂಡಪ್ಪ ಮತ್ತು ಮಕ್ಕಳು, ಶ್ರೀ ಗಿರಿಯಪ್ಪಗೌಡರು ಹಾಗೂ ಗೋಪಾಲಗೌಡರು ಗೋಪುರದ ಸೇವಾಕರ್ತರಾಗಿದ್ದಾರೆ.
ದಾನಿಗಳು: 1.500 ಅಡಿ ಗ್ರಾನೈಟ್ : ರುದ್ರೇಶ್, ಭೈರಸಂದ್ರ, ಶಶಿಧರ ಸ್ವಾಮಿ, ಮಣ್ಣೆ 2.1200 ಕೆ.ಜಿ. ಕಬ್ಬಿಣ : ಶ್ರೀ ಪ್ರಭು, ಎಸ್.ಕೆ. ಸ್ಟೀಲ್ಸ್, ಡಾಬಸ್ ಪೇಟೆ ಕೈಗಾರಿಕಾ ಪ್ರದೇಶ 3.ದೇವಾಲಯದ ಒಳಗೆ ಸ್ಟೀಲ್ ರೈಲಿಂಗ್ಸ್ : ಶ್ರೀಮತಿ ವಿ. ಗಂಗಮ್ಮನವರು ಮಣ್ಣೆ
ದೇವಾಲಯದ ಜೀರ್ಣೋದ್ದಾರ ಸಮಿತಿಯ ಬಾಳೇ ಗೌಡ, ಶಿವಕುಮಾರ್ ಎಂ, ಪ. ಗಂಗಪ್ಪ, ಮಹಾದೇವಪ್ಪ, ನಟರಾಜು, ಬಸವಲಿಂಗಸ್ವಾಮಿ, ವಿಶ್ವಾನಂದ.ಎಂ.ಎನ್, ಪಂಚಾಕ್ಷರಿ, ಷಣ್ಮಖಸ್ವಾಮಿ, ಆರ್. ಸುಗ್ಗರಾಜು, ಮದನ್, ಸಿದ್ದಾರ್ಥ, ಗಂಗಾಧರ್ ಹೆಚ್, ಪುನೀತ್, ರಂಗನಾಥ ಎಸ್. ಮುರುಳೀಧರ್ ಎನ್.ಕೆ, ಉಮೇಶ್(ಶಿಕ್ಷಕರು), ಎಂ ಎಸ್. ರಾಜಶೇಖರ್, ಪ್ರದೀಪ್.ಎಂ.ಎಸ್, ಕಲ್ಲೇಶ್, ಲೇಪಾಕ್ಷಿ ಎನ್, ಉಮೇಶ್(ಆರ್ಚಕರು), ಬಸವರಾಜು, ಪ್ರಸನ್ನ ಪಿ ರವರು ಹಗಲು-ರಾತ್ರಿ ಶ್ರಮವಹಿಸುವುದರ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಭಾಜನರಾದರು.
ಇದೇ ಸಂದರ್ಭದಲ್ಲಿ ನೆಲಮಂಗಲ ಶಾಸಕರಾದ ಶ್ರೀನಿವಾಸ್, ಮಾಜಿ ಶಾಸಕರಾದ ಎಂ ವಿ ನಾಗರಾಜು, ಎಂ ವಿ ಪಾತರಾಜು, ಲೇಖಕ ಚಿಂತಕ ಮಣ್ಣೆ ಮೋಹನ್, ಸತೀಶ್ ಎಂ ಟಿ, ಪುಂಡರಿಕಾಕ್ಷ, ಶಿವಾನಂದ ಶರ್ಮ, ಎಂ ಪಿ ಕುಮಾರಸ್ವಾಮಿ, ರಮೇಶ್ ಎಂ ಎಸ್ ,ಎಂ ವಿ ಸತೀಶ್, ಎಂ ಎನ್ ಕುಮಾರಸ್ವಾಮಿ, ರಂಗಸ್ವಾಮಿ (ಕೆರೆ ಬಂಡಿ) ,ಶಿವರಾಂ, ಗೋವಿಂದರಾಜು, ಜಯಮ್ಮ ಮರಿತಿಮ್ಮಯ್ಯ, ಸರೋಜಮ್ಮ ರಾಮಾಂಜನೇಯ, ಪ ರಾಮಾಂಜಿನಯ್ಯ, ಎನ್ ನಾರಾಯಣಪ್ಪ, ಕರಿಗಿರಿಯಪ್ಪ, ಬಿ ಶಿವರಾಂ, ರವೀಂದ್ರ, ಜಿ ವೆಂಕಟೇಶ್, ಆರ್ ಜಯರಾಮ್, ಕಾಳಿ ಪ್ರಸಾದ್, ಲಕ್ಷ್ಮಿಕಾಂತ್, ಸುಪ್ರಿಯಾ ಶಂಕರ್, ಕೃಷ್ಣಮೂರ್ತಿ, ಚಿಕ್ಕೇಗೌಡರು, ಚಂದ್ರಶೇಖರ್,ಎಂ ವಿ ಗೋಪಾಲ್, ಸೌಮ್ಯ ವೀರಚಿಕ್ಕಯ್ಯ,ಮಂಜುನಾಥ್ ಟಿ, ರುದ್ರೇಶ್, ಬೃಂಗೇಶ್ ಮುಂತಾದ ಗಣ್ಯರನ್ನು ಸನ್ಮಾನಿಸಲಾಯಿತು.