ಬೆಂಗಳೂರು: ರಾಜ್ಯವನ್ನು ಅತೀ ಹೆಚ್ಚು ದಿನಗಳು ಆಳಿದ ಮುಖ್ಯಮಂತ್ರಿ ಎಂದು ದಾಖಲೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಇಂದು ಬೆಳಿಗ್ಗಿನಿಂದಲೇ ಸಚಿವರು, ಶಾಸಕರು ಕೆಲ ಗಣ್ಯರು ಮುಖ್ಯಮಂತ್ರಿ ನಿವಾಸ ಕಾವೇರಿಗೆ ಆಗಮಿಸಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸಚಿವರಾದ ಆರ್.ಬಿ. ತಿಮ್ಮಾಪುರ, ಶರಣಪ್ರಕಾಶ್ ಪಾಟೀಲ್, ಡಿ. ಸುಧಾಕರ್, ಹಿರಿಯ ಶಾಸಕ ಟಿ.ಬಿ. ಜಯಚಂದ್ರ, ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸೇರಿದಂತೆ ಹಲವರು ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯಗೆ ಅಭಿನಂದನೆ ಮಹಾಪೂರ



