ಹನೂರು: ಪಟ್ಟಣದ ಜೆಡಿಎಸ್ ಕಚೇರಿ ಆವರಣದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ರಾದ ಎಂ ಆರ್ ಮಂಜುನಾಥ್ ನೇತೃತ್ವದಲ್ಲಿ ಹಲವು ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ದಿ .ಹೆಚ್ ನಾಗಪ್ಪ ರವರ ಕಟ್ಟಾ ಬೆಂಬಲಿಗರಾದ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಬಸಪ್ಪನ ದೊಡ್ಡಿ ಬಸವರಾಜು ಮಾತನಾಡಿ ಕಳೆದ 35 ವರ್ಷಗಳಿಂದ ದಿ ಹೆಚ್ ನಾಗಪ್ಪ ಕುಟುಂಬದೊಡನೆ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದೇನೆ.
ಇತ್ತೀಚಿಗೆ ದಿ. ಹೆಚ್. ನಾಗಪ್ಪನವರ ಕುಟುಂಬದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಬೇಸತ್ತಿದ್ದೇನೆ ಪ್ರಮುಖವಾಗಿ ಮಂಜುನಾಥ್ ರವರ ಜನಪರ ಕಾರ್ಯಗಳು ಹಾಗೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇನೆ.
ಮುಖಂಡ ಗುರುಸ್ವಾಮಿ ಮಾತನಾಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು 15 ತಿಂಗಳು ರೂಪ ಗೋವಿಂದರಾಜುರವರಿಗೆ ಅಧ್ಯಕ್ಷರನ್ನು ಮಾಡುವುದಾಗಿ ಭರವಸೆ ನೀಡಿದ್ದರು ಆದರೆ ಇವಾಗ ಯಾವುದೇ ತರದ ಅಧ್ಯಕ್ಷ ಸ್ಥಾನವನ್ನು ರೂಪ ಗೋವಿಂದರಾಜ್ ರವರಿಗೆ ನೀಡಿಲ್ಲ ಆದ್ದರಿಂದ ನಮ್ಮ ಆದಿಜಾಂಬವ ಸಮುದಾಯದವರಿಗೆ ಮೋಸ ಮಾಡಿದ್ದು ಇದರಿಂದ ಬೇಸತ್ತು ನಮ್ಮ ಆದಿ ಜಾಂಬವ ಸಮುದಾಯದ ಮುಖಂಡರುಗಳು ಮಂಜುನಾಥ್ರವರ ಪಕ್ಷ ಸಂಘಟನೆ , ಜನಪರ ಕಾರ್ಯಗಳನ್ನು ಮೆಚ್ಚಿ ಹಾಗೂ ಎಲ್ಲಾ ಜನಾಂಗದವರನ್ನು ಸಮಾನವಾಗಿ ಕಾಣುತ್ತಿದ್ದಾರೆ ಇದರಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇವೆ.
ಜೆಡಿಎಸ್ ಅಭ್ಯರ್ಥಿ ಎಂ.ಆರ್. ಮಂಜುನಾಥ್ ಮಾತನಾಡಿ, ಕಳೆದ ಅನೇಕ ದಿನಗಳಿಂದ ದಿನಂಪ್ರತಿ ಕಾಂಗ್ರೆಸ್ ಬಿಜೆಪಿ ಪಕ್ಷದ ಪ್ರಬಲ ಮುಖಂಡರುಗಳು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರುವುದು ಆಶಾದಾಯಕ ವಾತಾವರಣವಾಗಿದೆ. ಇಂದು ಸೇರ್ಪಡೆಗೊಂಡ ವೀರಶೈವ ಲಿಂಗಾಯತ ಪ್ರಬಲ ಮುಖಂಡರಾದ ಬಸವರಾಜು ಇನ್ನಿತರರು ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಹೆಚ್ಚಿನ ಬಲ ತುಂಬಲಿದೆ. ಕ್ಷೇತ್ರದಲ್ಲಿ ಬದಲಾವಣೆಯಾಗಬೇಕು. ಪ್ರಮುಖವಾಗಿ ಮೂಲಭೂತ ಸೌಕರ್ಯಗಳ ಜೊತೆಗೆ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವುದೇ ನನ್ನ ಗುರಿಯಾಗಿದೆ ಎಂದು ತಿಳಿಸಿದರು.
ಇದೆ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮತ್ತಿಪುರ ಮಾದೇವಯ್ಯ, ಮಾದೇವಸ್ವಾಮಿ, ನಾಗರಾಜು, ಮರಿಯಾಪುರ ಹರಳಪ್ಪ, ಪ್ರಕಾಶ್, ಅಲಗಾಪುರ ಶಿವಲಂಕಾರಿ, ಎಲ್ಲೇಮಾಳ ಗ್ರಾಮ ಪಂಚಾಯತಿ ಸದಸ್ಯ ವೆಂಕಟರಾಜು, ಚಿಂಚಳ್ಳಿ ವೀರಪ್ಪ ಚಾರಿ, ಮುನಿಸ್ವಾಮಿ, ಸೋಮಣ್ಣ, ಹೊಸಳ್ಳಿ ಮಾದೇವಣ್ಣ ಹಾಗೂ ಪಟ್ಟಣದ ಆದಿ ಜಾಂಬವ ಸಮುದಾಯದ ಮುಖಂಡರಾದ ಕುಳ್ಳಯ್ಯ ಸೋಮಣ್ಣ ಗವಿಸಿದ್ದ ,ರಾಜು,ಹಾಗೂ ಯುವಕರು ಚಂಗವಾಡಿ ಗ್ರಾಮದ ಮುಖಂಡರು ಇನ್ನಿತರರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಸದಸ್ಯ ಬಾಬು, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಮುಖಂಡರುಗಳಾದ ಶಾಗ್ಯ ರವಿ, ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
Leave a Review