ದೇವನಹಳ್ಳಿ: ಹಲವು ಪಕ್ಷಗಳನ್ನು ತೊರೆದು ಕಾಂಗ್ರೆಸ್ ತತ್ವ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆ ಯಾದರು, ಅನ್ಯ ಪಕ್ಷಗಳ ನಾಯಕರು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.ದೇವನಹಳ್ಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಇವರು ನಮ್ಮ ಪಕ್ಷದ ಸಿದ್ಧಾಂತ, ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿ ಪಕ್ಷಕ್ಕೆ ಬಂದಿದ್ದಾರೆ.
ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಎಲ್ಲ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂದರು.ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕೊಟ್ಟಿದೆ ಮಂದಿನ ದಿನಗಳಲ್ಲಿ ವಿಜಯಪುರದ ಪ್ರತಿ ವಾರ್ಡಿಗೂ ತಾರತಮ್ಯವಿಲ್ಲದೇ ಪಕ್ಷಾತೀತವಾಗಿ ಅನುದಾನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ವಿಜಯಪುರದ ಮಹೇಶ್, ಅಜಾಂಪಾಷಾ,ಜಬೀ ಉಲ್ಲಾ ಸಾಬ್, ಮನ್ವರ್ ಪಾಷಾ ಹಾಗೂ ಅಬ್ಸಾಂಪಾಷಾ ಸೇರಿದಂತೆ ಅವರ ಬೆಂಬಲಿಗರೊಡನೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ವಿ.ಮಂಜುನಾಥ್, ಸಿ.ಜಗನ್ನಾಥ್ ವಿ. ಶಾಂತಕುಮಾರ್, ಪ್ರಸನ್ನಕುಮಾರ್,ಎಸ್ ಜಿ ಮಂಜುನಾಥ್, ಸೋಮಣ್ಣ, ನರಸಿಂಹಮೂರ್ತಿ, ರಾಮಚಂದ್ರಪ್ಪ, ನಾಗೇಗೌಡ ಸೇರಿದಂತೆ ಪಕ್ಷದ ಹಲವಾರು ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.