`ಮಹಿಳಾ ಆಯೋಗ ಅಂದ್ರೆ ಎಷ್ಟೋ ಜನಕ್ಕೆ ಗೊತ್ತಿಲ್ಲ’ ಅನ್ನೋದೇ ಒಂದು ವಿಷಯ ವಾಗಿ ಒಂದು Group Of Concerned Women’s Collective ಇತ್ತೀಚೆಗೆ ಸ್ವಲ್ಪ ಗಂಭೀರ ವಾಗಿಯೇ ಯೋಚಿಸ್ತು ಅಂತ ಹೇಳ್ಬಾದು.
ಆಫ್ ಕೋರ್ಸ್, ಈ ಮೀಟಿಂಗ್ನ ಸಂಘಟಿಸಿದ್ದು ಸಾರಥಿ. ನಮ್ಮ ಜೊತೆ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮಹಿಳಾ ಸದಸ್ಯರು ಇರೋ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿ ಗೌಡ, ಉಪಾಧ್ಯಕ್ಷೆ ಡಾಕ್ಟರ್ ಶೀಲಾ ಕೃಷ್ಣ ಮೂರ್ತಿ, ಜನರಲ್ ಸೆಕ್ರೆಟರಿ ಶಶಿ ಕಲಾ, ಮಹಿಳಾ ಅಧ್ಯಯನ ಪ್ರೊಫೆಸರ್ ಡಾಕ್ಟರ್ ಶ್ರೀಮತಿ, ಡಾಕ್ಟರ್ ಶೋಭಾ ರಾಣಿ, ಆರ್ ವಿ ಲಾ ಯುನಿವರ್ಸಿಟಿ ಫೆಸರ್ ಡಾಕ್ಟರ್ ಯುಕ್ತಿ, ಆಯೋಗದ ಸದಸ್ಯರಲ್ಲಿ ಒಬ್ಬರಾದ ಗೌರಮ್ಮ , ಫ್ಯಾಮಿಲಿ ಕೌನ್ಸಿಲರ್ ಸುಜಾತ ಸುರೇಶ್ ಹಾಗು ಇನ್ನು ಒಂದಿಷ್ಟು ಮಹಿಳೆಯರು ಇದ್ರು ಅನ್ನಿ.
ಈ ಗ್ರೂಫ್ನಲ್ಲಿ ಯಾರ್ಯಾರು ಇದ್ರು ಅನ್ನೋಕೆ ಇದೊಂದು ಝಲಕ್.ಓಕೆ , ಇಷ್ಟು ಪೀಠಿಕೆ ಜೊತೆ ಒಂದು ವೇಳೆ ಆಯೋಗದ ಬಗ್ಗೆ ಗೊತ್ತಿದ್ರೆ ಆಯೋಗ ಹೇಗಿರಬೇಕು ಅಂತೀರಿ?,ಈ ಆಯೋಗ ಕೇವಲ ಕೌಟಂಬಿಕ ಕಲಹ, ದೌರ್ಜನ್ಯ ಗಳಿಗೆ ಮಾತ್ರ ಲಿಮಿಟ್ ಆಗ್ಬೇಕಾ ಅಥವಾ, ಕಾಲ ಕಳೆದಂತೆ ಹೊಸ ಹೊಸ ಪ್ರಾಬ್ಲಮ್ಮು ಇದರೊಳಗೆ ಸೇರಿಸ್ಕೋಬೇಕಾ. ಅಲ್ದೆ, ಆಯೋಗ ಎಂದ ಕೂಡಲೆ ತುಂಬಾ ಜನಕ್ಕೆ ಅದ್ರಲ್ಲೂ ಗ್ರಾಮಾಂತರ ಜನ್ರಿಗೆ ನೆನಪಿಗೆ ಬರೋದು ಗಂಡ ಹೆಂಡ್ತಿ ಜಗಳ ಅಂತ.
ಇಷ್ಟು ಸಾಲದು ಎಂಬಂತೆ ದರ್ಶನ್, ಜಾರಕಿಹೊಳಿ, ಪ್ರಜ್ವಲ್, ರೇವಣ್ಣ ತರಹ ಜನರ sex scandals ಅನಾವಶ್ಯಕವಾಗಿ ಮನೆ ಮನೆಯೊಳಗೆ ಹೊಕ್ಕಿಬಿಟ್ಟಿದೆ. ಹೀಗಾಗಿ ಜನ ಸಾಮಾನ್ಯರಿಗೆ ಆಯೋಗ ಅಂದ್ರೆ ತಪ್ಪು ಕಲ್ಪನೆ ಗಳಿವೆ. ಇಷ್ಟಾದರೂ ವ್ಯವಸ್ಥಿತವಾಗಿ ಜನರಿಗೆ ಜಾಗ್ರತಿ ಮುಡಿಸೋ ಪ್ರಯತ್ನ ಕೂಡ ಆಯೋಗ ಮಾಡಿಲ್ಲ…. ಹೇಗಿದ್ರು ನಮ್ಮ ಟಿವಿ ಚಾನಲ್ ಗಳು ದಿನವಿಡೀ ಸಿನಿಮ , ರಾಜಕಾರಣಿ ಗಳಿಂದ ಆಗೋ ಕೊಲೆ, ರೇಪ್, ಶೋಷಣೆ ಇತ್ಯಾದಿ ಇತ್ಯಾದಿ ಹೇಳೋದ್ರಿಂದ ನಾವ್ಯಾಕೆ ಪ್ರತ್ಯೇಕವಾಗಿ ಆಯೋಗದ ಬಗ್ಗೆ ಹೇಳ್ಬೇಕು ಅನ್ನೊ ಧೋರಣೆಯಲ್ಲಿ ಅದು ಸಹ ಮೌನವಾಗಿಬಿಟ್ಟಿರ ಬಹುದು.
ಇದಕ್ಕೂ ಹೆಚ್ಚಿನ ಇತಿಹಾಸ ಇರೋ ಆಯೋಗದ ಡ್ಯೂಟಿ, ಜವಾಬ್ದಾರಿಗಳಾದ್ರು ಏನು?, ಇದರ ಕೆಲ್ಸ ಏನು?, ನಮ್ಮ ಕಾನೂನು, ಸಂವಿಧಾನದಲ್ಲಿ ಇರೋ ಸಲಹೆ ಸೂಚನೆಗಳನ್ನ ಆಯೋಗ ಪಾಲಿಸ್ತಾ ಇದ್ಯಾ?, ಅನ್ನೊ ಪ್ರಶ್ನೆ ಗಳಿಗೆ ಉತ್ತರ ಸೊನ್ನೆ. ಆಯೋಗ ಒಂದು Quasi Judiciary ಅಂದ್ರೆ ಅರೆ ನ್ಯಾಯಾಂಗ ಅಂತ. ಆದ್ರೆ ಇದು ಒಂದು ನ್ಯಾಯಾಂಗ ಅನ್ನೊ ರೀತಿ ಕೆಲ್ಸ ಮಾಡ್ತಾ ಇದೆಯಾ?, ಅನ್ನೋ ಪ್ರಶ್ನೆಗಳಿಗೆ ಉತ್ತರ ಹುಡುಕೋ ಪ್ರಯತ್ನವೇ ಮೊನ್ನೆಯ ಮೀಟಿಂಗ್ನಲ್ಲಿ ನಡೆದದ್ದು . ಒಟ್ಟಾರೆಯಾಗಿ ಹೇಳುವುದಾದರೆ ಬರೀ ಪ್ರಶ್ನೆಗಳೇ ಒಂದಾದ ಮೇಲೊಂದರಂತೆ ಹುಟ್ಟಿಕೊಂಡವೇ ಹೊರತು ಸ್ಪಷ್ಟ ಚಿತ್ರಣವೇ ದೊರಕಲಿಲ್ಲ.
ಈ ಮೀಟಿಂಗ್ ಏರ್ಪಾಡು ಮಾಡಿದ್ದಕ್ಕೂ ಸಹ ಕೆಲವು ಬಲವಾದ ಕಾರಣಗಳಿವೆ.
ಅವುಗಳ ಲ್ಲಿ ಕೆಲವು ಉದಾಹರಣೆ ಅನ್ನೋದಾದ್ರೆ ನಮ್ಮ NCRB – National Crime Report Buero ಪ್ರಕಾರ ಇತ್ತಿಚಿನ ವರ್ಷಗಳಲ್ಲಿ ಓದಿರೋ, ಆರ್ಥಿಕ ಒ-ಗಿ ಚೆನ್ನಾಗಿರೋ ಹೆಣ್ಣು ಮಕ್ಕಳು ಆತ್ಮ ಹತ್ಯೆ ಪ್ರಮಾಣ ಹೆಚ್ಚಾಗ್ತಿದೆ, ಮಾನಸಿಕ ಒತ್ತಡ , ಆರ್ಥಿಕ ಅಪರಾಧ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ, ಸೆಕ್ಸ ವರ್ಕರ್ಸ್ ಬಗ್ಗೆಯಾಗಲೀ, ಹಿರಿಯ ಮಹಿಳೆಯರ ಸುರಕ್ಷತೆ, ಒಟ್ಟಾರೆ ಆರೋಗ್ಯ, ಶಿಕ್ಷಣ ಇತ್ಯಾದಿ ವಿಷಯಗಳ ಕುರಿತು ಆಯೋಗ ಒಂಚೂರು ಯೋಚಿಸಿದೆಯಾ.
ಈ ಎಲ್ಲಾ ಕಾರಣದಿಂದಲೆ ಸಮಾನ ಮನಸ್ಸಿನ ಸ್ನೇಹಿತರು ಆಯೋಗದ ಬಗ್ಗೆ ಚರ್ಚೆ ಮಾಡೋಕೆ ಅಂತ ಸೇರಿದ್ವಿ, Group Of Concerned Women’s Collective ಒಟ್ಟಿಗೆ ಯೋಚಿಸೋ ಹಾಗಾಯಿತು, ಮುಂದೆ ಯಾವ ರೀತಿ ಕಾರ್ಯ ಕ್ರಮ ಕೈಗೊಳ್ಳ ಬೇಕು ಎಂಬುದು ಮುಖ್ಯವಾಗಿ ಚರ್ಚೆ ಆಯಿತು.
ಈ ಕಲೆಕ್ಟಿವ್ ಹುಟ್ಟಿಕೊಳ್ಳಲು ಮತ್ತೂಂದು ಬಲವಾದ ಕಾರಣ ಅಂದ್ರೆ ಈ ಬಾರಿಯ ನಮ್ಮ ಲೋಕಸಭಾ ಚುನಾವಣೆ. ಈ ಬಾರಿ ಚುನಾವಣೆಯಂತೂ ತೀರಾ ಅಸಹ್ಯ ರಾಜಕಾರಣ, ಗಲಾಟೆ, ರೇಪ್, ಮರ್ಡರ್ ಒಳ್ಳೇ ಕ್ರೈಂ ವೆಬ್ ಸೀರೀಸ್ ತರಹ ಇತ್ತು. ಹೀಗಾಗಿ ನಾವು ಕೆಲವು ಫ್ರೆಂಡ್ಸ್ ಮಹಿಳಾ ಆಯೋಗ ಏನು ಮಾಡ್ತಾ ಇದೆ ಅಂತ ಮಾತಾಡ್ತಾ ಇದ್ದೆವು. ಇನ್ನು ಕೆಲವ್ರು ಮಹಿಳಾ ಆಯೋಗ ಅಂದ್ರೇನು ಅಂತ ಕೇಳಿದ್ರು. ಇಂಥಹ ಟೈಂ ನಲ್ಲೆ ನಾನು ಈ ಸರ್ವೇ ಶುರು ಮಾಡಿದ್ದು.
ಕೇವಲ ಇಪ್ಪತ್ತು ಮೂವತ್ತು ಪರ್ಸೆಂಟ್ ಜನಕ್ಕೆ ಮಾತ್ರ ಗೊತ್ತಿದೆಯಾ? , ಆಯೋಗದ ಬಗ್ಗೆ ಓದು ಬರಹ ಗೊತ್ತಿರೋ ಜನರಿಗೂ ಗೊತ್ತಿಲ್ಲ ಅನ್ನೋ ವಿಷಯ ಸಹ ಕ್ರಮೇಣ ತಿಳಿದು ಬಂತು.
ಹಾಗಿದ್ರೆ ಸರ್ಕಾರ ಈ ಆಯೋಗನ ಯಾಕೆ ಬೆಳೆಸುತ್ತಿದೆ. 1995 ರಿಂದ ಈ ಬಿಳಿ ಆನೆ ಮಹಿಳೆ ಗೋಸ್ಕರ ಅಂತ ಏನು ಘನಂದಾರಿ ಕೆಲಸ ಮಾಡ್ತಾ ಇದೆ. ರಾಜಕಾರಣಿ , ಸಿನಿಮದವರಿಂದ ರೇಪ್, ಲೈಂಗಿಕ ಅನ್ಯಾಯ ಆದ್ರೆ ಮಾತ್ರ ದೊಡ್ಡ ಸುದ್ದಿ ಮಾಡಿ ಕ್ರಮೇಣ ಅದು ಮೌನ ತಾಳುತ್ತೆ . ಮೂರು ಕಾಸಿನ ಕಿಮ್ಮತ್ತೂ ಇಲ್ಲದಿರೊ ಈ ಆಯೋಗ ಆಯಾ ರಾಜಕೀಯ ಪಕ್ಷ ಗಳ ಮೌತ್ ಪೀಸ್ ಆಗಿಬಿಟ್ಟಿದೆಯೇ, ಇಂಥಹ ಮಹಿಳಾ ಆಯೋಗ ಬಗ್ಗೆ ಒಂದು ರಿವ್ಯೂ, ಪರಿಶೀಲನೆ ಅಗತ್ಯವಿದೆ ಅಲ್ಲವೇ?.
ಸಾರಥಿ ಸಂಸ್ಥೆಯ ಮುಖ್ಯಸ್ಥರಾದ ಟಿ.ಎಸ್. ಶಮಂತ ಅವರು ಆಯೋಜಿಸಿದ್ದ ಚರ್ಚಾ ಸಭೆಯಲ್ಲಿ ಬಹುತೇಕ ಸಂಸ್ಥೆಗಳವರು ಅಭಿಪ್ರಾಯಪಟ್ಟಿದ್ದಾರೆ. ವೃದ್ಧಿಸಂಸ್ಥೆ, ಅಖಿಲಕರ್ನಾಟಕ, ಸರ್ಕಾರಿ ನೌಕರರ ಮಹಿಳಾ ಸಂಘ, ಆರ್. ವಿ. ಲಾ ಯೂನಿರ್ವಸಿಟಿ ಮತ್ತಿತರರ ಸಂಘ ಸಂಸ್ಥೆಗಳ ಸದಸ್ಯರು, ಮಾಜಿ ಮಹಿಳಾ ಆಯೋಗದ ಸದಸ್ಯರು ಭಾಗವಹಿಸಿದ್ದರು.