ಸೀರೆ ಸಂತೆಗೆ ಉತ್ತಮ ಸ್ಪಂದನೆ | ಸೀರೆ ಖರೀದಿಗೆ ಮುಗಿಬಿದ್ದ ಮಹಿಳೆಯರು
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಹಾಗೂ ಸೀರೆ ಸಂತೆ ಸಮಿತಿ ನೇತೃತ್ವದಲ್ಲಿ ಭಗತ್ಸಿಂಗ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ದೊಡ್ಡಬಳ್ಳಾಪುರ “ಸೀರೆ ಸಂತೆ” ಶುಕ್ರವಾರ ಅದ್ದೂರಿಯಾಗಿ ಆರಂಭಗೊAಡಿದ್ದು, ಮೊದಲ ದಿನವೇ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಜನ ತಂಡೋಪತಂಡವಾಗಿ ಭಗತ್ಸಿಂಗ್ ಕ್ರೀಡಾಂಗಣಕ್ಕೆ ಭೇಟಿನೀಡುತ್ತಿದ್ದು, ತರಾವರಿ ಸೀರೆಗಳ ವೀಕ್ಷಣೆ ಹಾಗೂ ಖರೀದಿಸುವ ಭರಾಟೆ ಜೋರಾಗಿದೆ. ಒಟ್ಟು ೭೦ ಸೀರೆ ಮಳಿಗೆಗಳನ್ನು ವ್ಯವಸ್ಥಿತವಾಗಿ ಸ್ಥಾಪಿಸಲಾ ಗಿದ್ದು, ವಿವಿಧ ಮಾದರಿಯ ಸೀರೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ.
ದೊಡ್ಡಬಳ್ಳಾಪುರ ನಗರವು ಕಾಲಾನುಕಾಲದಿಂದ ನೇಕಾರಿಕೆಗೆ ಪ್ರಸಿದ್ದಿಯಾಗಿದ್ದು, ರಾಜ್ಯ ಮತ್ತು ರಾಷ್ಟç ಮಟ್ಟದ ಗಮನ ಸೆಳೆದಿದೆ. ಇಲ್ಲಿ ತಯಾರಾಗುವ ಸೀರೆಗಳು, ದೇಶದ ಇತರೆಡೆಗಳಿಗೆ ಸರಬರಾಜು ಆಗಿ ಬೇರೆ ಬೇರೆ ಬ್ರಾಂಡ್ ಗಳ ಹೆಸರಿನಲ್ಲಿ ಸ್ಥಳೀಯ ಮಾರುಕಟ್ಟೆ ಪ್ರವೇಶಿಸುತ್ತಿತ್ತು. ೩೦ ಸಾವಿರಕ್ಕೂ ಅಧಿಕ ನೇಕಾರರು ನಿತ್ಯ ಈ ಉದ್ದಿಮೆಯಲ್ಲಿ ತೊಡಗಿದ್ದು, ದೊಡ್ಡಬಳ್ಳಾಪುರ ಪ್ರತಿದಿನ ೫೦ ಸಾವಿರಕ್ಕೂ ಹೆಚ್ಚು ಸೀರೆಗಳನ್ನು ಉತ್ಪಾದಿಸಲಾಗುತ್ತದೆ.
ಆದರೆ ತನ್ನದೇ ಆದಂತಹ ಸ್ಥಳೀಯ ಬ್ರಾಂಡ್ ಮತ್ತು ಮಾರುಕಟ್ಟೆಯ ಕೊರತೆಯಿಂದ ನೇಕಾರರಿಗೆ ಅನಾನುಕೂಲವಾಗಿತ್ತು. ಈ ಹಿನ್ನಲೆಯಲ್ಲಿ ಸ್ಥಳೀಯ ಮಾರುಕಟ್ಟೆ ಹಾಗೂ ಬ್ರಾಂಡ್ ಒದಗಿಸುವ ಉದ್ದೇಶದ ಮೊದಲ ಹಂತವಾಗಿ “ಸೀರೆಸಂತೆ” ಆಯೋಜನೆ ಮಾಡಿರುವುದು ನೇಕಾರರಲ್ಲಿ ಸಂತಸ ಮೂಡಿಸಿದೆ.
ಈ ಕುರಿತು ಮಾತನಾಡಿದ ಸ್ಥಳೀಯ ಶಾಸಕ ಧೀರಜ್ ಮುನಿರಾಜು ಅವರು ೩ ದಿನಗಳು ಸೀರೆ ಸಂತೆಯಲ್ಲಿ ವಿವಿಧ ರೀತಿಯ, ದೊಡ್ಡಬಳ್ಳಾಪುರದಲ್ಲಿಯೇ ತಯಾರಾದ ಸೀರೆಗಳು ಮಾರಾಟಕ್ಕೆ ಲಭ್ಯವಿದೆ. ದೊಡ್ಡ ಬಳ್ಳಾಪುರದ ಕುಶಲಕರ್ಮಿ ನೇಕಾರರು ನೇಯ್ದ ಸೀರೆಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ನಿತ್ಯ ಸಂಜೆ ವಿವಿಧ ಸಾಂಸ್ಕöÈತಿಕ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ.
ಪ್ರಖ್ಯಾತ ಕಲಾವಿದರು ಪಾಲ್ಗಳ್ಳುತ್ತಿದ್ದಾರೆ ಮಕ್ಕಳಿಗೆ ಮನರಂಜನಾ ಆಟಗಳನ್ನೂ ವ್ಯವಸ್ಥೆ ಮಾಡಲಾಗಿದೆ, ನಗೆ ಹಬ್ಬ, ಮಕ್ಕಳ ಫ್ಯಾಷನ್ ಶೋ, ರಸ ಮಂಜರಿ ಜೋತೆಗೆ ಆಹಾರ ಮಳಿಗೆಗಳೂ ಇವೆ. ಕಾರ್ಯಕ್ರಮಗಳಿದ್ದು,ಶುಕ್ರವಾರ ಗಿಲ್ಲಿ ನಟನನ್ನು ನೋಡಲು ಮುಗಿದ್ದ ಸೀರೆ ಸಂತೆ ಉತ್ತಮ ಸ್ಪಂದನೆ ಸಿಕ್ಕಿರುವುದು ಸಂತಸ ತಂದಿದೆ,
ಉಳಿ ೨ ದಿನಗಳು ಸೀರೆ ಸಂತೆಗೆ ಬರುವವರಿಗೆ ಮನರಂಜನೆಗಾಗಿ ಶನಿವಾರ ಸಂಜೆ ಗಂಗಾವತಿ ಪ್ರಾಣೇಶ್, ಕಾಮಿಡಿ ಕಿಲಾಡಿಗಳು ಕಲಾ ತಂಡದಿಂದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಭಾನುವಾರ ಸಂಜೆ ರಘು ದೀಕ್ಷಿತ್ ತಂಡದವರಿಂದ ಸಂಗೀತ ಸಂಜೆ, ಮಕ್ಕಳ ಫ್ಯಾಷನ್ ಶೋ ಕಾರ್ಯಕ್ರಮ ಸೇರಿದಂತೆ ಇತರೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ, ಒಟ್ಟಾರೆ ಇದೊಂದು ವಿಶೇಷ ಹಾಗೂ ನೇಕಾರರು ಪಾಲಿನ ಸುದಿನ ಎಂದರು.
ಸೀರೆ ಸಂತೆಯಲ್ಲಿ ಕಾಮಿಡಿ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜನೆ



