ಬೆಂಗಳೂರು: ವೈಟ್ ಫೀಲ್ಡ್ ನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ಆರೋಪಿಯ ಪತ್ತೆಗೆ ನಗರ ಪೊಲೀಸರು ಮ್ಯಾಪಿಂಗ್ ನಡೆಸಿದ್ದಾರೆ.
ಆರೋಪಿ ಬಂದು, ಹೋದ ಮಾರ್ಗಗಳಲ್ಲಿ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ಮ್ಯಾಪಿಂಗ್ ನಡೆಸಲಾಗುತ್ತಿದೆ.
ಆರೋಪಿ ಎಲ್ಲಿಂದ ಪ್ರಯಾಣ ಶುರು ಮಾಡಿದ್ದ ಅಥವಾ ಎಲ್ಲಿ ಪ್ರಯಾಣ ಕೊನೆಗೊಳಿಸಿದ್ದಾನೆ ಎಂದು ಶೋಧಿಸಲಾಗುತ್ತಿದೆ. ಯಾವುದಾದರೂ ಒಂದು ಮಾರ್ಗದಲ್ಲಿ ಸುಳಿವು ಸಿಕ್ಕಿದರೂ ಆರೋಪಿ ಪತ್ತೆಗೆ ಅನುಕೂಲವಾಗಲಿದೆ. ಮುಖ ಕಾಣದಂತೆ ಆರೋಪಿ ಎಲ್ಲೆಡೆ ಎಚ್ಚರವಹಿಸಿರುವುದು ತಿಳಿದುಬಂದಿದೆ. ಎಲ್ಲೂ ಕೂಡ ತನ್ನ ಸಂಪೂರ್ಣ ಮುಖ ಕಾಣದಂತೆ ಆರೋಪಿ ಓಡಾಡಿದ್ದಾನೆ.
ಪರಿಶೀಲನೆ ನಡೆಸಿದ ಎಲ್ಲ ಸಿಸಿಟಿವಿ ದೃಶ್ಯಗಳಲ್ಲಿ ಕೂಡ ಅಲ್ಪ ಸ್ವಲ್ಪ ಅಷ್ಟೇ ಮುಖ ಕಾಣುತ್ತಿದೆ. ಎಲ್ಲಾದರೂ ಒಂದು ಕಡೆ ಸಂಪೂರ್ಣ ಮುಖ ಕಾಣಿಸುತ್ತದೆಯೇ ಎಂದು ಪೊಲೀಸರು ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದಾರೆ.