ಬೆಂಗಳೂರು ನಗರದಲ್ಲಿ ಇದೇ ಫೆ.25ರಂದು ತನ್ನ ಮಹತ್ವಾಕಾಕ್ಷಿ ರೇಸ್ ಫಾರ್ 7 ಕಾರ್ಯಕ್ರಮ ಆಯೋಜಿಸಲು ಆರ್ಗನೈಜೇಷನ್ ಫಾರ್ ರಿಯಲ್ ಡಿಸಿಸಸ್ ಇಂಡಿಯಾ ಸಕಲ ರೀತಿಯಲ್ಲಿ ಸಿದ್ಧವಾಗಿದೆ.
7 ಮ್ಯಾರಥೋನ್ ಕಿಲೋ ಮೀಟರ್ ಓಟವಾಗಿದ್ದು ಭಾರತದಲ್ಲಿರುವ ಅತಿ ವಿರಳವಾದ ಅನಾರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅತಿ ವಿರಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಚಿಕಿತ್ಸಾ ಸಂಪನ್ಮೂಲಗಳನ್ನು ಲಭ್ಯವಾಗಿಸುವುದು.
ಏಕಕಾಲಕ್ಕೆ ಇದು ಬೆಂಗಳೂರು ಮೈಸೂರು ದಾವಣಗೆರೆ ಹುಬ್ಬಳ್ಳಿ ಮುಂಬೈ ದೆಹಲಿ ಹೈದರಾಬಾದ್ ಕೋಲ್ಕತ್ತಾ ಚೆನ್ನೈ ಕೊಚ್ಚಿ ಪುಣೆ ಕ್ಯಾಲಿಕಟ್ ಮತ್ತು ಕೊಯಮತ್ತೂರ್ ನಗರಗಳಲ್ಲಿ ಆ ಯೋಜನೆ ಗೊಂಡಿರುವ ರೇಸ್ ಫಾರ್ ಸೆವೆನ್ ಮ್ಯಾರಥೋನ್ನಲ್ಲಿ 20,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಆ ಯೋಜನೆ ಗೊಂಡಿರುವ ಓಟವು ಅಶೋಕನಗರ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈ ಸ್ಕೂಲ್ ಮೈದಾನದಿಂದ ಆರಂಭವಾಗಲಿದೆ. ಬೆಳಿಗ್ಗೆ 7:00ಗೆ ಕನ್ನಡದ ಖ್ಯಾತ ನಟ ಶ್ರೀ ರಮೇಶ ಅರವಿಂದ್ ಅವರು ರೇಸ್ ಫಾರ್ ಸೆವೆನ್ ಮ್ಯಾರಥಾನ್ ಗೆ ಚಾಲನೆ ನೀಡಲಿದ್ದಾರೆ.
ಸಾಮಾನ್ಯ ಓಟಗಾರರಿಗೆ 699 ರೂ ಶುಲ್ಕ ನಿಗದಿಪಡಿಸಲಾಗಿದೆ ಇದೆ ವೇಳೆ ವಿದ್ಯಾರ್ಥಿಗಳು 399 ರೂ ರಿಯಾಯಿತಿ ಶುಲ್ಕ ಪಾವತಿಸುವ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು. ಈ ವಿಭಾಗದಲ್ಲಿ ಪಾಲ್ಗೊಳ್ಳುವವರಿಗೆ ಒಂದು ಕಿಟ್ ದೊರೆಯಲಿದ್ದು ಅದರಲ್ಲಿ ಒಂದು ಟಿ-ಶರ್ಟ್ ಒಂದು ಮೆಡಲ್ ಇ- ಪ್ರಮಾಣ ಪತ್ರ ಮತ್ತು ಕಾಂಪ್ಲಿಮೆಂಟರಿ ಉಪಹಾರ ಇರಲಿದೆ.