ಚನ್ನರಾಯಪಟ್ಟಣ: ಚನ್ನರಾಯಪಟ್ಟಣ ಸರ್ಕಾರಿಶಾಲೆಗೆ ನಾಳೆಯಿಂದ ಪೈಪ್ ಲೈನ್ ಅಳವಡಿಸಿ ನೀರಿನ ಸಮಸ್ಯೆ ಬಗೆ ಹರಿಸಲಾಗುವುದು ಎಂದುಗ್ರಾಪಂ ಅಧ್ಯಕ್ಷ ಮಾರೇಗೌಡ ಹೇಳಿದರು.ದೇವನಹಳ್ಳಿ ತಾಲೂಕು ಚನ್ನರಾಯ ಪಟ್ಟಣ ಮಹಾತ್ಮ ಗಾಂಧಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಮಕ್ಕಳಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳ ವಿದ್ಯಾಭ್ಯಾಸ ಕಲಿಯುವುದಕ್ಕೆ ಶಾಲೆಗೆಮೂಲಭೂತ ಸೌಕರ್ಯಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತದೆ.
ಶಾಲೆಯ ಕುಂದು ಕೊರತೆಗಳಬಗ್ಗೆ ಮಕ್ಕಳಲ್ಲಿ ಮಾಹಿತಿ ಪಡೆದುಕೊಂಡಿದ್ದೇವೆ ಶಾಲೆ ಆವರಣದಲ್ಲಿ ಸಾರ್ವಜನಿಕರಿಂದ ಯಾವುದಾದರೂ ತೊಂದರೆ ಯಾಗುತ್ತಿದ್ದಾರೆ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಶಾಲೆಯ ಮುಂಭಾಗದಲ್ಲಿ ಮೂರು ಕಡೆ ರಸ್ತೆ ಇರುವುದರಿಂದ ವಾಮಾಚಾರ ಮಾಡುತ್ತಾರೆ ಎಂಬ ಮಾತುಗಳು ವಿದ್ಯಾರ್ಥಿಗಳಿಂದ ಕೇಳಿ ಬಂದಿದೆ ಆ ರೀತಿ ಮಾಡಬಾರದೆಂದು ನಾಮಫಲಕ ಹಾಕುತ್ತೇವೆ ಹಾಗೂ ಶಾಲೆಗೆ ಕ್ರೀಡಾ ಸಾಮಗ್ರಿಗಳು ವಿಜ್ಞಾನ ಪ್ರಯೋಗಾಲಯ ಸಾಮಗ್ರಿಗಳು ಬೇಕೆಂದು ಕೇಳಿದ್ದಾರೆ ಇದಕ್ಕೆ ಹೆಚ್ಚು ಹೊತ್ತು ನೀಡುತ್ತೇವೆ ಎಂದರು ನಾವು ಸಹ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ ಈ ಶಾಲೆಯ ಬಗ್ಗೆ ಗೌರವ ಇದೆ ಶಾಲೆ ಸೌಕರ್ಯಕ್ಕೆ ಹೆಚ್ಚಿನ ಹೊತ್ತು ನೀಡುತ್ತೇವೆ ಎಂದರು.
ಶಾಲಾ ಆಡಳಿತ ಮಂಡಳಿ ನಿರ್ದೇಶಕ ಮುನಿರಾಜ್ ಮಾತನಾಡಿ ಗ್ರಾಮ ಸಭೆ ಮಾಡುವುದು ಮಕ್ಕಳಗೆ ಶಾಲೆಯಲ್ಲಿರುವ ಕುಂದು ಕೊರತೆಗಳ ಬಗ್ಗೆ ತಿಳಿಯುವುದಕ್ಕೆ ತಡೆಯ ಆಡಳಿತ ಗ್ರಾಮ ಪಂಚಾಯಿತಿ ಗಮನಕ್ಕೆ ತರುವುದಕ್ಕೆ ಮಕ್ಕಳ ಗ್ರಾಮ ಸಭೆ ಮಾಡುತ್ತಾರೆ ಮಹಾತ್ಮ ಗಾಂಧಿ ಕಂಡ ಕನಸು ಹಳ್ಳಿಗಳ ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿಯಾಗುತ್ತದೆ ಅದಕ್ಕಾಗಿ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳ ದಿಂದ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅನುದಾನ ಬರುತ್ತದೆ.
ಆಗ ಹಳ್ಳಿಗಳು ಅಭಿವೃದ್ಧಿಯಾಗುತ್ತವೆ ಗಾಂಧೀಜಿಯವರ ಕನಸು ಇದಾಗಿದೆ ಆದರೂ ಸ್ವತಂತ್ರ ಬಂದು 75 ವರ್ಷ ಕಳೆದರೂ ಇನ್ನು ಅಭಿವೃದ್ಧಿ ಆಗುತ್ತಲೇ ಇದೆ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆದರೆ ದೇಶ ಅಭಿವೃದ್ಧಿ ಆಗುತ್ತದೆ ಮಕ್ಕಳ ವಿದ್ಯಾಭ್ಯಾಸ ಯಾವುದೇ ಕಾರಣಕ್ಕೂ ಕುಂಟಿತ ಆಗಬಾರದು ಎಂದರು.
ಅಭಿವೃದ್ಧಿ ಅಧಿಕಾರಿ ಮುನಿರಾಜ್ ಮಾತನಾಡಿ ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಗ್ರಾಮ ಸಭೆ ಮಾಡುವುದು ಮಕ್ಕಳವಿದ್ಯಾಭ್ಯಾಸ ಕುಂಟಿತವಾಗಬಾರದು ಅವರಿಗೆ ಮೂಲಭೂತ ಸೌಕರ್ಯಗಳು ಸಿಗಬೇಕು ಮಕ್ಕಳು ಅಂಜಿಕೆ ಬಿಟ್ಟು ಶಾಲೆಯ ಕುಂದು ಕೊರತೆಗಳ ಬಗ್ಗೆ ಗ್ರಾಮ ಸಭೆಯಲ್ಲಿ ತಿಳಿಸಬೇಕು ಇದನ್ನು ಗ್ರಾಮ ಪಂಚಾಯಿತಿಯಲ್ಲಿ ಅನುಮೋದಿಸಿ ಪರಿಹರಿಸಲಾಗುವುದು ಎಂದರು.
ಭಾರತೀಯ ಮಾನವ ಹಕ್ಕುಗಳ ಹಿತ ರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ವೆಂಕಟರಮಣ್ಣಪ್ಪ ಮಾತನಾಡಿ ಶಾಲೆಗಳಲ್ಲಿ ಅಂಬೇಡ್ಕರ್ ಸಂವಿಧಾನದ ಅರಿವು ತಿಳಿಸಿಕೊಡಬೇಕು ಈಗಾಗಲೇ ತಾಲೂಕಿನಾದ್ಯಂತ ಅತ್ಯಂತ ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆಗಳು ನೆರವೇರಿಸಿ ಅದರಲ್ಲಿ ವಿಜೇತರಾದವರಿಗೆ ಅಂಬೇಡ್ಕರ್ ಭವನದಲ್ಲಿ 27/12/2023 ರಂದು ಬಹುಮಾನ ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ರತ್ನಮ್ಮ, ಮಾಜಿ ಅಧ್ಯಕ್ಷ ಸದಸ್ಯರಾದ ಶಿವಕುಮಾರ್, ವರಲಕ್ಷ್ಮಮ್ಮ, ದೀಪ, ಲಕ್ಷ್ಮಮ್ಮ, ಚಂದ್ರಕಲಾ, ಶಾಂತಮ್ಮ,ಶಾಲಾ ಮುಖ್ಯಶಿಕ್ಷಕಿ ಗಂಗಲಕ್ಷ್ಮಮ್ಮ, ಕರ ವಸಲಿಗಾರ ರಮೇಶ್ ಹಾಗೂ ಶಾಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಹಾಜರಿದ್ದರು.