ತಿಪಟೂರು: ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಎನ್.ಉಮೇಶ್ ರಾಜಶೆಟ್ಟಿಹಳ್ಳಿ ಎಂಬುವರಿಂದ ಅವರ ಪಿತ್ರಾರ್ಜಿತ ಸೈಟ್ಗೆ ಇ-ಸ್ವತ್ತು ಮಾಡಿಕೊಡಲು 11000 ಹಣಕ್ಕೆ ಪಿಡಿಓ ಪರಶುರಾಮ ರಾಮಪುರ ಡಿಮಾಂಡ್ ಮಾಡಿದ್ದರು.
ಮೊದಲು ಕಂತು 5500ರೂಗಳನ್ನು ಹಣಪಡೆಯಲಾಗಿತ್ತು ಇಂದು ಮಧ್ಯಾಹ್ನ 2-30ರ ಸುಮಾರಿನಲ್ಲಿ ಉಳಿಕೆ ಬಾಕಿ 5500 ಲಂಚದ ಹಣಪಡೆಯುವಾಗ ಲೋಕಾಯುಕ್ತ ಬಲೆಗೆ ತಿಪಟೂರು ತಾಲ್ಲೂಕಿನ ಮಸವಣಗಟ್ಟ ಪಿಡಿಓ ಪರಶುರಾಮ್ ರಾಮಪುರ ಇವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ, ಎಸ್ಪಿ ಲಕ್ಷ್ಮಿಗಣೇಶ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ ಉಮಾಶಂಕರ್ ದಾಳಿ ಮಾಡಿ ಲಂಚದ ಹಣ ಸಮೇತ ವಶಕ್ಕೆ ಪಡೆದಿದ್ದಾರೆ.
ಆ ವೇಳೆ ಡಿವೈಎಸ್ಪಿ ರಾಮಕೃಷ್ಣ, ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ ಸಿಬ್ಬಂದಿಗಳಾದ ನಾಗರಾಜು ರಾಘವೇಂದ್ರ, ಯತೀಗೌಡ, ರವಿ, ಭಾಸ್ಕರ, ನರಸಿಂಹರಾಜು, ಪ್ರಕಾಶ್, ಮಹಲಿಂಗಪ್ಪ, ಕರಿಯಪ್ಪ, ಇದ್ದರು.