ಕನಕಪುರ:ಪ್ರತಿಯೊಬ್ಬ ಮನುಷ್ಯ,ಪ್ರಾಣಿ,ಪಕ್ಷಿ ಸೇರಿದಂತೆ ಸಕಲ ವಸ್ತುಗಳಗಲ್ಲೂಲ್ಲೂ ದೇವರಿದ್ದು ಅವನ್ನು ಪೂಜಿ ಸುವ,ಗೌರವಿಸುವ ಮನೋಭಾವನೆಯನ್ನು ಸಮಾಜದ ಪ್ರತಿಯೊಬ್ಬ ಜೀವಿಯು ತಮ್ಮ ಜೀವನದಲ್ಲಿ ಬೆಳಸಿ ಕೊಳ್ಳುವಂತೆ ಮೇಲುಕೋಟೆಯ ಯದುಗಿರಿ ಯತಿರಾಜ ರಾಮಾನುಜಾಚಾರ್ಯ ಜೀ ರವರು ತಿಳಿಸಿದರು,
ಶ್ರೀವೈಷ್ಣವ ಮಹಾಸಭಾ, ಶ್ರೀ ಕೋದಂಡರಾಮಸ್ವಾಮಿ ವಿದ್ಯಾರ್ಥಿ ಸೇವಾ ಸಂಘ ಹಾಗೂ ತ್ರಿಮತಸ್ಥ ಬ್ರಾಹ್ಮಣ ಸಂಘದ ವತಿಯಿಂದ ನಗರದ ಕೋಟೆ ರಾಮ ಮಂದಿರ ದಲ್ಲಿ ಆಯೋಜಿಸಿದ್ದ ಶ್ರೀ ರಾಮಾನುಜಾಚಾರ್ಯ ತಿರು ನಕ್ಷತ್ರ ಹಾಗೂ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದ ಅವರು ನಮ್ಮ ಭಾರತ ದೇಶ ಸಂಸ್ಕೃತಿಯ ಬೀಡಾಗಿದ್ದು,ನಮ್ಮ ಧಾರ್ಮಿಕ ಪರಂಪರೆ ಇಡೀ ವಿಶ್ವದಲ್ಲೇ ಶ್ರೇಷ್ಠವಾದದು,ನಮ್ಮ ಸಂಸ್ಕೃತಿ ಹಾಗು ಪರಂಪರೆಯನ್ನು ಉಳಿಸಿ-ಬೆಳಸುವ ಕೆಲಸವನ್ನು ಪ್ರತಿ ಯೊಬ್ಬರು ಮಾಡಬೇಕಾಗಿದೆ ಎಂದರು,
ಶ್ರೀ ರಾಮಾನುಜಾಚಾರ್ಯರು ಸಕಲ ಜೀವಿಗಳು ಹಾಗು ವಸ್ತುಗಳಲ್ಲೂ ದೇವರನ್ನು ಕಾಣುವ ಮೂಲಕ ಜಾತಿ, ಮತ,ವರ್ಗ,ಲಿಂಗ ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗ ದಲ್ಲಿ ಹೋಗುವಂತೆ ಸಾರಿದ ಮಹಾನ್ ಪುರುಷರು,ಅಂದಿನ ಕಾಲದಲ್ಲೇ ಅಸ್ಪೃಶ್ಯತೆಯನ್ನು ಸಮಾಜದಿಂದ ಮೊಟ್ಟ ಮೊದಲು ತೊಡೆದು ಹಾಕಿದ ಕೀರ್ತಿ ಶ್ರೀಗಳದು, ಸಮಾಜದಲ್ಲಿ ತೀರ ಹಿಂದುಳಿದ ಜನಾಂ ಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ ಪ್ರವೇಶ ಮಾಡಿಸಿ, ಅವರನ್ನು ಶ್ರೇಷ್ಠ ಕುಲದವರು ಎಂದು ಕರೆದ ಮಹಾಮಹಿಮರು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದು ಮುಕ್ತಿ ಪಡೆಯೋಣ ಎಂದರು.
ಶ್ರೀ ವೈಷ್ಣವ ಮಹಾಸಭಾದ ಅಧ್ಯಕ್ಷ ಭಗವಾನ್ ರವರು ಮಾತನಾಡಿ ನೂರಿಪ್ಪತ್ತು ವರ್ಷಗಳ ತುಂಬು ಜೀವನ ವನ್ನು ನಡೆಸಿದ ಶ್ರೀ ರಾಮಾನುಜರು ತಮ್ಮ ಶ್ರೇಷ್ಠವಾದ ತ್ಯಾಗಮಯ ಜೀವನ,ಕೆಲಸ,ಬೋಧನೆಗಳಿಂದ ಇತಿಹಾಸ ನಿರ್ಮಾಪಕರೆನಿಸಿಕೊಂಡಿದ್ದಾರೆ. ಭಗವಂತನ ಪಾದಗಳಿಗೆ ಮೊರೆ ಹೋಗುವುದೇ ಏಕೈಕ ಮಾರ್ಗ ಎಂಬುದು ಅವರ ಅಚಲವಾದ ನಂಬಿಕೆಯಾಗಿದ್ದು,ವೇದ-ಉಪನಿಷತ್ತು ಸ್ಮೃತಿ,ಪುರಾಣ,ಆಗಮಗಳು ಇದನ್ನೇ ಪ್ರತಿಪಾದಿಸುತ್ತವೆ ಗುರು ರಾಮಾನುಜರ ಅಭಿಪ್ರಾಯ ಶ್ರೀ ಲಕ್ಷಿತ್ರಯೇ ನಾರಾಯಣನೆ ಪರತತ್ವ.
ಶ್ರೀ ಮಹಾಲಕ್ಷಿತ್ರ್ಮಯೆ ನಮ್ಮ ತಾಯಿಯಾಗಿದ್ದು ನಾವೆಲ್ಲರೂ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರಂತೆ ಇದ್ದು ಪ್ರತಿನಿತ್ಯ ಭಗವಂತನನ್ನು ನಂಬಿ,ಭಕ್ತಿಯಿಂದ ಧ್ಯಾನಿಸಿದರೆ ಮುಕ್ತಿ ಖಂಡಿತವಾಗಿ ದೊರಕುವುದು ಎಂಬುದಾಗಿದೆ ಎಂದರು,ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳ ಕಾಲ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ದೇವರಿಗೆ ಸುಪ್ರಭಾತ ಸೇವೆ,ಸ್ತೋತ್ರ ಪಾರಾಯಣ, ಪಂಚಾಮೃತ ಅಭಿಷೇಕ,ವೇದಾ ಪಾರಾಯಣ,ಅಷ್ಟೋತ್ತರ, ಪ್ರಬಂಧ ಸೇವೆ, ಬ್ರಹ್ಮೋಪದೇಶ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ನೆರವೇರಿಸಿ ಮಹಾಮಂಗಳಾರತಿಯ ನಂತರ ತೀರ್ಥ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಲಾಯಿತು,
ನಗರದ ಶ್ರೀ ಕೋದಂಡರಾಮಸ್ವಾಮಿ ವಿದ್ಯಾರ್ಥಿ ಸೇವಾ ಸಂಘದ ಅಧ್ಯಕ್ಷ ಡಾಕ್ಟರ್ ವಿಜಯಕುಮಾರ್,ವೆಂಕಟೇಶ
ಗೋಪಾಲಕೃಷ್ಣ,ಜಯಚಂದ್ರ,ಶ್ರೀ ತ್ರಿಮತಸ್ಥ ಬ್ರಾಹ್ಮಣ ಮಹಾಸಭಾದ ಶಿವಕುಮಾರ್,ಉದಯಶಂಕರ್,ನಗರದ ಶೃಂಗೇರಿ ಶಾಖಾಮಠದ ಗುರುಗಳಾದ ಪ್ರಕಾಶ್ ಮೂರ್ತಿ ರಂಗರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಭಕ್ತಮಹಾಶಯರು ಕಾರ್ಯಕ್ರಮ ದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.
Leave a Review