ಯಲಹಂಕ: ಕರ್ನಾಟಕದ ಎಲ್ಲಾ ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಕೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿಎ ನಾರಾಯಣ ಗೌಡ ಯುವ ಘಟಕ ಅಧ್ಯಕ್ಷ ಧರ್ಮರಾಜ ಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಜನಜಾಗೃತಿ ಹೋರಾಟ ಇಂದು ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದು ದೇವನಹಳ್ಳಿ ಬಳಿಯ ಸಾದಹಳ್ಳಿ ಗೇಟ್ ನಿಂದ ಆರಂಭವಾಗಿರುವ ಪ್ರತಿಭಟನೆ ಯಲಹಂಕ ಶಿವಾಜಿನಗರ ಕಮರ್ಷಿಯಲ್ ಸ್ಟ್ರೀಟ್, ಎಸ್ಪಿ ರೋಡ್ ಚಿಕ್ಕಪೇಟೆ ಮೆಜೆಸ್ಟಿಕ್, ಮೂಲಕ ಕಬ್ಬನ್ ಪಾರ್ಕ್ ವರೆಗೆ ಪ್ರತಿಭಟನಾ ರ್ಯಾಲಿ ಸಾಗಲಿದೆ.
ಕನ್ನಡ ನಾಮಫಲಕ ಇಲ್ಲದ ಕಡೆ ಮಸಿ ಬಳಿಯಲ್ಲಿರುವ ಕಾರ್ಯಕ್ರಮ ನಡೆಸಲಿದೆ. 25 ಸಾವಿರ ಜನ ಸೇರುವ ನಿರೀಕ್ಷೆ ಪ್ರತಿಭಟನೆಗೆ ರಾಜ್ಯದ ಮೂಲೆ ಮೂಲೆಯಿಂದ ಕರವೇ ಕಾರ್ಯಕರ್ತರು ಆಗಮಿಸಿದ್ದರು. ನಾರಾಯಣಗೌಡರು ಸೇರಿದಂತೆ ಪ್ರತಿಭಟನೆ ರ್ಯಾಲಿಯಲ್ಲಿ 25000 ಪ್ರತಿಭಟನೆಕಾರರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಕರ್ನಾಟಕದ ಇತಿಹಾಸದಲ್ಲಿ ನಾಮಫಲಕ್ಕಾಗಿ ನಡೆಯುತ್ತಿರುವ ಹೋರಾಟಗಳಲ್ಲಿ ಕರವೇ ನಡೆಸುತ್ತಿರುವ ಈ ಹೋರಾಟ ಬಹು ದೊಡ್ಡ ಮಟ್ಟದ ಹೋರಾಟ ಇದಾಗಿದ್ದು ಡಿಸೆಂಬರ್ 27 ರ ತನಕ ನೀಡಿದ್ದ ಗಡವು ಇಂದಿಗೆ ಮುಕ್ತಾಯವಾಗಲಿದ್ದು ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಸಾಗಲಿರುವ ಬೃಹತ್ ಪ್ರತಿಭಟನೆ ರ್ಯಾಲಿ ಹಿನ್ನೆಲೆ ಪೊಲೀಸ್ ಇಲಾಖೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು 1 ಎಸಿಪಿ, 6 ಇನ್ಸ್ಪೆಕ್ಟರ್,12 ಸಬ್ ಇನ್ಸ್ಪೆಕ್ಟರ್ ಸಿರಿದಂತೆ 1500ಕ್ಕೂ ಹೆಚ್ಚು ಪೊಲಿಸರನ್ನು ನಿಯೋಜನೆ ಮಾಡಿದ್ದಾರೆ.
ರ್ಯಾಲಿ ಸಾಗುವ ಮಾರ್ಗದ ಉದ್ದಕ್ಕೂ ಬ್ಯಾರಿ ಕ್ಯಾಡ್ಗಳನ್ನು ಅಳವಡಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆ ಎಸ್ ಆರ್ ಪಿ ತುಕಡಿ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಾದಹಳ್ಳಿ ಗೇಟ್ ಮೂಲಕವೇ ವಾಹನಗಳು ಸಂಚರಿಸಬೇಕಾಗಿರುವುದರಿಂದ ಪೊಲೀಸರು ವಿಮಾನ ನಿಲ್ದಾಣಕ್ಕೆ ತೆರಳಬೇಕಾದ ವಾಹನ ಸವಾರರಿಗೆ ಪ್ರತ್ಯೇಕ ಮಾರ್ಗಗಳನ್ನು ರೂಪಿಸಿದ್ದು ದೊಡ್ಡಮಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಮುನ್ನೆಚರಿಕೆ ವಹಿಸಿದ್ದಾರೆ.
ವರದಿ. ಮಂಜೇಶ್ ಕೆ ಎಸ್