ದೇವನಹಳ್ಳಿ: ಇಡೀ ರಾಜ್ಯದಲ್ಲಿ ಆಂಗ್ಲ ಪದಗಳ ಬಳಕೆ ಹೆಚ್ಚಾಗಿದ್ದು, ಕನ್ನಡ ಪದಗಳುಳ್ಳ ನಾಮಫಲಕಗಳು ಬಳಕೆ ಮಾಡಬೇಕು, ಇಲ್ಲವಾದಲ್ಲಿ ಇದೇ ಡಿ. 27ಕ್ಕೆ ಬೃಹತ್ ಜನಜಾಗೃತಿ ಪ್ರತಿಭಟನೆ ನಡೆಸಲಿದ್ದೇವೆ. ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಕನ್ನಡವನ್ನು ಬಳಸಿ ಅನ್ಯ ಭಾಷೆಗಳ ವ್ಯಾಮೋಹ ಮುಂದುವರಿಸಿದ್ದಲ್ಲಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಬಿ.ಕೆ ನಾರಾಯಣಸ್ವಾಮಿ ಎಚ್ಚರಿಸಿದ್ದಾರೆ.
ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮ ಪಂಚಾಯಿತಿಯ ಬಚ್ಚಳ್ಳಿ ಗ್ರಾಮದ ಬಿ.ಕೆ ನಾರಾಯಣಸ್ವಾಮಿಯವರ ಸ್ವಗ್ರಹದಲ್ಲಿ” ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಡಿ.27ರ ಬುಧವಾರ ಬೆಳಿಗ್ಗೆ 10:00 ಗಂಟೆಯಿಂದ ನಾಡಪ್ರಭು ಕೆಂಪೇಗೌಡ ಅಂತ ರಾಷ್ಟ್ರೀಯ ವಿಮಾನ ನಿಲ್ದಾಣ ಟೋಲ್ (ಸಾದಹಳ್ಳಿ ಗೇಟ್) ನಿಂದ ಕಬ್ಬನ್ ಪಾರ್ಕ್ ವರೆಗೆಬೃಹತ್ ಜನಜಾಗೃತಿ ಪ್ರತಿಭಟನೆ “ನಡೆಸುವ
ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಎಲ್ಲಾ ನಗರಗಳು ,ಪಟ್ಟಣಗಳು ,ಹೋಬಳಿ ಕೇಂದ್ರಗಳಲ್ಲಿ ಈಗ ಪರಭಾಷಿಕ ವ್ಯಾಪಾರಿಗಳದ್ದೇ ಆರ್ಭಟವಾಗಿದೆ, ಎಲ್ಲಾ ಅಂಗಡಿ ,ಮುಂಗಟ್ಟುಗಳ ನಾಮಫಲಕ ಕನ್ನಡದಲ್ಲಿರಬೇಕು ಎಂಬ ಸರ್ಕಾರದ ಆದೇಶಗಳಿದ್ದರೂ ಅದನ್ನು ಉಲ್ಲಂಘನೆ ಮಾಡಿ ಪರಭಾಷಿಕ ಉದ್ಯಮಿಗಳು ಮತ್ತು ವ್ಯಾಪಾರಿಗಳ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಹಾಗೂ ಖಾಸಗಿ ಕಂಪನಿಗಳು ಮಾಲ್ ಟೋಲ್ ಗಳಲ್ಲಿ ಕನ್ನಡಿಗರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿಲ್ಲ ಕಾರಣ ಉದ್ಯಮದ ಲಾಭವು ಒಂದೇ ಅವರ ಉದ್ದೇಶ ಕನ್ನಡಿಗರನ್ನು ನಿರಾಕರಣೆ ಮಾಡುತ್ತಿದ್ದಾರೆ ಅಂತಹವರಿಗೆ ಮುಂದಿನ ದಿನಗಳಲ್ಲಿ ಕರವೇ ನಾರಾಯಣಗೌಡರ ಬಣ ತಕ್ಕ ಪಾಠ ಕಲಿಸಲಿದ್ದಾರೆ, ಪರಭಾಷಿಕರು ಒಂದೇ ಕನ್ನಡದಲ್ಲಿ ವ್ಯವಹರಿಸಿ ಇಲ್ಲವೇ ಕರ್ನಾಟಕ ಬಿಟ್ಟು ತೊಲಗಿ ಎಂದು ನೇರವಾಗಿ ಕನ್ನಡಮನಸುಗಳು ಒಟ್ಟಾಗಿ ಹೇಳಲಿದ್ದಾರೆ ಅದಕ್ಕೆ ಹೆಚ್ಚು ಕಾಲ ಉಳಿದಿಲ್ಲ ಎಂದರು.
ಕರವೇ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ವೀರಾ ಶಿವಕುಮಾರ್ ಮಾತನಾಡಿ ರೈತರು ಬೆಳೆದ ಪದಾರ್ಥಗಳಿಗೆ ಟೋಲ್ ಸಮಸ್ಯೆ, ಕರ್ನಾಟಕದಲ್ಲಿ ಕನ್ನಡಿಗರನ್ನು ನಿರಾಕರಣೆ ಮಾಡುವುದು, ಖಾಸಗಿ ಕಂಪನಿಗಳಲ್ಲಿ ಕನ್ನಡಿಗರನ್ನು ಉದ್ಯೋಗಕ್ಕೆ ತೆಗೆದುಕೊಳ್ಳದಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದು ಕನ್ನಡಿಗರನ್ನು ನಿರಾಕರಣೆ ಮಾಡಲಾಗುತ್ತಿದೆ ಅಂತಹ ಖಾಸಗಿ ಕಂಪನಿಗಳಾದ ದೇವನಹಳ್ಳಿಯ ಬ್ರಿಗೇಡ್ ಆರ್ಚರ್ಡ್ಸ್, ಇರಾನಂದಿನಿ, ಓಝೋನ್ ಹರ್ಬನ್, ಗಾರ್ಡೆಜ್ ರಾಯಲ್ ಹುಡ್ ಸೇರಿದಂತೆ ಮಾಲ್ಗಳಲ್ಲಿ ಅನ್ಯ ಭಾಷೆಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಂಡು ಕನ್ನಡಿಗರ ಅಸ್ಮಿತೆಯನ್ನು ಅಪಮಾನಿಸುತ್ತಿದ್ದಾರೆ ಇಂಥವರ ವಿರುದ್ಧ ಕರವೇ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಎಚ್ಚರಿಕೆ ನೀಡೋಣ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಅಂಬರೀಶ್ ಗೌಡ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಲೋಕೇಶ್, ತಾಲೂಕು
ಅಧ್ಯಕ್ಷ ಬಿ.ಟಿ ಅನಿಲ್ ಕುಮಾರ್ ಉಪಾಧ್ಯಕ್ಷ ವೆಂಕಟೇಶ್, ಕಾರ್ಮಿಕ ಘಟಕದ ಅಧ್ಯಕ್ಷ ಶಿವಕುಮಾರ್, ರೈತ ಘಟಕ ಅಧ್ಯಕ್ಷ ಶಿವಕುಮಾರ್ ಆರಾಧ್ಯ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆನೇತ್ರಾ, ಉಪಾಧ್ಯಕ್ಷ ಶೈಲಮ್ಮ ಯುವ ಘಟಕದ ಅಧ್ಯಕ್ಷ ಗೋಖರೆ ಸತೀಶ್ ಶ್ರೀನಿವಾಸ್ ಮಾರೇಗೌಡ ಸೇರಿದಂತೆ ಮತ್ತಿತರರು ಇದ್ದರು.