ಬೆಂಗಳೂರು: ರವಿಕಿರಣ ಸಾಹಿತ್ಯ ಪ್ರತಿಷ್ಠಾನ, ಶ್ರೀ ವಿದ್ಯಾಗಣಪತಿ ಗಮಕ ಶಿಕ್ಷಣಾಲಯ, ಪ್ರತಿಭಾ ಹೊಂಗಿರಣ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ರವರ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯ ಕ್ರಮದಲ್ಲಿ ಜೈನ್ ವಿಶ್ವವಿದ್ಯಾಲಯದ ಡೀನ್ ಡಾ.ರಜಿನಿ ಜಯರಾಂರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾಸ್ತಿ ಅವರ ಬರಹಗಳ ಕುರಿತು ಮಾತನಾಡಿದರು.
ಸಣ್ಣ ಕತೆಗಳ ಜನಕರಾಗಿ ಸರಳವಾಗಿ ಎಲ್ಲವಯೋಮಾನದವರಿಗೂ ಸೂಕ್ತವಾಗುವ ಕಥೆಗಳನ್ನು ರಚಿಸಿದ ಸಾಧಕರಾಗಿ ಜ್ಞಾನಪೀಠ ಪುರಸ್ಕೃತರಾದರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬಿ.ಎಲ್.ಶ್ರೀನಿವಾಸ್ ಮಾತನಾಡಿ ಮಾಸ್ತಿ ರವರ ಕುರಿತಾಗಿಹಾಗೂ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮ ದಲ್ಲಿ ಕವಿಗೋಷ್ಠಿ, ಗೀತಗಾಯನ ಆಯೋಜನೆಯಾಗಿತ್ತು. ವೇದಿಕೆಯಲ್ಲಿ ಡಾ.ರಜಿನಿ ಜಯರಾಂ, ಶ್ರೀ.ಬಿ.ಎಲ್.ಶ್ರೀನಿವಾಸ್, ಶ್ರೀ.ಮಂಡ್ಯ ಹೆಚ್ ಎಸ್ ಬಾಲಸುಬ್ರಹ್ಮಣ್ಯಂ, ಶ್ರೀ. ಉಮೇಶ್.ಸಿ.ಎನ್ ಹಾಗೂ ಶ್ರೀ ರಾಧಾತನಯ ರವರುಗಳು ಉಪಸ್ಥಿತರಿದ್ದರು