ಪೀಣ್ಯ ದಾಸರಹಳ್ಳಿ: ಅಂದ್ರಹಳ್ಳಿ ಮುಖ್ಯರಸ್ತೆಯ ಝೆನ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ,ಪ್ರೀ ನರ್ಸರಿ, ಎಲ್ಕೆ ಜಿ,ಯುಕೆಜಿ, ವಿದ್ಯಾರ್ಥಿಗಳಿಂದ ವಿವಿಧ ಮಾದರಿಯ ಮಾಡೆಲ್ ಗಳ ವಸ್ತು ಪ್ರದರ್ಶನ ನಡೆಯಿತು.
ವಸ್ತು ಪ್ರದೇಶದಲ್ಲಿ ವ್ಯವಸಾಯ ಪದ್ದತಿ, ಸಿಸ್ಟಮ್ ಬಗ್ಗೆ ಮಾಹಿತಿ, ಪರಿಸರ ಕುರಿತು, ಹಾಸ್ಪಿಟಲ್ ಬಗ್ಗೆ, ಶ್ರೀ ರಾಮ ಮಂದಿರ ಮಾದರಿ, ಭೂಗೋಳ, ಸೆಟಲೈಟ್ ಕಮ್ಯುನಿಕೇಶನ್ ಇನ್ನು ಮುಂತಾದ ವಿಜ್ಞಾನದ ಹಲವು ವಿವಿಧ ಮಾದರಿಗಳು, ಗಣಿತ,ರೇಖಾಗಣಿತದ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿ ಅದರ ಬಗ್ಗೆ ಅಲ್ಲಿಗೆ ಬಂದಿರುವ ಪೋಷಕರಿಗೂ, ಶಿಕ್ಷಕರಿಗೂ, ಸಾರ್ವಜನಿಕರಿಗೆ ವಿವರಣೆ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಡಾ. ಪ್ರಶಾಂತಿ ಶಶಿಕಾಂತ್ ಮಾತಾನಡಿ’ ಬುದ್ಧಿಶಕ್ತಿಯನ್ನು ಹೆಚ್ಚಿಸಲು ವಿದ್ಯಾರ್ಥಿಗಳಲ್ಲಿನ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವಿದ್ಯಾರ್ಥಿಗಳಿಗೆ ವಿವಿಧ ಬಗೆಯ ಜ್ಞಾನ ವಿಜ್ಞಾನದ ಮಾದರಿಯನ್ನು ತಿಳಿಸಿ,ಕಲಿಸಿದಾಗ ಅವರೇ ಪ್ರಾಯೋಗಿಕವಾಗಿ ತಯಾರು ಮಾಡಿದಂತಹ ವಿವಿಧ ಪ್ರಕಾರದ ವಸ್ತು ಪ್ರದರ್ಶನಗಳನ್ನು ಪ್ರದರ್ಶಿಸಿದ್ದಾರೆ’ಎಂದರು.
ಶಾಲೆಯ ಕಾರ್ಯದರ್ಶಿ ಡಾ. ಸುಧಾ ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರವಂತರಾಗಿ ಬೆಳೆಯಬೇಕು. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು , ಸಂಯಮದ ಜೊತೆಗೆ ಹಲವಾರು ವಿಷಯಗಳಲ್ಲಿ ಜ್ಞಾನ ಬೆಳಸಿಕೊಳ್ಳಲು ಹಾಗೂ ಆಸಕ್ತಿ ಹೆಚ್ಚಿಸಿಕೊಳ್ಳಲು ಸಹಾಯವಾಗುವಂತ ಒಳ್ಳೆಯ ವಾತಾವರಣ ಕಲ್ಪಿಸಿ ಬೆಳೆಸುತ್ತೇವೆ ಎಂದರು.
ಪೋಷಕ ಮಂಜುನಾಥ್ ಮಾತನಾಡಿ’ ಝೆನ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಉತ್ತಮ ಅಭಿರುಚಿಗಳೊಂದಿಗೆ ಒಳ್ಳೆಯ ಚಟುವಟಿಕೆಗಳನ್ನು ಪ್ರತಿವರ್ಷ ಹಮ್ಮಿಕೊಳ್ಳುತ್ತಿದೆ. ಮಕ್ಕಳ ಕ್ರಿಯೆಟಿವಿಟಿ ಲೋಕಲ್ ಟು ಗ್ಲೋಬಲ್ ಎಂಬ ಪ್ರಯೋಗ ತುಂಬಾನೇ ಚೆನ್ನಾಗಿದೆ. ಸ್ಕೂಲ್ನಿಂದ ಮಕ್ಕಳಿಗೆ ಒಳ್ಳೆಯ ಸಹಕಾರ ಹಾಗೂ ಶಿಕ್ಷಕರ ಶ್ರಮ ಎದ್ದುಕಾಣುತ್ತಿದೆ. ಶಾಲೆಯ ಆಡಳಿತ ಮಂಡಳಿ ತುಂಬಾನೇ ಸಹಕಾರ ನೀಡುತ್ತಾರೆ’ ಎಂದರು.
‘ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯುವುದಕ್ಕೆ ತುಂಬಾ ಸಹಕಾರ ನೀಡಿದ್ದಾರೆ. ಮಕ್ಕಳು ಗುರುಗಳ ಸಹಕಾರದಿಂದ ತಯಾರಿಸಿದ ಎಲ್ಲಾ ಮಾದರಿಗಳು ಇಲ್ಲಿವೆ. ಅವುಗಳನ್ನು ನೋಡಿ ಖುಷಿಯಾಗಿದೆ’ ಎಂದರು.ಶಾಲೆಯ ಅಧ್ಯಕ್ಷ ಅಚಾರ್ಯ ವೆಂಕಟೇಶ್ ಮೂರ್ತಿ,ಶಾಲೆಯ ಕಾರ್ಯದರ್ಶಿ ಸುಧಾ ಮೂರ್ತಿ, ಶಾಲೆಯ ಪ್ರಾಂಶುಪಾಲರಾದ ಡಾ ಪ್ರಶಾಂತಿ ಶಶಿಕಾಂತ್, ಶಾಲೆಯ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಇನ್ನೂ ಮುಂತಾದವರಿದ್ದರು.