ತಾಯ್ತನ ಒಂದು ವರದಾನ. ಅವಳಿಗೆ ಮಕ್ಕಳನ್ನು ಬೆಳೆಸುವ ರೀತಿ ಯಾರೂ ಹೇಳಿಕೊಡಬೇಕಾಗಿಲ್ಲ. ಅವಳು ತನ್ನ ಮಕ್ಕಳು ಹಾಗು ಕುಟುಂಬ ನಿಭಾಯಿಸುವಲ್ಲಿ ಜಾಣ್ಮೆಯಿದೆ, ಕರ್ತವ್ಯವಿದೆ.ತಾಯ್ತನದ ಕಾಳಜಿ ಅನೇಕವೇಳೆ ಅವರ ಹೊರಗಿನ ಪರಿಸರ, ಮನೆಯ ವಾತಾವರಣದ ಮೇಲೆ ನಿರ್ಧಾರಿಸಲ್ಪಟ್ಟಿದೆ. ಅದು ಮೂಲತಃ ಮಕ್ಕಳ ಆರೋಗ್ಯ, ಶಿಕ್ಷಣ, ಮತ್ತು ಸಾಮಾಜಿಕ ಹಾಗೂ ನೈತಿಕ ಬೆಳವಣಿಗೆಯ ಕಾಳಜಿಯನ್ನು ಒಳಗೊಂಡಿರುತ್ತದೆ. ಅದು ಮಕ್ಕಳ ಸಂತೋಷ, ಸುಖ, ಮತ್ತು ಸುರಕ್ಷತೆಯ ಅನುಭವಕ್ಕೆ ಆಧಾರವಾಗಿರುತ್ತದೆ.
ತಾಯ್ತನದ ಆರೋಗ್ಯವನ್ನು ಕಾಪಾಡಲು ಕೆಲವು ಮುಖ್ಯ ಅಂಶಗಳು ಇವೆ:
1. ಸ್ವಸ್ಥ ಆಹಾರ: ತಾಯ್ತನದಲ್ಲಿ ಆಹಾರದ ಕ್ರಮ ಸರಿಯಾಗಿದ್ದರೆ ಆರೋಗ್ಯಕರವಾಗಿರುತ್ತದೆ. ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ, ಸತ್ವಯುತ ಗುಣಗಳಿರಬೇಕು. ಹಿತಮಿತವಾದ ಆಹಾರ ಪದ್ಧತಿ ಇರಬೇಕು. ತಿನ್ನುವ ವೇಳೆಯನ್ನು ಗಮನದಲ್ಲಿಟ್ಟುಕೊಂಡಿರಬೇಕು.
2. ವೈದ್ಯಕೀಯ ಪರೀಕ್ಷೆಗಳು: ನಿಯಮಿತವಾಗಿ ವೈದ್ಯರ ಪರೀಕ್ಷೆಗಳಿಗೆ ಹೋಗುವುದು ಮುಖ್ಯ. ವೈದ್ಯರು ಪರೀಕ್ಷಿಸಿ ಅವರ ಆರೋಗ್ಯದ ಬಗ್ಗೆ ಅವರೇ ಹೇಳಬೇಕೇ ಹೊರತು, ತಾವೇ ಔಷಧೋಪಚಾರ ಮಾಡುವಂತಿಲ್ಲ.
3. ನಿದ್ರೆ ಮತ್ತು ವಿಶ್ರಾಂತಿ: ತಾಯ್ತನದ ಮೊದಲ ಕಾಳಜಿ ತನ್ನ ನಿದ್ರೆಯ ಕಾಲವನ್ನು ನಿಯಮಿತವಾಗಿ ಪಡೆಯುವುದು. ಸಮಯಕ್ಕೆ ಸರಿಯಾಗಿ ಮಲಗುವುದು ಬಹಳ ಮುಖ್ಯ.
4. ಸ್ವಾಸ್ಥ್ಯಕರ ಸಾಮಾಜಿಕ ಸಂಬಂಧಗಳು: ತಾಯ್ತನ ಸಮಯದಲ್ಲಿ ಸಮಾಜದ, ಕುಟುಂಬದ ಸದಸ್ಯರು ಹಾಗು ಇತರ ಸದಸ್ಯರೊಂದಿಗೆ ಆರೋಗ್ಯಕರವಾದ ಸಂಬಂಧ ಅತ್ಯಂತ ಆವಶ್ಯಕ. ಇದು ತಾಯ್ತನದ ಮನಸ್ಸನ್ನು ಸುಸ್ಥಿತಿಯಲ್ಲಿ ಇರಿಸುವುದರಲ್ಲಿ ಸಹಾಯ ಮಾಡಬಹುದು.
ಈ ಎಲ್ಲಾ ಅಂಶಗಳು ತಾಯ್ತನದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡಬಲ್ಲವು.ತಾಯಿ ಆಗುವುದು ವಯಸ್ಸು ಮತ್ತು ಮಾನಸಿಕ ಆರೋಗ್ಯದ ಅಧೀನದಲ್ಲಿದೆ. ಸಾಮಾನ್ಯವಾಗಿ, ಮಾನಸಿಕ ಮತ್ತು ಶಾರೀರಿಕ ಸಿದ್ಧತೆಗಳು ವಯಸ್ಸಿನ ಮೇಲೆ ಪ್ರಭಾವ ಬೀರಬಲ್ಲವು. ಇವುಗಳ ಲಕ್ಷಣಗಳನ್ನು ಪ್ರತಿಯೊಂದು ತಾಯ್ತನ ಅನುಭವಿಸುವ ವ್ಯಕ್ತಿಯಲ್ಲೂ ಗಮನಿಸಬೇಕಾಗಿದೆ.
ತಾಯಿ ಆಗುವ ನಿಟ್ಟಿನಲ್ಲಿ ತನ್ನ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿ ಇರಬೇಕು.ಮಾನಸಿಕ ಆರೋಗ್ಯ: ತಾಯಿಯಾಗುವ ಪ್ರಕ್ರಿಯೆಯು ಮಾನಸಿಕವಾಗಿ ಹೆಚ್ಚು ಬಲವಾಗಿ ಇರಬೇಕು. ಈ ಸಮಯದಲ್ಲಿ ಮಾನಸಿಕ ಆರೋಗ್ಯ, ಆತ್ಮವಿಶ್ವಾಸದ ಮಟ್ಟ ಬಹಳ ಮುಖ್ಯ.
ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದರೆ, ಅದರ ಸಂಬಂಧ ಔಷಧಿಗಳನ್ನು ತೆಗೆದುಕೊಳ್ಳುತಿದ್ದರೆ ತಾಯಿ ಆಗುವ ಮುನ್ನ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕು. ಇದು ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.ತಾಯ್ತನದಲ್ಲಿ ಮಾನಸಿಕ ಅಸ್ವಸ್ಥರಾಗಿದ್ದರೆ ಮಗುವನ್ನು ಅವರ ಬಳಿ ಬಿಡುವಾಗ ಯಾರಾದರೊಬ್ಬರು ಜೊತೆ ಇರಲೇ ಬೇಕು. ಇಲ್ಲದಿದ್ದರೆ ಮಗುವಿಗೆ ಹಾನಿ ಆಗುವ ಸಂಭವಹೆಚ್ಚು. ಕುಟುಂಬದವರು, ಸ್ನೇಹಿತರು, ಇತರ ಸಾಮಾಜಿಕ ಕಾಳಜಿ ಬಹಳ ಮುಖ್ಯ. ಸ್ವಸ್ಥ ತಾಯ್ತನ ಬೆಳೆಯುವ ಮಕ್ಕಳಿಗೂ ಸ್ವಾಸ್ಥ್ಯ.