ಬೆಂಗಳೂರು: ನಾಟ್ಯಗಳಿಗೆ ಮಾತೃಸಮಾನ ಭರತನಾಟ್ಯ, ಭರತಮುನಿರವರಿಂದ ವಿರಚಿತ ವಾದದ್ದು ಈ ನಾಟ್ಯ ಶಾಸ್ತ್ರ ಎಂದು ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಗೌರವ ಕಾರ್ಯದರ್ಶಿ ಹಯಗ್ರೀವಾಚಾರ್ ತಿಳಿಸಿದರು.
ಇವರು ಈಚೆಗೆ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆದ ರೇಖಾಲಕ್ಷ್ಮಿನಾರಾಯಣ್ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಪ್ರಾಚೀನ ನಾಟ್ಯ ಪರಂಪರೆಯಲ್ಲಿ ಭರತನಾಟ್ಯವೂ ಒಂದು.ಭಾವ,ರಾಗ,ತಾಳಗಳ ಸಯೋಜನೆ ಭರತನಾಟ್ಯ,ಭರತನಾಟ್ಯ ಕಲಾವಿದರಿಗೆ ತಮಿಳನಾಡಿನ ಚಿದಂಬರಂ ನಲ್ಲಿರುವ ನಟರಾಜ ಆರಾಧ್ಯ ದೈವ.ಈ ನಾಟ್ಯ ಕಲಾವಿದರು ಗುರುವಿನ ಮಾರ್ಗದರ್ಶನದಲ್ಲಿ ವಿನಯದಿಂದ ಅಭ್ಯಾಸ ಮಾಡಿದಾಗ ಮಾತ್ರ ಈ ಕಲೆ ಕಲಾವಿದರನ್ನು ಒಲಿಯುತ್ತದೆ ಎಂದು ತಿಳಿಸಿದರು.
ಆರ್ಎಸ್ಎಸ್ ಪ್ರಥಮ ದರ್ಜೆಯ ಕಲೇಜಿನ ಪ್ರಾಂಶುಪಾಲರಾದ ಪ್ರೊ.ಸುಧೀರ್ ಪೈ ಮಾತನಾಡಿ ವಿಧ್ಯಾರ್ಥಿಗಳಿಗೆ ತಾವು ಗಳಿಸಿದ ಅಂಕಗಳಿಗಿಂತಲೂ ಸಂಸ್ಕಾರ ಮುಖ್ಯ ಎಂದರು. ಪೋಷಕರು ವಿಧ್ಯಾರ್ಥಿಗಳಲ್ಲಿ ಸಂಸ್ಕಾರ ಮೂಡಿಸಲು ಪ್ರಯತ್ನಿಸಬೇಕು. ಎಂದರು.ರೇಖಾ ಲಕ್ಷ್ಮಿನಾರಾಯಣ್ ತನ್ನ ಆರಂಗೇಟ್ರಂ ನನ್ನು ಪುಷ್ಪಾಂಜಲಿ ಯೊಂದಿಗೆ ಪ್ರಾರಂಭಿಸಿದರು. ಅಲರಿಪು, ಗಣೇಶ ಕೌಸ್ತಂ, ಜತಿಶ್ವರ, ಮುಂತಾದ ನೃತ್ಯಗಳೊಂದಿಗೆ ನೆರದಿದ್ದ ಸಭಿಕರ ಚಪ್ಪಾಳೆ ಗಿಟ್ಟಿಸಿದರು.ಚೇತನ ನಾಗರಾಜು ರವರ ಸಂಗೀತಕ್ಕೆ ಉತ್ತಮ ಅಭಿನಯವನ್ನು ಪ್ರದರ್ಶಿಸಿದರು.
ಸುಮಾರು 30 ವಿವಿಧ ಕೀರ್ತನಗಳಿಗೆ ಎರಡು ಗಂಟೆಗಳ ಕಾಲ ನೆರದ ಸಭಕರಿಗೆ ನೇತ್ರಾನಂದ ಮಾಡಿದರು.ಅಭಿನಯದಲ್ಲಿ ಕಾಲ್ಗೆಜ್ಜೆಗಳ ಸುಲಲಿತವಾದ ನಾದದೊಂದಿಗೆ ನಟ್ಟುವಾಂಗದಲ್ಲಿ ಗುರುಗಳಾದ ರೂಪಶ್ರೀ ಅರವಿಂದ್,ಮೃದಂಗದಲ್ಲಿ ನರೇಸ್ ಕುಮಾರ್, ವೇಣುವಿನಲ್ಲಿ ಗಣೇಶ್,ವಯೊಲಿನ್ ನಲ್ಲಿ ಸಂಜೀವ್ ಕುಮಾರ್ ಪಕ್ಕ ವಾದ್ಯಗಳೊಂದಿಗೆ ಸಹಕರಿಸಿದರು.
ನಾಲ್ಕು ವರ್ಷ ಬಾಲಕಿಯಾಗಿದ್ದ ರೇಖಾ ಸತತ 17 ವರ್ಷ ಅಭ್ಯಾಸದಿಂದ ಇಂದು ರಂಗ ಪ್ರವೇಶ ಮಾಡುತ್ತಿರುವುದು ರೂಪಕಲಾ ನೃತ್ಯ ಶಾಲೆ,ಹಾಗೂ ವಂಶಿ ಫ್ಯನ್ ಆರ್ಟ್ಸ್ ಶಾಲೆಗೆ ಸಂತಸ ತಂದಿದೆ ಎಂದು ಗುರುಗಳಾದ ರೂಪಶ್ರೀ ತಿಳಿಸಿದರು.ಅಮೆರಿಕಾದ ಕ್ಯಾಲಿಫೋರ್ನಿಯಾ ದಿಂದ ಬಂದ ನೃತ್ಯ ಸಂಶೋದಕಿ ಪ್ರೊ.ಕರುಣ ವಿಜಯೇಂದ್ರ ನೃತ್ಯಗಳ ಸಂಶೋಧನೆ,ದೇವಾಲಯಗಳು,ನಮ್ಮ ಪ್ರಾಚೀನ ಪರಂಪರೆಯ ಬಗ್ಗೆ ತಿಳಿಸಿದರು.
ಸತತ 17 ವರ್ಷ ನೃತ್ಯ ವಿದ್ಯಾಭ್ಯಾಸ ನೀಡಿದ ಗುರುಗಳಾದ ರೂಪಶ್ರೀ ಅರವಿಂದ್ ರವರನ್ನು ರೇಖ ಕುಟುಂಬ ಸದಸ್ಯರು ಸನ್ಮಾನಿಸಿದರು. ಚೈತ್ರ ರವರ ವಿವರಣಾತ್ಮಕ ನಿರೂಪಣೆ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿತು. ಕರ್ಯಕ್ರಮದಲ್ಲಿ ಚಲನಚಿತ್ರ, ರಂಗಭೂಮಿ ನಟರಾದ ಸುಚೀಂದ್ರ ಪ್ರಸಾದ್, ವಿಶ್ವ ಕರ್ಮ ಸಂಘದ ರಾಜ್ಯ ಅಧ್ಯಕ್ಷರಾದ ಶ್ರೀನಿವಾಸಾಚಾರ್, ಗೋಪಾಲನ್, ಹಿರಿಯ ಪತ್ರಕರ್ತರಾದ ಲೇಪಾಕ್ಷಿ ಸಂತೋಷರಾವ್ ಮುಂತಾದವರು ಭಾಗವಹಿಸಿದ್ದರು.