ಬೆಂಗಳೂರು: ನಾನು ಬಸವ ಧರ್ಮದ ಪರಇರುವವನು, ಧರ್ಮದ ಕಾಲಂ ನಲ್ಲಿ ಲಿಂಗಾಯತಧರ್ಮಅAತನೇ ಬರೆಸ್ತೇನೆಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದರು. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಕುರಿತು ಬೆಂಗಳೂರಲ್ಲಿ ಮಾತನಾಡಿದಅವರು, ವೀರಶೈವ ಲಿಂಗಾಯತ ಸಮುದಾಯದಲ್ಲಿಧರ್ಮ ಸಂಘರ್ಷ ವಿಚಾರಕ್ಕೆ ಪ್ರತಿಕ್ರಿಯಿಸಿದರು.ನಾನು ಬಸವ ಧರ್ಮದ ಪರಇರುವವನು, ಧರ್ಮದಕಾಲಂನಲ್ಲಿ ಲಿಂಗಾಯತಧರ್ಮಅAತನೇ ಬರೆಸುತ್ತೇನೆ. ಲಿಂಗಾಯತಧರ್ಮಆದರೆ ವೀರಶೈವಅದರಒಂದು ಭಾಗಎಂದು ತಿಳಿಸಿದರು.
ಜಾತಿ ಸಮೀಕ್ಷೆಯಲ್ಲಿ ಸಾಕಷ್ಟು ಗೊಂದಲ ವಿಚಾರಕುರಿತು ಮಾತನಾಡಿ, ಇನ್ನೆರಡು ದಿನಗಳಲ್ಲಿ ಗೊಂದಲಗಳು ಬಗೆಹರಿಯಲಿವೆ. ಸರ್ವರ್ ಸಮಸ್ಯೆ, ಆ್ಯಪ್ ಸಮಸ್ಯೆ, ಶಿಕ್ಷಕರ ವಿಚಾರಎಲ್ಲವೂ ಸರಿ ಹೋಗಲಿದೆ. ಅಗತ್ಯ ಬಿದ್ದರೆ ಸಮಯ ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ಮಾಡ್ತೇವೆ. ಆದ್ರೆ ಗಡುವಿನೊಳಗೆ ಸಮೀಕ್ಷೆ ಮುಗಿಸಲು ಪ್ರಯತ್ನ ಪಡ್ತೇವೆಎಂದರಲ್ಲದೇ, ಜನ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡ್ತೇವೆ, ಕೋರ್ಟ್ಕಡ್ಡಾಯಅಲ್ಲಅಂತ ಹೇಳಿದೆ.ಅದರ ಬಗ್ಗೆ ನಾನು ಮಾತಾಡಲ್ಲ. ಆದ್ರೆಜನ ಸಮೀಕ್ಷೆಗೆ ಸಹಕಾರಕೊಡಬೇಕುಎಂದುಕೋರಿದರು.
ಭೀಮಾ ನದಿ ಪ್ರವಾಹ, ಸಮಸ್ಯೆಗಳ ಕುರಿತು ಮಾತನಾಡಿದ ಸಚಿವರು, ಭೀಮಾ ನದಿ ಪ್ರವಾಹದದೊಡ್ಡ ಪ್ರಮಾಣದಲ್ಲಿ ಬಂದಿದೆ.೩.೫ ಲಕ್ಷಕ್ಯೂಸೆಕ್ಸ್ ನೀರು ಬಂದಿದೆ.ಸಿಎA, ಅಧಿಕಾರಿಗಳ ಜೊತೆಚರ್ಚೆ ಮಾಡಿದ್ದೇನೆ. ಪ್ರವಾಹ ಪರಿಸ್ಥಿತಿ ಎದುರಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ. ಡಿಸಿ, ನೀರಾವರಿ ಇಲಾಖೆ ಅಧಿಕಾರಿಗಳು ಪರಿಸ್ಥಿತಿ ನಿರ್ವಹಿಸುವ ಕೆಲಸಕ್ಕೆ ಮುಂದಾಗಿದ್ದೇವೆ. ಅಗತ್ಯ ಬಂದ್ರೆ ಪ್ರವಾಸ ಮಾಡ್ತೇವೆ. ಒಟ್ಟಾಗಿ ಪ್ರವಾಹ ಪರಿಸ್ಥಿತಿ ಎದುರಿಸಬೇಕಿದೆ.ಪ್ರಕೃತಿಯ ಮುಂದೆ ನಾವು ಚಿಕ್ಕವರು, ಜಾಗರೂಕತೆ ವಹಿಸಬೇಕು.ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ, ಬೆಳೆ, ರಸ್ತೆಗಳು ಹಾನಿ ನಷ್ಟದಅಂದಾಜುಇನ್ನೂ ಮಾಡಿಲ್ಲಎಂದು ವಿವರಿಸಿದರು.