ಕನಕಪುರ: ಪೂಜ್ಯ ಎಸ್. ಕರಿಯಪ್ಪ ನವರ ಹೆಸರಿನಲ್ಲಿ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಂ. ಬಿ. ಎ ಹಾಗೂ ಎಂ. ಸಿ. ಎ ಕೋರ್ಸ್ ಗಳನ್ನು ಪ್ರಸಕ್ತ ಸಾಲಿನಿಂದ ಆರಂಭಿಸಲಾಗುತ್ತಿದೆ ಎಂದು ರೂರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಹೆಚ್. ಕೆ. ಶ್ರೀಕಂಠು ತಿಳಿಸಿದರು.
ಕಾಲೇಜಿನ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು 1937 ನೇ ಇಸವಿಯಲ್ಲಿ ಪೂಜ್ಯ ಶ್ರೀ ಎಸ್. ಕರಿಯಪ್ಪ ನವರು ಗ್ರಾಮೀಣ ಮಕ್ಕಳಿಗಾಗಿ ಈ ಸಂಸ್ಥೆಯನ್ನು ಆರಂಭಿಸಿ ಪದವಿ ತರಗತಿಯವರೆಗೂ ಶಿಕ್ಷಣ ಸೌಲಭ್ಯ ನೀಡುವ ಮೂಲಕ ಸಾವಿರಾರು ಜನರ ಬಾಳಿಗೆ ಬೆಳಕನ್ನು ತಂದಿದ್ದಾರೆ,ಅವರ ನಿಸ್ವಾರ್ಥ ಸೇವೆ ಆದರ್ಶ ಹಾಗೂ ಉದ್ದೇಶವನ್ನುಈಡೇರಿಸುವುದು ಈ ಸಂಸ್ಥೆಯ ಜವಬ್ದಾರಿಯಾಗಿದೆ,
ಈಗಿನ ಸ್ಪರ್ಧಾತ್ಮಕಸಮಾಜದಲ್ಲಿ ಗ್ರಾಮೀಣ ಭಾಗದ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಮ್ಮ ಸಂಸ್ಥೆಯು ಎಂ. ಬಿ. ಎ ಹಾಗೂ ಎಂ. ಸಿ. ಎ ಕೋರ್ಸ್ ಗಳನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು.ಪೂಜ್ಯ ಕರಿಯಪ್ಪನವರು ಕಟ್ಟಿ ಬಳಸಿದ ಈ ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ತೆಗೆದುಕೊಂಡು ಹೋಗುವ ಉದ್ದೇಶ ಹಾಗೂ ನಮ್ಮ ತಾಲ್ಲೂಕಿನ ಮಕ್ಕಳು ಈ ಕೋರ್ಸ್ ಗಳನ್ನು ಮಾಡಲು ಬೆಂಗಳೂರು, ಮೈಸೂರು ನಗರಗಳಿಗೆ ಹೋಗು ವುದರಿಂದ ಅವರ ಆರ್ಥಿಕ ವೆಚ್ಚಕ್ಕೆ ಕಡಿವಾಣ ಹಾಕುವ ಸಲುವಾಗಿ ಎಸ್. ಕರಿಯಪ್ಪ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿ ಹೆಸರಿನಲ್ಲಿ ಎರಡು ಕೋರ್ಸ್ಗಳನ್ನು ತೆರೆಯಲು ತೀರ್ಮಾನಿಸಿದ್ದು ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯದ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಎರಡು ಕೋರ್ಸ್ ಗಳಿಂದ ತಲಾ 60 ಸೀಟುಗಳಂತೆ ಒಟ್ಟು120 ಸೀಟುಗಳ ಲಭ್ಯತೆ ಇದ್ದು ಪಿಜಿ ಸಿಇಟಿಮೂಲಕ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ, ಮಹಾಜನ್ ಕಾಲೇಜಿ ನ ಸಹ ಪ್ರಾಧ್ಯಾಪಕರಾಗಿದ್ದ ಎಂ.ಬಿ.ಎ ಪಿ ಎಚ್ ಡಿ ಪಡೆದಿ ರುವ ಹೆಚ್. ಶ್ರೀನಿವಾಸ್ ಹಾಗೂ ಎಂ.ಎಸ್ ರಾಮಯ್ಯ ಕಾಲೇಜಿನ ಪ್ರಾಂಶುಪಾಲ ಪುರುಷೋತ್ತಮ್ ಹಾಗೂ ಬಿ. ಎನ್. ರಾಘವೇಂದ್ರ ರವರ ಮುಖ್ಯಸ್ಥತೆಯಲ್ಲಿ ನುರಿತ ಪ್ರಾಧ್ಯಾಪಕರಿಂದ ಈ ಕೋರ್ಸ್ಗಳನ್ನು ನಡೆಸಲಾಗುವುದು,
ಶೇಕಡ 50-50 ರ ಅನುಪಾತದಲ್ಲಿ ವಿದ್ಯಾರ್ಥಿಗಳ ಪ್ರವೇಶ ನಡೆಯಲಿದ್ದು ಈ ಎರಡು ಕೋರ್ಸ್ಗಳನ್ನು ಆಯ್ಕೆ ಮಾಡಿ ಕೊಳ್ಳುವ ವಿದ್ಯಾರ್ಥಿಗಳಿಗೆ ಬ್ಯಾಂಕ್ ಮುಖಾಂತರ ಸಾಲ ಸೌಲಭ್ಯ ದೊರೆಯುವುದರಿಂದ ತಾಲ್ಲೂಕಿನ ಗ್ರಾಮೀಣ ಭಾಗದ ರೈತರ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದ್ದು ಈ ಅವಕಾಶವನ್ನು ತಾಲ್ಲೂಕು ಹಾಗೂ ಜಿಲ್ಲೆಯ ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.ಮಹಾಜನ್ ಕಾಲೇಜಿನ ಸಹಪ್ರಾಧ್ಯಪಕ ಶ್ರೀನಿವಾಸ್, ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲ ಬಾಲಕೃಷ್ಣ, ಪ್ರಾಧ್ಯಾಪಕ ಪಾರ್ಥಸಾರಥಿಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು ಈ ವೇಳೆ ಉಪಸ್ಥಿತರಿದ್ದರು.