ನೆಲಮಂಗಲ: ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಸಮಾನತೆ ತಂದ ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಿ.ಆರ್. ಅಂಬೇಡ್ಕರ್ ಎಂದು ಕುಲುವನಹಳ್ಳಿ ಗ್ರಾ.ಪಂ.ಸದಸ್ಯ ಕೆ.ಜಿ.ರಂಗಸ್ವಾಮಯ್ಯ ಹೇಳಿದರು.ತಾಲೂಕಿನ ಸೋಂಪುರ ಹೋಬಳಿಯ ಕೆರೆಕತ್ತಿಗನೂರು ಗ್ರಾಮದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 133ನೇ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಈ ಸಂವಿಧಾನ ಶಿಲ್ಪಿಗೆ ನಮನ ಸಲ್ಲಿಸುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಲಿದ್ದೇವೆ, 1831 ಮತದಾನದ ಹಕ್ಕು, ಪ್ರಜಾ ಪ್ರತಿನಿಧಿ ಕಾಯ್ದೆ ಜಾರಿಗೆ ತಂದ ಅಂಬೇಡ್ಕರ್ ರವರಿಗೆ ಅವರೇ ಸಾಟಿ, ಸಂಮಿಧಾನ ಶಿಲ್ಪಿ ಯವರ ಪ್ರತಿಮೆ ಪ್ರಪಂಚದಾದ್ಯಂತ 189 ದೇಶದಲ್ಲಿ ಪ್ರತಿಮೆ ವಿಶ್ವದಲ್ಲಿದೆ ಎಂದರೇ ಅದು ಅಪ್ರತಿಮೆ ಪ್ರಜಾಪ್ರಭುತ್ವವಾದಿಯ ಸಾಧನೆ, ಮಹಿಳೆಯರಿಗೆ ಸಮಾನತೆ ಬರಲು ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಈ ವೇಳೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಕಾಯಕಯೋಗಿ ಬಸವಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಅರ್ಪಿಸಿ, ಪುಟಾಣಿಗಳಿಂದ ಕೇಕ್ ಕತ್ತರಿಸಿ, ಅಂಬೇಡ್ಕರ್ ಜಯಘೋಷ ಕೂಗಿ, ಸಿಹಿ ಹಂಚಿ, ಅನ್ನಪ್ರಸಾದ ವಿತರಿಸಿ ಅರ್ಥ ಪೂರ್ಣ 133ನೇ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಗಿರೀಶ್, ಯುವ ಮುಖಂಡರಾದ ರಾಜೇಶ್,, ನಿವೃತ್ತ ಶಿಕ್ಷಕ ರಾಜಣ್ಣ, ಸಾವಯವ ಕೃಷಿಕ ಗೋಪಿನಾಥ್, ಸಮುದಾಯದ ಹಿರಿಯರಾದ, ಹುಚ್ಚುವರದಯ್ಯ, ಭದ್ರಯ್ಯ, ಕಲಾವಿದ ಚಂದ್ರು, ಮಾಳಯ್ಯ ಕೃಷ್ಣ, ವಿಷ್ಣು, ಸಾರಿಗೆ ಇಲಾಖೆ ರಂಗಣ್ಣ, ಕೆಐಎಡಿಬಿ ರಾಮಣ್ಣ, ಸಂತೋಷ್, ಹನುಮಂತಯ್ಯ, ಚಿಕ್ಕಣ್ಣ, ಹರೀಶ್, ರವಿ, ರಂಗನಾಥ, ನಾರಾಯಣಪ್ಪ, ರಂಗಸ್ವಾಮಿ, ಗಂಗಯ್ಯ, ಕಿಟ್ಟಿ, ಸಿದ್ದರಾಜು, ಗೋವಿಂದರಾಜು ಮಹಿಳೆಯರು, ಪುಟಾಣಿಗಳು ಇನ್ನೀತರರಿದ್ದರು.