ಗೌರಿಬಿದನೂರು: ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ಸಂಘಟನೆಯ ವತಿಯಿಂದ ಪದಾಧಿಕಾರಿಗಳ ಆಯ್ಕೆ ಮಾಡುವ ಕುರಿತು ಮಾಧ್ಯಮ ಗೋಷ್ಠಿಯನ್ನು ಶುಕ್ರವಾರ ಏರ್ಪಡಿಸಲಾಗಿತ್ತು.
ಕರ್ನಾಟಕ ಮಾದರ ಮಹಾಸಭಾದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಪ್ರತಿ ವಿಧಾನ ಸಭಾ ಕ್ಷೇತ್ರ ದಲ್ಲೂ ಮಾದರ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ, ರಾಜಕೀಯವಾಗಿ ಅಭ್ಯರ್ಥಿಗಳ ಆಯ್ಕೆಗೆ ಪ್ರಮುಖ ಪಾತ್ರ ವಹಿಸಲಿದ್ದಾರೆ, ಇಂತಹ ಮಾದರ ಸಮುದಾಯ ಸಹ ಮುಂದುವರೆದ ಜನಾಂಗದAತೆ ಶಿಕ್ಷಣ ಪಡೆದು ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರೆಯಬೇಕು, ಎನ್ನುವ ಸದುದ್ದೇಶದಿಂದ ತಾಲ್ಲೂಕು ಮಟ್ಟದಿಂದ ಮಾದರ ಸಮುದಾಯದ ಸಂಘಟನೆ ಮಾಡಲಾಗುತ್ತಿದೆ. ೧೮ ವರ್ಷ ತುಂಬಿದ ಸಮುದಾಯದವರಿಗೆ ಸದಸ್ಯತ್ವ ನೀಡಲಾಗುತ್ತಿದೆ ಎಂದು ತಿಳಿಸಿದರು.
ನೂತನವಾಗಿ ಆಯ್ಕೆಯಾದ ಮಾದರ ಸಭಾದ ತಾಲ್ಲೂಕು ಅಧ್ಯಕ್ಷ
ನಾಗಾರ್ಜುನ ಮಾತನಾಡಿ, ಸಂಘದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿ
ಗಳು ನನ್ನ ಮೇಲೆ ನಂಬಿಕೆ ಇಟ್ಟು ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ, ಸಮುದಾ
ಯದ ಏಳ್ಗೆಗೋಸ್ಕರ ಮತ್ತು ಸಂಘಟನೆಯನ್ನು ಬಲಪಡಿಸಲು ಹಿರಿಯರ ಮಾರ್ಗದರ್ಶನದಲ್ಲಿ ಬದ್ಧತೆಯಿಂದ ಕೆಲಸ ಮಾಡುವುದಾಗಿ ತಿಳಿಸಿದರು.
ರಾಜ್ಯ ಮಾದರ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾಗಿ ನಾಗಾರ್ಜುನ, ಉಪಾಧ್ಯಕ್ಷರಾದ ವೆಂಕಟೇಶ್, ಕಾರ್ಯದರ್ಶಿಯಾಗಿ ಮೈಲಾರಪ್ಪ, ಖಜಾಂಚಿ ರಮೇಶ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಂಜುAಡಪ್ಪ ಕೆ.ನರಸಿಂಹಯ್ಯ, ರಾಘವೇಂದ್ರ, ಅರುಂಧತಿ, ವಿಶೇಷ ಆಹ್ವಾನಿತರಾಗಿ ಗಂಗಾಧರಪ್ಪ, ಎಚ್.ಎಲ್.ವಿ.ವೆಂಕಟೇಶ್, ನಾಗರಾಜ್ ರವರನ್ನು ಆಯ್ಕೆ ಮಾಡಿದರು.
ಈ ಸಭೆಯಲ್ಲಿ ಕರ್ನಾಟಕ ಮಾದರ ಮಹಾಸಭಾದ ಉಪಾಧ್ಯಕ್ಷರಾದ ಮುನಿಯಪ್ಪ, ಕಾರ್ಯದರ್ಶಿ ವಿಶ್ವನಾಥ್, ಮುರಳಿ, ಮುಖಂಡರಾದ ಮಲ್ಲಸಂದ್ರ ಗಂಗಾಧರ್, ಅಶ್ವತ್ಥಪ್ಪ, ಅಂಬರೀಶ್ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು.



