ಮಹದೇವಪುರ: ಬೀದಿ ಬದಿ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಹಾಗೂ ಕುಂದುಕೊರತೆಗಳ ಸಭೆಯನ್ನು ವೈಟ್ ಫೀಲ್ಡ್ ಪೆÇಲೀಸ್ ಠಾಣಾ ವ್ಯಾಪ್ತಿಯ ಎಲ್.ಎನ್.ಟಿ ಸರ್ಕಲ್ ಬಳಿ ಬೀದಿ ಬದಿ ವ್ಯಾಪಾರಿಗಳೊಂದಿಗೆ ವೈಟ್ ಫೀಲ್ಡ್ ಠಾಣೆಯ ಇನ್ಸ್ಪೆಕ್ಟರ್ ಗುರುಪ್ರಸಾದ್ ಹಾಗೂ ತಂಡ ಸಭೆ ನಡೆಸಿ ಮಾಹಿತಿ ಕಲೆ ಹಾಕಿದರು.
ಕಳೆದ ತಿಂಗಳು ವೈಟ್ ಫೀಲ್ಡ್ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿ ತಿಂಗಳು ಖಾಸಗಿ ಸಂಘಟನೆ ವತಿಯಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ವೈಟ್ ಫೀಲ್ಡ್ ಪೊಲಿಸರ ತಂಡ ಸಭೆ ಸೇರಿ ಮಾಹಿತಿ ಕಲೆ ಹಾಕಿದರು. ಈ ವೇಳೆ ಒಮ್ಮತದಿಂದ ಬೀದಿ ಬದಿ ವ್ಯಾಪಾರಿಗಳು ಪ್ರತಿಕ್ರಿಯಿಸಿ ಬಿಎಸ್ ಎಸ್ ಸಂಘಟನೆಯಾಗಲಿ ಹಾಗೂ ರಾಜ್ಯಾಧ್ಯಕ್ಷ ಹೂಡಿ ರಾಮಚಂದ್ರ ರವರಾಗಲಿ ಹಣ ನೀಡುವಂತೆ ಯಾವುದೇ ತೊಂದರೆ ನೀಡಿಲ್ಲ,
ಹಣದ ಬೇಡಿಕೆ ಇಟ್ಟಿಲ್ಲ ಅವರ ಮೇಲೆ ಕೇಳಿ ಬಂದಿರುವ ಆರೋಪ ಸತ್ಯಕ್ಕೆ ದೂರವಾದದ್ದು, ಬೀದಿ ಬದಿಗಳಲ್ಲಿ ನಮ್ಮ ಅಂಗಡಿಗಳನ್ನು ತೆರವು ಗೊಳಿಸುವ ಕಷ್ಟದ ಸಂದರ್ಭದಲ್ಲಿ ನಮ್ಮ ನೆರವಿಗೆ ನಿಂತವರು ಅವರು, ನಮ್ಮ ಕಷ್ಟದ ಸಮಯದಲ್ಲಿ ಅವರಿಂದ ನಾವು ಸಾಕಷ್ಟು ಸಹಾಯ ಪಡೆದಿದ್ದೇವೆ, ಎಲ್ಲಾ ರೀತಿಯ ಸಹಾಯ ಮಾಡುವ ಮೂಲಕ ನಮಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ, ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಡವರ ಪರವಾಗಿ ನಿಂತಿರುವ ಇವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ವ್ಯಾಪಾರಿಯಲ್ಲದ ಕೆಲವರು ಉದ್ದೇಶ ಪೂರ್ವಕವಾಗಿ ಇಂತಹ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಹೊರಟಿದ್ದಾರೆ ಎಂದು ವ್ಯಾಪಾರಿಗಳು ದೂರಿದರು.
ಇದೇ ವೇಳೆ ಮಾತನಾಡಿದ ವೈಟ್ ಫೀಲ್ಡ್ ಠಾಣೆಯ ಇನ್ಸ್ಪೆಕ್ಟರ್ ಗುರುಪ್ರಸಾದ್, ಬೀದಿ ಬದಿ ವ್ಯಾಪಾರಿಗಳೊಂದಿಗೆ ನಮ್ಮ ತಂಡ ಸಭೆ ಸೇರಿ ಮಾಹಿತಿ ಕಲೆಹಾಕಲಾಗಿದೆ. ಬೀದಿ ವ್ಯಾಪಾರಿಗಳ ಬಳಿ ಹಣ ವಸೂಲಾತಿ ಮತ್ತು ವಿನಾಕಾರಣ ತೊಂದರೆ ನೀಡಿದರೆ ಆ ವ್ಯಕ್ತಿಗಳ ಬಗ್ಗೆ ಮುಕ್ತವಾಗಿ ನಮ್ಮ ಗಮನಕ್ಕೆ ತರುವಂತೆ ತಿಳಿಸಲಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಬೀದಿ ಬದಿ ವ್ಯಾಪಾರಿಗಳ ಸಭೆಯಲ್ಲಿ ಬಿಎಸ್ ಎಸ್ ರಾಷ್ಟ್ರೀಯ ಅಧ್ಯಕ್ಷ ಹೂಡಿ ರಾಮಚಂದ್ರ ಹಾಗೂ ಸಂಘಟನೆಯ ಪದಾಧಿಕಾರಿಗಳ ಮೇಲೆ ಕೇಳಿ ಬಂದಿರುವ ಆರೋಪದಲ್ಲಿ ಮೇಲ್ನೋಟಕ್ಕೆ ಯಾವುದೇ ಹುರಳಿಲ್ಲ ಎಂಬುದು ಬೀದಿ ಬದಿ ವ್ಯಾಪಾರಿಗಳ ಸಭೆಯಿಂದ ಗೊತ್ತಾಗಿದೆ ಎಂದರು.ನಿಮ್ಮ ಮೇಲೆ ಯಾರಾದರೂ ಹಣ ವಸೂಲಿ ಹೆಸರಲ್ಲಿ ತೊಂದರೆ ನೀಡಲು ಬಂದರೆ ದೂರು ಸಲ್ಲಿಸಬಹುದು, ಅಥವಾ ವಾಟ್ಸ್ ಆ?ಯಪ್ ಮೂಲಕವೂ ಮಾಹಿತಿ ನೀಡಬಹುದು, ದೂರು ಸಲ್ಲಿಸಿದವರ ಹೆಸರನ್ನು ಬಹಿರಂಗಪಡಿಸುವುದಿಲ್ಲ, ವ್ಯಾಪಾರಿಗಳಿಗೆ ತೊಂದರೆ ನೀಡುವವರ ವಿರುದ್ಧ ಕ್ರಮ ಜರಗಿಸುವುದಾಗಿ ಭರವಸೆ ನೀಡಿದರು.