ಮೇಲುಕೋಟೆ: ಚೆಲುವ ನಾರಾಯಣ ಸ್ವಾಮಿಯ ವೈರಮುಡಿ ಕಿರೀಟಧಾರಣೆಗಾಗಿ ಮೇಲುಕೋಟೆ ಸಜ್ಜುಗೊಂಡಿದೆ. ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಮಾಡುತ್ತಿದ್ದು ವಿವಿಧ ರಾಜ್ಯಗಳಿಂದ ತಂಡೋಪತAಡವಾಗಿ ಮೇಲುಕೋಟೆಗೆ ಬಂದಿಳಿಯುತ್ತಿದ್ದಾರೆ.
ಜಿಲ್ಲಾಡಳಿತ ಹಲವು ಸಭೆಗಳನ್ನು ಮಾಡಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವಿವಿಧ ಜವಾಬ್ದಾರಿಯನ್ನು ವಹಿಸಿದೆ. ಮೇಲುಕೋಟೆಯ ಕಲ್ಯಾಣಿ ರಾಜಬೀದಿ ದೇವಾಲಯ ಉತ್ಸವ ಬೀದಿಗಳಿಗೆ ದೀಪಾಲಂಕಾರ ಮಾಡಲಾಗಿದ್ದು, ಮತ್ತಷ್ಟು ಅಚ್ಚುಕಟ್ಟು ಮಾಡುವ ಕೆಲಸ ಭರದಿಂದ ಸಾಗಿದೆ. ಮಹೋತ್ಸವದಲ್ಲಿ ಕೆ.ಎಸ್.ಆರ್.ಟಿಸಿ ಬಸ್ ವ್ಯವಸ್ಥೆ ಹಾಗೂ ಪೊಲೀಸ್ ಭದ್ರತೆ ಹಾಗೂ ವೈರಮುಡಿ ಉತ್ಸವವನ್ನು ನಿರ್ವಹಿಸುವ ದೇವಾಲಯದ ಸಿಬ್ಬಂದಿಯ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ
ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಶಸ್ತವಾದ ಮೀನ-ಚೈತ್ರಮಾಸದ ಪಷ್ಯ ನಕ್ಷತ್ರದ ಶುಭದಿನವಾದ ಶನಿವಾರ ಮಾ 28ನ ರಂದು ಶನಿವಾರ ರಾತ್ರಿ ಚೆಲುವನಾರಾಯಣ ಸ್ವಾಮಿಯವರ ವಿಶ್ವವಿಖ್ಯಾತ ವೈರಮುಡಿ ಉತ್ಸವ ನಡೆಯಲಿದೆ. ವೈರಮುಡಿ ಉತ್ಸವ ರಾತ್ರಿ8ರಿಂದ ಆರಂಭವಾಗಿ ತಡರಾತ್ರಿ 4 ಗಂಟೆಯವರೆಗೆ ನಡೆಯಲಿದೆ. ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭವ್ಯಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಕಾತರರಾಗಿದ್ದಾರೆ ವೈರಮುಡಿ ರಾಜಮುಡಿ ತಿರುವಾಭರಣಪೆಟ್ಟಿಗೆಗಳನ್ನು ಜಿಲ್ಲಾಖಜಾನೆಯಿಂದ ಶನಿವಾರ ಬೆಳಿಗ್ಗೆ 7ಕ್ಕೆ ಹೊರತಂದು ಮಂಡ್ಯದ
ಜನಾರ್ಧನಸ್ವಾಮಿ ದೇವಾಲಯದಲ್ಲಿ ಪ್ರಥಮಪೂಜೆ ನೆರವೇರಿಸಲಾಗುತ್ತದೆ ಶ್ರೀರಂಗಪಟ್ಟಣ ಮಾರ್ಗವಾಗಿ ಬರುವ ತಿರುವಾಭರಣಪೆಟ್ಟಿಗೆಗೆ ದಾರಿಯುದ್ದಕ್ಕೂ ವಿವಿಧ ಗ್ರಾಮಗಳಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಮೇಲುಕೋಟೆಗೆ ಬಂದ ನಂತರ ಕಿರೀಟಗಳಿಗೆ ಯತಿರಾಜದಾಸರ್ ಗುರುಪೀಠದಲ್ಲಿ ಕೊನೆಯ ಪೂಜೆ ನಡೆದ ನಂತರ ದೇವಾಲಯ ಪ್ರವೇಶಿಸುತ್ತವೆ.
ಮಂಡ್ಯಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಮಾರ್ಗದರ್ಶನಲ್ಲಿ ವೈರಮುಡಿ ಉತ್ಸವಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಮಂಡ್ಯಜಿಲ್ಲಾಧಿಕಾರಿ ಕುಮಾರ ಪೊಲೀಸ್ ವರಿಷ್ಟಾಧಿಕಾರಿ ಶೋಭಾರಾಣಿ ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಸೂಚನೆಯಂತೆ ಜಿಲ್ಲಾಡಳಿತದ ಅಧಿಕಾರಿಗಳ ತಂಡ ವೈರಮುಡಿ ಕಿರೀಟಧಾರಣ ಮಹೋತ್ಸವ ವ್ಯವಸ್ಥಿತವಾಗಿ ನಡೆಸಲು ಶ್ರಮಿಸುತ್ತಿದ್ದಾರೆ ಗಮನಸೆಳೆದ ಗೋಪುರಗಳ ಮಾದರಿ ಪ್ರವೇಶದ್ವಾರ: ಇದೇ ಪ್ರಥಮಭಾರಿಗೆ ಚೆಲುವನಾರಾಯಣಸ್ವಾಮಿ ದೇವಾಲಯಯೋಗನರಸಿಂಹಸ್ವಾಮಿಬೆಟ್ಟ ಭುವನೇಶ್ವರಿ ಮಂಟಪಗಳಿರುವ ಮಾದರಿಯಲ್ಲಿ ಲೈಂಟಿಂಗ್ ಸಮೇತವಾದ ಸ್ವಾಗತಕಮಾನುಗಳನ್ನು ಹಾಕುತ್ತಿರುವುದು ಹೊಸತನಕ್ಕೆ ಕಾರಣವಾಗಿದ್ದು ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ವೈರಮುಡಿ ಉತ್ಸವದಲ್ಲಿ ಇಂದು ನಾಗವಲ್ಲೀ ಮಹೋತ್ಸವ ಶ್ರೀರಾಮನವಮಿ: ಪರಾಭವನಾಮ ಸಂವತ್ಸವರದ ವೈರಮುಡಿ ಬ್ರಹ್ಮೋತ್ಸವದ ಮೂರನೇ ತಿರುನಾಳ್ ದಿನವಾದ ಶುಕ್ರವಾರ ಮದ್ಯಾಹ್ನ 3ಗಂಟೆಗೆ ನಾಗವಲ್ಲೀ ಉತ್ಸವ ಆರಂಭವಾಗಲಿದೆ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಚೆಲುವನಾರಾಯಣಸ್ವಾಮಿ ಉತ್ಸವ ಮೊದಲು ರಾಮಚಂದ್ರನ ಸಾನ್ನಿಧ್ಯವಿರುವ ಸೀತಾರಣ್ಯಕ್ಕೆ ನೆರವೇರಿ ನಂತರ ಕಲ್ಯಾಣಿಗೆ ಬಿಜಯಮಾಡಿದ ನಂತರ ನಾಗವಲ್ಲೀ ನರಂದಾಳಿಕಾರೋಹಣ ನಡೆಯಲಿದೆ 8 ಗಂಟೆಯ ವೇಳೆಗೆ ದೇವಾಲಯ ತಲುಪಲಿದೆ ರಾತ್ರಿ 9ರ ನಂತರ ಚಂದ್ರಮಂಡಲವಾಹನೋತ್ಸವ ನಡೆಯಲಿದೆ. ವೈರಮುಡಿ ಉತ್ಸವವಿಶೇಷ ವ್ಯವಸ್ಥೆಗಳೇನುವೈರಮುಡಿ ಉತ್ಸವದಂದು ಅನ್ನದದಾನ ಭವನದಲ್ಲಿ 24 ಗಂಟೆ ಪ್ರಸಾದ ವಿತರಣೆ ವೈರಮುಡಿ ಉತ್ಸವದ ವಿದಿವಿಧಾನಗಳು 10 ಬೃಹತ್ ಪರದೆಗಳ ಮೂಲಕ ಉತ್ಸವ ಬೀದಿಯಲ್ಲಿ ಪ್ರಸಾರ ಜಕ್ಕನಹಳ್ಳಿಯಿಂದ ಮೇಲುಕೋಟೆವರೆಗೆ 7ಕಿಮಿನಿಂದಲೇ ದೀಪಾಲಂಕಾರ ತೋರಣ ಅಳವಡಿಕೆ ಕಣಿವೆಯ 2ಕಿ.ಮಿನಿಂದ ದೀಪಾಲಂಕಾರದಲ್ಲಿ ಝಗಮಗಿಸುತ್ತಿರುವ ಮೇಲುಕೋಟೆ ಭಕ್ತರ ಸುರಕ್ಷತೆಗಾಗಿ 1500 ಮಂದಿ ಪೊಲೀಸರಿಂದ ಭದ್ರತೆ 24 ಗಂಟೆ ಕಟ್ಟೆಚ್ಚರ 64 ಸಿಸಿ ಟಿವಿ ಕಣ್ಗಾವಲು, ಶುಧ್ದ ಕುಡಿಯುವ ನೀರು ಮತ್ತು ನಿರಂತರಸ್ವಚ್ಛತೆ,ಅಚ್ಚುಕಟ್ಟಾದ ಬ್ಯಾರಕೇಡ್ ನಿರ್ಮಾಣ ಬೆಂಗಳೂರು, ಮಂಡ್ಯ, ನಾಗಮಂಗಲ, ಕೆ.ಆರ್.ಪೇಟೆ ಮೈಸೂರು ಹಾಸನದಿಂದ 150ವಿಶೇಷ ಬಸ್ ಸೌಕರ್ಯವೈರಮುಡಿಗೆ ಬರುವ ಭಕ್ತರ ವಾಹನಗಳಿಗೆ 26ಕಡೆ ವ್ಯವಸ್ಥಿತ ಪಾರ್ಕಿಂಗ್ , ದೇವಾಲಯದ ಆವರಣಗಳಿಗೆ ಆಕರ್ಷಕ ಪುಷ್ಪಾಲಂಕಾರ ವೈರಮುಡಿಯನ್ನು ಮಹಾರಾಜರು ವೀಕ್ಷಿಸುತ್ತಿದ್ದ ಸ್ಥಳದಲ್ಲಿ ನಯನ ಮನೋಹರ ಪುಷ್ಪಮಂಟಪ ನಿರ್ಮಾಣ ಚೆಲುವನಾರಾಯಣನ ಉತ್ಸವಗಳಿಗೆ ವಿಶೇಷ ತೋಮಾಲೆ ಸೇವೆ. ವಿಶೇಷ ಮಂಗಳವಾದ್ಯ ತಂಡ ನಿಯೋಜನೆ
ಕಲ್ಯಾಣಿ, ಬೆಟ್ಟ, ದೇವಾಲಯ ಬಸ್ನಿಲ್ದಾಣ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರದ ಬಳಿ ಆಂಬುಲೆನ್ಸ್ ನೊಂದಿಗೆ ವೈದ್ಯಕೀಯತಂಡಗಳು ಸಜ್ಜು ಎರಡನೇ ತೆಪ್ಪೋತ್ಸವದಂದು ಲೇಸರ್ ಪ್ರದರ್ಶನ ಹಾಗೂ ತೆಪ್ಪೋತ್ಸವ ,ಭರತನಾಟ್ಯ ಚಂಡೆವಾದನ ನಾದಸ್ವರ ವಾದನ ನಡೆಯಲಿದೆ
ಚಲುವನಾರಾಯಣ ಸ್ವಾಮಿಯ ವೈರಮುಡಿ ಕಿರೀಟಧಾರಣೆಗಾಗಿ ಮೇಲುಕೋಟೆ ಸಜ್ಜು



