ಬೆಂಗಳೂರು: ಭಾರತದ ಮೊದಲ ಫ್ಯಾಷನ್  ಉದ್ಯಮಶೀಲತೆಯ ರಿಯಾಲಿಟಿ ಶೋ “ಪಿಚ್ ಟು ಗೆಟ್ ರಿಚ್” ತನ್ನ ಹೆಚ್ಚು ಚರ್ಚೆಗೆ ಗ್ರಾಸವಾದ “ಮೆನ್ ಇನ್ ಬ್ಲಾಕ್” ನಗರ ಸಕ್ರಿಯತೆಯನ್ನು ಬೆಂಗಳೂರಿಗೆ ತಂದಿದೆ. ಜಿಯೋಹಾಟ್ ಸ್ಟಾರ್ನಲ್ಲಿ ಈ ವಾರ ಶೋ ಬಿಡುಗಡೆಯಾದ ಹಿನ್ನೆಲೆಯಲ್ಲಿ ಇದು ಭಾರೀ ಸಂಚಲನ ಮೂಡಿಸಿದೆ. ಈ ಅಭಿಯಾನದಲ್ಲಿ ೩೦ಕ್ಕೂ ಹೆಚ್ಚು ವ್ಯಕ್ತಿಗಳು ಆಕರ್ಷಕ ಕಪ್ಪು ಸೂಟ್ಗಳನ್ನು ಧರಿಸಿ, “ಪಿಚ್ ಟು ಗೆಟ್ ರಿಚ್” ಬ್ರ್ಯಾಂಡ್ನ ಚಿನ್ನದ ಬ್ರೀಫ್ಕೇಸ್ಗಳನ್ನು ಹೊತ್ತು, ಬೆಂಗಳೂರಿನ ಕೆಲವು ಪ್ರತಿಷ್ಠಿತ ಸ್ಥಳಗಳಾದ ಎಂಜಿ ರಸ್ತೆ ಚರ್ಚ್  ಸ್ಟ್ರೀಟ್ ಕಬ್ಬನ್ ಪಾರ್ಕ್ ಕೋರಮಂಗಲ ೫ನೇ ಬ್ಲಾಕ್
ಇಂದಿರಾನಗರ ೧೦೦ ಅಡಿ ರಸ್ತೆ ಕಮರ್ಷಿಯಲ್ ಸ್ಟ್ರೀಟ್ ಫೀನಿಕ್ಸ್ ಮಾರ್ಕೆಟ್ ಸಿಟಿ ವೈಟ್ಫೀಲ್ಡ್ ಬ್ರಿಗೇಡ್ ರಸ್ತೆ ಮತ್ತು ಜಯನಗರ ೪ನೇ ಬ್ಲಾಕ್ ನಲ್ಲಿ ಹೆಜ್ಜೆ
ಹಾಕಿದರು.ಈ ಅಭಿಯಾನವು ನಗರದಾದ್ಯಂತ ಜನರ ಗಮನ ಸೆಳೆಯಿತು ಮತ್ತು ಕುತೂಹಲ ಕೆರಳಿಸಿತು. ಇದು ಶೋನ ಪ್ರಮುಖ ವಿಷಯಗಳಾದ
ಶಕ್ತಿ, ಮಹತ್ವಾಕಾಂಕ್ಷೆ, ಮತ್ತು ಅವಕಾಶವನ್ನು ಸಂಕೇತಿಸುತ್ತದೆ.
ಫ್ಯಾಷನ್ ಎಂಟರ್ಪೆ್ರನ್ಯೂರ್ ಫಂಡ್ನ ಸಂಸ್ಥಾಪಕರು ಮತ್ತು “ಪಿಚ್ ಟು ಗೆಟ್ ರಿಚ್” ನ ಸೃಜನಾತ್ಮಕ ಶಕ್ತಿ ಕೇಂದ್ರವಾದ ಸಂಜಯ್ ನಿಗಮ್ “ಬ್ರೀಫ್ಕೇಸ್ ಅವಕಾಶವನ್ನು ಪ್ರತಿನಿಧಿಸುತ್ತದೆ – ಇದು ಪ್ರತಿಯೊಬ್ಬರಲ್ಲೂ ಇರುತ್ತದೆ, ಆದರೆ ಕೆಲವರಿಗೆ ಮಾತ್ರ ಅದನ್ನು ಹೇಗೆ ಅನ್ಲಾಕ್ ಮಾಡಬೇಕೆಂದು ತಿಳಿದಿದೆ,” ಎಂದರು. “ಪಿಚ್ ಟು ಗೆಟ್ ರಿಚ್” ಭಾರತದಾದ್ಯಂತದ ೧೪ ಉದಯೋನ್ಮುಖ ಫ್ಯಾಷನ್ ಉದ್ಯಮಿಗಳಿಗೆ ಉನ್ನತ ಹೂಡಿಕೆದಾರರು ಮತ್ತು ಕೈಗಾರಿಕಾ ದಿಗ್ಗಜರ ಮುಂದೆ ತಮ್ಮ ಕಲ್ಪನೆಗಳನ್ನು ಪ್ರಸ್ತುತಪಡಿಸಲು ವೇದಿಕೆಯನ್ನು ನೀಡುತ್ತದೆ. ಈ ಶೋನಲ್ಲಿ ಅಕ್ಷಯ್ ಕುಮಾರ್, ಕರಣ್ಜೋಹರ್, ಮಲೈಕಾ ಅರೋರಾ ಮತ್ತು ಮನೀಶ್ ಮಲ್ಹೋತ್ರಾ ಅವರೊಂದಿಗೆ ಹೂಡಿಕೆದಾರರ ಸಮಿತಿಯು ೪೦ ಕೋಟಿ ಮೌಲ್ಯದ ನಿಧಿಗಾಗಿ ವ್ಯಾಪಾರ ಕಲ್ಪನೆಗಳನ್ನು ಮೌಲ್ಯಮಾಪನ ಮಾಡುತ್ತದೆ


 
		 
		 
		

 
    