ನವದೆಹಲಿ: ಬಾಂಗ್ಲಾದೇಶ ವಿರುದ್ಧ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಲಂಕಾ ಬ್ಯಾಟಿಗ ಆಂಜಲೋ ಮ್ಯಾಥ್ಯೂಸ್ ಟೈಮ್ಡ್ ಔಟ್ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ ಮ್ಯಾಥ್ಯೂಸ್ ತಡ ಮಾಡಿದ್ದೇಕೆ ಎಂಬ ಬಗ್ಗೆ ಲಂಕಾ ನಾಯಕ ಕುಸಲ್ ಮೆಂಡಿಸ್ ಪಂದ್ಯದ ನಂತರ ಸ್ಪಷ್ಟನೆ ನೀಡಿದ್ದಾರೆ.
ಈ ಪಂದ್ಯವನ್ನು ಬಾಂಗ್ಲಾ 3 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಅದಾದ ಬಳಿಕ ಮಾತನಾಡಿದ ಕುಸಲ್ ಮೆಂಡಿಸ್ ಮ್ಯಾಥ್ಯೂಸ್ ಕ್ರೀಸ್ ಗೆ ಬರಲು ತಡ ಮಾಡಲು ನಿಜ ಕಾರಣವೇನೆಂದು ತಿಳಿಸಿದ್ದಲ್ಲದೆ, ಬಾಂಗ್ಲಾ ವರ್ತನೆಯನ್ನು ಆಕ್ಷೇಪಿಸಿದ್ದಾರೆ.
‘ಇದು ನಿಜಕ್ಕೂ ಬೇಸರದ ಸಂಗತಿ. ಆಂಜಲೋ ಕ್ರೀಸ್ ಗೆ ಬಂದಾಗ 5 ಸೆಕೆಂಡ್ ಬಾಕಿಯಿತ್ತು. ಆಗಲೇ ಅವರಿಗೆ ಹೆಲ್ಮೆಟ್ ನ ಪಟ್ಟಿ ಬಿರುಕು ಬಂದಿದೆ ಎಂದು ಗೊತ್ತಾಗಿದ್ದು. ಬೇಸರದ ಸಂಗತಿ ಎಂದರೆ ಅಂಪಾಯರ್ ಕೂಡಾ ಸರಿಯಾದ ನಿರ್ಧಾರ ತೆಗೆದುಕೊಂಡು ಸಹಾಯ ಮಾಡಲಿಲ್ಲ’ ಎಂದಿದ್ದಾರೆ.