ಕಲಬುರಗಿ: ವಿಶ್ವ ಟೆನಿಸ್ ಪಂದ್ಯಾವಳಿಯ ಆತಿಥ್ಯ ವಹಿಸಲು ಕಲಬುರಗಿ ನಗರ ಸಜ್ಜಾಗಿದೆ. ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ನ.26ರಿಂದ ಡಿ.3ರ ವರೆಗೆ ಅಲ್ಟ್ರಾಟೆಕ್ ಸಿಮೆಂಟ್ಸ್ ಎಟಿಎಫ್ ಪುರುಷರ ಟೆನಿಸ್ ಪಂದ್ಯಾವಳಿ ನಡೆಯಲಿದೆ.
ಎಂಟು ವರ್ಷಗಳ ಅನಂತರ ನಗರದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಜಗತ್ತಿನ 9 ದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, ವಿಶ್ವದ 65ನೇ ಶ್ರೇಯಾಂಕಿತ ಆಟಗಾರ ಎವ್ಗೆನಿ ಡಾನ್ ಸ್ಕಾಯ್, ಜರ್ಮನಿಯ ಲೂಯಿಸ್ ವೆಸೆಲ್ಸ್, ಭಾರತದ ದಿಗ್ವಿಜಯ ಸಿಂಗ್ ಪಾಲ್ಗೊಳ್ಳಲಿದ್ದಾರೆ.