ಬೆAಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಂಪುಟ ಸಚಿವರು ಸರ್ಕಾರಿ ಮಹಿಳಾ ನೌಕರರು, ಗಾರ್ಮೆಂಟ್ಸ್ ಮಹಿಳಾ ನೌಕರರು, ಐ.ಟಿ.ಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರ ಸಂದರ್ಭದಲ್ಲಿ ಒಂದು ರಜಾ ನೀಡಬೇಕು ಎಂದು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಯಿತು.
ಈ ಶುಭ ಸಂದರ್ಭದಲ್ಲಿ ಅಖಿಲ ಕರ್ನಾಟಕ ಸರ್ಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷೆ ರೋಶನಿಗೌಡರವರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದರು.
ಮಹಿಳೆಯರು ಅಬಲೆಯರು ಅಲ್ಲ, ಇಂದು ಸಬಲೆಯರಾಗಿ ಹೊರಹೊಮ್ಮಿದ್ದಾರೆ. ಮಹಿಳೆಯು ಕುಟುಂಬದ ಜವಾಬ್ದಾರಿಯ ಜೊತೆಯಲ್ಲಿ ಸಮಾಜದ ಅಭಿವೃದ್ದಿಗೆ ಶ್ರಮಿಸುವುಳು. ತಂದೆ, ತಾಯಿ ಅತ್ತೆ, ಮಾವ, ಗಂಡ, ಮಕ್ಕಳು ಹೀಗೆ ಕುಟುಂಬದವರ ಎಲ್ಲರ ಯೋಗಕ್ಷೇಮ ನೋಡಿಕೊಂಡು ನಂತರ ಸಮಯದ ಗಮನಕಡೆ ಕೋಡದೇ ತನ್ನ ಕೆಲಸದಲ್ಲಿ ನಿರತಳಾಗುತ್ತಾಳೆ.
ಎಂದು ಸಹ ದಣಿವರಿಯದ ಕೆಲಸ ಮಹಿಳೆಯರು ಪ್ರತಿ ತಿಂಗಳ ಋತುಚಕ್ರ ಸಂದರ್ಭದಲ್ಲಿ ಮಾನಸಿಕ, ದೃಹಿಕವಾಗಿ ಯಾತೆನೆ ಅನುಭವಿಸುತ್ತಾಳೆ ಅದರೇ ಇದೆಲ್ಲವನ್ನು ಲೆಕ್ಕಿಸದೇ ತನಗೆ ವಹಿಸಿದ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತಾಳೆ. ರಾಜ್ಯ ಸಚಿವ ಸಂಪುಟದಲ್ಲಿ ಋತುಚಕ್ರದ ಸಂದರ್ಭದಲ್ಲಿ ವೇತನಸಹಿತ ಒಂದು ದಿನದ ರಜಾ ನೀಡಬೇಕು ಎಂದು ಸರ್ಕಾರ ಸಚಿವ ತೀರ್ಮಾನ ಮಾಡಿರುವುದು ರಾಜ್ಯದ ಮಹಿಳೆಯರಿಗೆ ಸಂತಸದ ತೀರ್ಮಾನವಾಗಿದೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರಿಗೂ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಧನ್ಯವಾದಗಳು ಅವರು ತಿಳಿಸಿದರು.