ಮೆಸ್ಸಿ ಸಂಭ್ರಮ ಡಿಸೆಂಬರ್ ತಿಂಗಳಿನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಜಾಗತಿಕ ಫುಟ್ಬಾಲ್ ದಿಗ್ಗಜ ಅರ್ಜೆಂಟೀನಾದ ಲಿಯೊನೆಲ್ ಮೆಸ್ಸಿ ಭೇಟಿ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಭಾರತ ಪ್ರವಾಸ ಕೈಗೊಳ್ಳುವುದು ನನಗೆ ನಿಜಕ್ಕೂ ಒಂದು ದೊಡ್ಡ ಗೌರವ ಎಂದು ಹೇಳಿರುವ ಮೆಸ್ಸಿ ಇದೇ ವೇಳೆ ೧೪ ವರ್ಷಗಳ ಹಿಂದೆ ತಾವು ಭೇಟಿ ನೀಡಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಭಾರತದಲ್ಲಿನ ಹೊಸ ತಲೆಮಾರಿನ ಫುಟ್ಬಾಲ್ ಅಭಿಮಾನಿಗಳನ್ನು ಭೇಟಿ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೆಸ್ಸಿ ತಮ್ಮ ಅಧಿಕೃತ ಪ್ರಕಟಣೆಯಲ್ಲಿತಿಳಿಸಿದ್ದಾರೆ.
ಆಯೋಜಕರು ಈ ಹಿಂದೆ ಆಗಸ್ವ್ ೧೫ರಂದು ಮೆಸ್ಸಿ ಭಾರತ ಪ್ರವಾಸದ ವಿವರಗಳನ್ನು ಅನಾವರಣ ಗೊಳಿಸಿದ್ದರು. ಡಿ.೧೩ರಂದು ಕೋಲ್ಕೊತಾಗೆ ಬಂದಿಳಿಯುವ ಮೂಲಕ ಮೆಸ್ಸಿ ಭಾರತ ಪ್ರವಾಸವನ್ನು ಆರಂಭಿಸಲಿದ್ದಾರೆ. ಕೋಲ್ಕೊತಾ, ಅಹಮದಾಬಾದ್, ಮುಂಬಯಿ ಮತ್ತು ಹೊಸದಿಲ್ಲಿಸೇರಿದಂತೆ ಒಟ್ಟು ೪ ನಗರಗಳಿಗೆ ಅವರು ಭೇಟಿ ನೀಡಲಿದ್ದಾರೆ. ಡಿ.೧೫ರಂದು ಮೆಸ್ಸಿ, ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವ ಮೂಲಕಅವರ ಪ್ರವಾಸ ಕೊನೆಗೊಳ್ಳಲಿದೆ.
ಕೋಲ್ಕೊತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿಮೆಸ್ಸಿ ಸೌಹಾರ್ದ ಪಂದ್ಯ ಆಡಲಿದ್ದಾರೆ. ಈ ಪಂದ್ಯದಲ್ಲಿಸೌರವ್ ಗAಗೂಲಿ, ಬೈಚುಂಗ್ ಭುಟಿಯಾ ಮತ್ತು
ಲಿಯಾಂಡರ್ ಪೇಸ್ ಮತ್ತಿತರ ಖ್ಯಾತನಾಮರು ಪಾಲ್ಗೊಳ್ಳಲಿದ್ದಾರೆ. ಅದೇ ಕ್ರೀಡಾಂಗಣದಲ್ಲಿಸAಗೀತ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ. ಪ್ರವೇಶ ಟಿಕೆಟ್ ಬೆಲೆ ೩,೫೦೦ ರೂ.ಗಳಿಂದ ಆರAಭಗೊಳ್ಳುವ ನಿರೀಕ್ಷೆಯಿದೆ. ಅವರು ಕೇರಳಕ್ಕೂ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಲಿಯೋನೆಲ್ ಮೆಸ್ಸಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ೭೫ನೇ ಜನ್ಮದಿನಕ್ಕೆ ಸಹಿ ಮಾಡಿದ ೨೦೨೨ರ ವಿಶ್ವಕಪ್ ವಿಜೇತ ಅರ್ಜೆಂಟೀನಾ ಜೆರ್ಸಿಯನ್ನು ವಿಶೇಷ ಉಡುಗೊರೆಯಾಗಿ ಕಳುಹಿಸಿದ್ದಾರೆ. ಡಿಸೆಂಬರ್ನಲ್ಲಿ ‘ಉಔಂಖಿ ಖಿouಡಿ oಜಿ Iಟಿಜiಚಿ ೨೦೨೫’ ಭಾಗವಾಗಿ ಮೆಸ್ಸಿ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಈ ಪ್ರವಾಸವು ಕೋಲ್ಕತ್ತಾ, ಅಹಮದಾಬಾದ್, ಮುಂಬೈ ಮತ್ತು ನವದೆಹಲಿ ನಗರಗಳನ್ನು ಒಳಗೊಂಡಿರುತ್ತದೆ.