ಬಾಗಲಕೋಟೆ: ಬಾಗಲಕೋಟೆಗೆ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಎಚ್.ವೈ.ಮೇಟಿಯವರ ಕನಸಾಗಿತ್ತು. ಇವರ ಕನಸಿನಂತೆ ಮೆಡಿಕಲ್ ಕಾಲೇಜು ಬರುತ್ತಿದೆ. ಕನಸು ನನಸಾಗುತ್ತಿರುವುದನ್ನು ನೋಡಲು ಎಚ್.ವೈ.ಮೇಟಿಯವರೇ ಜೊತೆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಇಲ್ಲಿನ ನವನಗರ ಕಾಲೋನಿಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿಯವರ ಪರ ಮತಯಾಚಿಸಿ ಮಾತನಾಡಿದರು. ಬಾಗಲಕೋಟೆಗೆ ಮೆಡಿಕಲ್ ಕಾಲೇಜು ತರಲು ಎಚ್.ವೈ.ಮೇಟಿಯವರು ಬಹಳ ಶ್ರಮಿಸಿದ್ದರು. ಅವರ ಶ್ರಮದಂತೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ನಡೆಯುತ್ತಿದೆ. ಅವರ ಈ ಸಾಧನೆಯನ್ನು ನೋಡಲು ಅವರೇ ಇಲ್ಲ ಎಂದು ನುಡಿದರು.
ಈಗ ಎಚ್.ವೈ.ಮೇಟಿಯವರ ಬದಲಿಗೆ ಅವರ ಪುತ್ರ ಉಮೇಶ್ ಮೇಟಿ ಕಣದಲ್ಲಿದ್ದಾರೆ. ಇವರನ್ನು ಅತಿ ಹೆಚ್ಚು ಅಂತರದಿಂದ ಗೆಲ್ಲಿಸಿ…
ಮೇಟಿಯವರ ಕನಸು ನನಸಾಗಿದೆ ಆದರೆ ಅವರೇ ಇಲ್ಲ: ಸಿಎಂ



