ನೆಲಮಂಗಲ: ಅನಧಿಕೃತವಾಗಿ ಹೋಟೆಲ್, ಅಂಗಡಿಗಳನ್ನು ತೆರೆದು ಹಸಿ ಮಾಂಸದಿಂದ ಚಿಕನ್, ಮಟನ್, ಚಾಕಣ, ಖುಷ್ಕ, ಬಿರಿಯಾನಿ, ಮೀನು ಮತ್ತಿತರೆ ಮಾಂಸಾಹಾರಗಳನ್ನು ಅವೈಜ್ಞಾನಿಕವಾಗಿ ಸುಟ್ಟು, ಬೇಯಿಸಿ ಮಾರಾಟ ಮಾಡುತ್ತಿರುವುದರಿಂದ ಸುತ್ತಾಮುತ್ತಾ ಹೊಗೆ ಮತ್ತು ದುರ್ನಾತ ಹಬ್ಬಿ ಗಾಳಿ ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ಶಿಕ್ಷಣಾಧಿಕಾರಿ ಎಂ. ಹೆಚ್. ತಿಮ್ಮಯ್ಯ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಬಿ.ಇ.ಓ ಕಛೇರಿ ಮುಂಬದಿ ಕೆಲ ವ್ಯಕ್ತಿಗಳು ಅನಧಿಕೃತವಾಗಿ ಪೆಟ್ಟಿ ಅಂಗಡಿ ಸೇರಿದಂತೆ ದೊಡ್ಡಗಾತ್ರದ ತಳ್ಳುವ ಗಾಡಿಗಳಲ್ಲಿ ಅನಧಿಕೃತ ವಾಗಿ ಹೋಟೆಲ್, ಅಂಗಡಿಗಳನ್ನು ತೆರೆದು ಫುಟ್ ಪಾತ್ ಆಕ್ರಮಿಸಿಕೊಂಡಿರುವ ಜೊತೆಗೆ ಹಾಗೂ ರಸ್ತೆಯನ್ನು ಆಕ್ರಮಿಸಿಕೊಂಡು ನಿತ್ಯ 4 – 5 ದೊಡ್ಡ ದೊಡ್ಡ ಕೈಗಾಡಿಗಳನ್ನು ನಿಲುಗಡೆ ಮಾಡಿಕೊಂಡು ಬೆಂಚ್, ಚೇರ್ಮತ್ತು ಸ್ಟೂಲ್ ಗಳನ್ನು ಅಳವಡಿಸಿ ರಾಜಾರೋಷವಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವುದ
ರಿಂದ ನಮಗಷ್ಟೆ ಅಲ್ಲದೇ, ಇಲ್ಲಿ ಸಂಚರಿಸುವ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಹಾಗೂವಾಹನ ಸವಾರರಿಗೂ ತುಂಬಾ ತೊಂದರೆಯಾಗುತ್ತಿದೆ ಕಛೇರಿ ಕೆಲಸಗಳಿವೆ ಬರುವವರ ವಾಹನನಿಲುಗಡೆಗೆ ಅವಕಾಶ ನೀಡದೇ ದರ್ಪ ತೋರುವಮೂಲಕ ತೊಂದರೆ ನೀಡುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ ಎಂದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರುದ್ರಾರಾಧ್ಯ ಮಾತನಾಡಿ ಕೆಲ ಗ್ರಾಹಕರು ತಿಂದು ಮಿಕ್ಕ ಮೂಳೆ, ಮಾಂಸಾಹಾರ ಪದಾರ್ಥ, ಎಂಜಲು ಪ್ಲೇಟ್, ಪ್ಲಾಸ್ಟಿಕ್ ಮತ್ತಿತರೆ ಅನುಪಯುಕ್ತ ಅಪಾಯಕಾರಿ ತ್ಯಾಜ್ಯ ವಸ್ತುಗಳು ಹಾಗೂ ಕೆಲವರು ಡ್ರಿಂಕ್ಸ್ ಬಾಟಲಿ, ಪಾಕೆಟ್ ಗಳನ್ನು ಎಲ್ಲೆಂದರಲ್ಲೇ ಎಸೆದು ಹೋಗುತ್ತಿರುವುದರಿಂದ ಸ್ವಚ್ಛತೆ ಹಾಳಾಗಿರುವ ಜೊತೆಗೆ ಬೀದಿ ನಾಯಿಗಳ ಕಾಟವು ಹೆಚ್ಚಾಗಿದ್ದು ಸಾರ್ವಜನಿಕರಿಗೆ ಹಾಗೂ ನಮ್ಮ ಕಛೇರಿ ಕೆಲಸಗಳಿಗೆ ಬರುವ ಅಧಿಕಾರಿಗಳು, ಸಿಬ್ಬಂಧಿವರ್ಗ, ಶಿಕ್ಷಕ, ಶಿಕ್ಷಕಿಯರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ನಾಯಿಗಳ ಕಾಟದ ಜೊತೆಗೆ ಅನಾರೋಗ್ಯದ ಭೀತಿ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾರ್ವಜನಿಕರಿಗೆ ಮತ್ತು ನಮಗಾಗುತ್ತಿರುವ ತೊಂದರೆಗಳನ್ನು ಹೋಗಲಾಡಿಸಿ ಸೂಕ್ತ ರಕ್ಷಣೆ ನೀಡಬೇಕೆಂದು ಎಲ್ಲರ ಪರವಾಗಿ ಮನವಿ ಮಾಡಿಕೊಳ್ಳಲಾಗಿದೆ. ಒಬ್ಬರ ಮೇಲೆ ಮತ್ತೊಬ್ಬರು ಪೈಪೋಟಿ ನಡೆಸಿ ಅನಧಿಕೃತವಾಗಿ ತೆರೆದಿರುವ ಅಂಗಡಿ, ಹೋಟೆಲ್ ಗಳನ್ನು ತೆರವು ಗೊಳಿಸದೆ ಹೋದರೆ ತಾಲ್ಲೂಕಿನ ಸಮಸ್ತ ಶಿಕ್ಷಕರು ಮತ್ತು ನೌಕರರೊಡಗೂಡಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಾಸುದೇವಾಮೂರ್ತಿ ಎಚ್ಚರಿಸಿದರು.
ಮನವಿದಾರರಿಗೆ ಸ್ಪಂದಿಸಿದ ಪೌರಾಯುಕ್ತರ ಹೆಚ್. ಎಂ.ಮನುಕುಮಾರ್ ಅವರು ಕೂಡಲೇ ಅನಧಿಕೃತ ಅಂಗಡಿ, ಹೋಟೆಲ್ ಗಳನ್ನು ತೆರವುಗೊಳಿಸುವಂತೆ ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದರು.ಸಂದರ್ಭದಲ್ಲಿ ಗಿರೀಶ್, ರವಿಕುಮಾರ್, ಕೃಷ್ಣಮೂರ್ತಿ, ನಂಜಮ್ಮ, ಗಂಗರಾಜು ಮತ್ತಿತರರು ಉಪಸ್ಥಿತರಿದ್ದರು.