ನಿಜಾಮಾಬಾದ್: ತೆಲಂಗಾಣ ವಿಧಾನ ಸಭೆ ಚುನಾವಣೆ ಯ ಪ್ರತಿಷ್ಠಿತ ಕ್ಷೇತ್ರ ವಾಗಿರುವ ನಿಜಾಮಾಬಾದ್ ಕ್ಷೇತ್ರದಲ್ಲಿ ಕ್ಲಸ್ಟರ್ ಉಸ್ತುವಾರಿ ಆಗಿರುವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಎಂಐಎಂ ಹಾಗೂ ಬಿಎಸ್ ಆರ್.ನಾಯಕರು ಕಾಂಗ್ರೆಸ್ ಸೇರಿದರು.
ನಿಜಾಮಾ ಬಾದ್ನ ಧರ್ಮ ಪುರಿ ಹಿಲ್ಸ್ನಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಪಾಲಿಕೆಯ ಸದಸ್ಯ ಎಂಐಎಂನ ಹಾರೂನ್ ಹಾಗೂ ಬೆಂಬಲಿಗರು, ಬಿಎಸ್ಆರ್ನ ಪ್ರಭಾವಿ ಮುಖಂಡರಾದ ಜಿಲಾನಿ, ಬಾಬಾ ಸಾಬ್, ಇಮ್ರಾನ್ ಸೇರಿದಂತೆ ಹಲವಾರು ನಾಯಕರು ಕಾಂಗ್ರೆಸ್ ಸೇರ್ಪಡೆ ಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಮೀರ್ ಅಹಮದ್ ಅವರು, ತೆಲಂಗಾಣ ದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು ಕಾಂಗ್ರೆಸ್ ಸರ್ಕಾರ ಬರಬೇಕು ಎಂದು ಜನತೆ ಬಯಸಿದ್ದಾರೆ.ಹೀಗಾಗಿ ಬೇರೆ ಬೇರೆ ಪಕ್ಷ ಗಳ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಇವರ ಸೇರ್ಪಡೆ ಯಿಂದ ಕ್ಷೇತ್ರ ದಲ್ಲಿ ಶಕ್ತಿ ಬಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಶಬ್ಬೀರ್ ಅಲಿ, ಉಸ್ತುವಾರಿ ಅಸೀಫ್ ಖುರೇಶಿ, ಹಿರಿಯ ನಾಯಕ ತಾಹೀರ್ ಸಾಬ್, ಕೇಶವ್ ವೇಣು ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಜಮೀರ್ ಅಹಮದ್ ಖಾನ್ ಅವರು, ಅರ್ಮೋರ್ ವಿಧಾನ ಸಭೆ ಕ್ಷೇತ್ರದ ಪೆರ್ಕಿಟ್ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ರೆಡ್ಡಿ ಅವರ ಪರ ಪ್ರಚಾರ ಸಭೆ ನಡೆಸಿ, ತೆಲಂಗಾಣ ದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಗೌರವ ನಮನ: ತೆಲಂಗಾಣ ಪ್ರವಾಸದಲ್ಲಿರುವ ಸಚಿವ ಜಮೀರ್ ಅಹಮದ್ ಅವರು ಬೆಳಗ್ಗೆ ನಿಜಾಮಾಬಾದ್ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಜಯಂತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಗೌರವ ನಮನ ಸಲ್ಲಿಸಿದರು.