ಶ್ರೀ ಕೃಷ್ಣ ಪರಮಾತ್ಮನನ್ನು ಗಾರುಡಿಗ ಅಂತ ಕರೆಯುವುದುಂಟು. ಈಗ ಇದೇ ಹೆಸರಿನಲ್ಲಿ ಹೊಸಬರ ಚಿತ್ರವೊಂದು ಸಿದ್ದಗೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಹಾಡು ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು.
ಸೂಪರ್ ಸ್ಟಾರ್ ರಜನಿಕಾಂತ್ ಆಪ್ತ ಸ್ನೇಹಿತ ರಾಜ್ಬಹದ್ದೂರ್ ಸಮಾರಂಭಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ವಿಜ್ಘಾನಿ, ಸದ್ಯ ವಕೀಲರಾಗಿರುವ ಡಾ.ಎಂ.ವೆಂಕಟಸ್ವಾಮಿ ಅವರು ಎಂ.ವಿ.ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ವಿಧಾ.ಆರ್ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ.
ರಕ್ತ ಒಂದು ತೊಟ್ಟು ಕೈ ಮಾಡಿಕೊಳ್ಳದೆ ಯುದ್ದವನ್ನು ಗೆಲ್ಲಿಸೋ ಮಹಾಪುರುಷ. ಅದೇ ರೀತಿ ಚಿತ್ರದ ಕಥೆಯಲ್ಲಿ ರೈತನಾಗಿದ್ದವನು ಸಿಟಿಗೆ ಬಂದು ತನ್ನ ಬುದ್ದಿಶಕ್ತಿಯಿಂದ ಚಕ್ರವ್ಯೂಹವನ್ನು ಯಾವ ರೀತಿ ಭೇದಿಸುತ್ತಾನೆ. ಶ್ರೀಮಂತ ಹುಡುಗರು ಅಚಾನಕ್ ಅಪಘಾತ ಮಾಡಿ ಮುಚ್ಚಿಟ್ಟು ನೆಮ್ಮದಿಯಿಂದ ಇರುತ್ತಾರೆ.
ಆದರೆ ಅವರ ಬದುಕಿನಲ್ಲಿ ಬದಲಾವಣೆಗಳು ಆಗುತ್ತದೆ. ಚಾಣಾಕ್ಷತನದಿಂದ ಇವರುಗಳು ಮಾಡಿದ ಅಪರಾದ ಸ್ಥಳಕ್ಕೆ ಕರೆದುಕೊಂಡು ಅವರಿಂದಲೇ ತಪ್ಪು ಒಪ್ಪಿಕೊಳ್ಳುವಂತೆ ಮಾಡಿಸುವಲ್ಲಿ ಗೆಲುವು ಕಾಣುತ್ತಾನೆ. ಇದರಿಂದ ಅವರುಗಳಿಗೆ ಶಿಕ್ಷೆಯಾಗುತ್ತದಾ? ಎಷ್ಟೇ ಕೋಟಿ ದುಡ್ಡು ಇದ್ದರೂ ಆ ಕ್ಷಣದಲ್ಲಿ ಅದು ಉಪಯೋಗಕ್ಕೆ ಬರುವುದಿಲ್ಲ. ಮನಸ್ಸಾಕ್ಷಿಗಿಂತ ಯಾವುದು ದೊಡ್ಡದಿಲ್ಲ ಎಂಬುದನ್ನು ತೋರಿಸಲಾಗಿದೆ.
ಹಳ್ಳಿ ಹುಡುಗನಾಗಿ ಮಾಗಡಿ ಮೂಲದ ರುದ್ವಿನ್ ನಾಯಕ. ಎರಡು ಶೇಡ್ಗಳಲ್ಲಿ ನಾಯಕಿಯಾಗಿ ಮಾನಸ.
ಉಳಿದಂತೆ ಅರ್ಚನಾ, ಸೋನು, ಅರ್ಜುನ್, ಗಿರೀಶ್, ಮೋಹನ್, ಸಂಜು ಮುಂತಾದವರು ನಟಿಸಿದ್ದಾರೆ. ಸಂಗೀತ ಎಂ.ಸಂಜೀವ್ರಾವ್, ಛಾಯಾಗ್ರಹಣ ಅನಿರುದ್ದ್-ಭರತ್, ಸಂಕಲನ ಭಾರ್ಗವ್-ಚೆಲುವಮೂರ್ತಿ, ಸಾಹಿತ್ಯ ವಿಧಾ.ಆರ್-ಎಂ.ಸಂಜೀವ್ರಾವ್ ಅವರದಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಪೇಟೆ, ಆನೇಕಲ್, ಕನಕಪುರ, ಹಾರೋಹಳ್ಳಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ಬಡವರ ಮಕ್ಕಳು ಬರ್ತಾ ಇದ್ದೀವಿ. ಪ್ರೀತಿ ಕೊಡಿ ಎಂದು ಹೇಳಿಕೊಂಡಿರುವ ಸಿನಿಮಾವನ್ನು ಮುಂದಿನ ತಿಂಗಳು ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.