ಮುಂಬೈ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪ್ರವಾಸದಲ್ಲಿರುವ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಶುಕ್ರವಾರ ಮುಂಬೈ ನಾರ್ಥ್ ಸೆಂಟ್ರಲ್ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಕಾಂಗ್ರೆಸ್ ಅಭ್ಯರ್ಥಿ ವರ್ಷಾ ಏಕನಾಥ್ ಗಾಯಕ್ ವಾಡ್ ಜತೆಗೂಡಿ ಅಂಧೇರಿ ಈಸ್ಟ್, ಸಹಾರ್ ಗಾವ್, ಮರೋಲ್ ಪೈಪ್ ಲೈನ್, ಚಕಾಲಾ, ಜೆ ಬಿ ನಗರ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿ. ಮತ ಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ಬದಲಾವಣೆ ಸಮಯ ಬಂದಿದೆ. ಹತ್ತು ವರ್ಷಗಳ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಜನ ಆಕ್ರೋಶ ಗೊಂಡಿದ್ದಾರೆ ಎಂದು ಹೇಳಿದರು.
ದೇಶ ಹಾಗೂ ಸಂವಿಧಾನ ರಕ್ಷಣೆ ಗಾಗಿ ಕಾಂಗ್ರೆಸ್ ಮೈತಿಕೂಟ ಇಂಡಿಯಾ ಗೆಲ್ಲಿಸಬೇಕಿದೆ. ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ ಎಂದು ತಿಳಿಸಿದರು. ಮುಂಬೈ ನಾರ್ಥ್ ಸೆಂಟ್ರಲ್ ಕ್ಷೇತ್ರದಕಾಂಗ್ರೆಸ್ -ಎನ್ ಸಿಪಿ -ಶಿವಸೇನೆ – ಆಮ್ ಆದ್ಮಿ ಪಾರ್ಟಿ ಮಹಾಮೈತ್ರಿಕೂಟದ ಅಭ್ಯರ್ಥಿ ವರ್ಷಾ ಗಾಯಕ್ವಾಡ್ ಜನಪರ ಕಾಳಜಿವುಳ್ಳ ವಿದ್ಯಾವಂತೆ.
ಉತ್ತಮ ಹಿನ್ನೆಲೆ ಹೊಂದಿರುವ ವರ್ಷಾ ಗೆಲುವು ನಿಶ್ಚಿತ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಚಿವರು ಅಭ್ಯರ್ಥಿ ಯ ಜತೆಗೂಡಿ ಅಂಧೇರಿ ಯ ಶಿವಸೇನೆ ಕಚೇರಿಗೂ ಭೇಟಿ ನೀಡಿದ್ದರು. ಪಾಲಿಕೆ ಸದಸ್ಯೆ ವಿನ್ನಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.