This is the title of the web page
This is the title of the web page

ಗ್ಯಾರಂಟಿ ಜಾರಿ ಖಚಿತ ಸಚಿವ ಖರ್ಗೆ

ಬೆಂಗಳೂರು: ಕಾಂಗ್ರೆಸ್ ಪಕ್ಷ ತಾನು ರಾಜ್ಯದ ಜನತೆಗೆ ನೀಡಿರುವ ಭರವಸೆಯಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿಯೇ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗಾಗಲೇ ಗ್ಯಾರಂಟಿ ಜಾರಿ ಬಗ್ಗೆ ಅಧಿಕಾರಿಗಳ ಜತೆ ಚರ್ಚೆಯಾಗಿದೆ. ಯಾವ ರೀತಿ ಗ್ಯಾರಂಟಿ ಜಾರಿ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಳೆ ನಡೆಯಲಿರುವ ಸಚಿವ ಸಂಪುಟದಲ್ಲಿ ಅಂತಿಮವಾಗಿ ಎಲ್ಲವೂ ಗೊತ್ತಾಗಲಿದೆ.

ವಿರೋಧ ಪಕ್ಷದವರು ಯಾವ ಆಧಾರದ ಮೇಲೆ ನಮಗೆ ಹೇಳುತ್ತಿದ್ದಾರೆ. ನಮಗೆ ಮತ ಹಾಕಿದ ಜನರ ಹಿತ ದೃಷ್ಟಿಯಿಂದ ಕೆಲಸ ಮಾಡುತ್ತೇವೆ. ಜೂ.1ರಂದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಯಾರು ಹೇಳಿದ್ದು 5 ಗ್ಯಾರಂಟಿ ಜಾರಿ ಮಾಡಲ್ಲ ಎಂದಿಲ್ಲ, ಜಾರಿ ಮಾಡೇ ಮಾಡುತ್ತೇವೆ ಎಂದರು.