ಆನೇಕಲ್: ಡೀಸೆಲ್ ವಾಹನಗಳಿಂದ ಹೆಚ್ಚು ಪರಿಸರ ಮಾಲಿನ್ಯವಾಗುತ್ತಿದೆ ಹಾಗಾಗಿ ಇದನ್ನು ತಡೆಗಟ್ಟಬೇಕು ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ವಿದ್ಯುತ್ ಬಸ್ಸುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಹಾಗೂ ಎಸಿ ವಿದ್ಯುತ್ ಬಸ್ಸುಗಳನ್ನು ಬಿಎಂಟಿಸಿ ಸಂಸ್ಥೆಯು ಪರಿಚಯಿಸಿದ್ದು ಇದು ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸಂಸ್ಥೆಯು ಪರಿಚಯಿಸಿದೆ ಎಂಬಾ ಹೆಗ್ಗಳಿಕೆಗೆ ಪಾತ್ರರಾಗಿದ್ದೇವೆ ಎಂದು ಸಚಿವ ರಾಮಲಿಂಗಾ ರೆಡ್ಡಿ ರವರು ತಿಳಿಸಿದರು.
ಅವರು ಸರ್ಜಾಪುರ ಬಸ್ ನಿಲ್ದಾಣದಿಂದ ಕೆಂಪೇಗೌಡ ಅಂತರ್ ರಾಷ್ಠೀಯ ವಿಮಾನ ನಿಲ್ದಾಣಕ್ಕೆ ಹಾಗೂ ಸರ್ಜಾಪುರ ಬಸ್ ನಿಲ್ದಾಣದಿಂದ ಹೆಬ್ಬಾಳಕ್ಕೆ ಸೇರಿದಂತೆ ಬೆಂಗಳೂರಿನ ವಿವಿಧ ಮಾರ್ಗಗಳಲ್ಲಿ ಹವಾ ನಿಯಂತ್ರಿತ ವಾಯು ವಜ್ರ, ಸಾಮಾನ್ಯ ಸಾರಿಗೆ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ 920 ಬಸ್ಸುಗಳನ್ನು ಕೊಂಡುಕೊಳ್ಳಲು ಆದೇಶ ನೀಡಲಾಗಿದ್ದು 150 ಬಸ್ಸುಗಳುಕಾರ್ಯನಿರ್ವಹಿಸುತ್ತಿದೆ ಇನ್ನೂ ಮೂರ್ನಾಲ್ಕು ತಿಂಗಳಿನ ಅವಧಿ ಒಳಗ ಸುಮಾರು 250ಕ್ಕೂ ಹೆಚ್ಚು ಬಸ್ಸುಗಳು ಸಂಸ್ಥೆಗೆ ಸೇರಲಿದ್ದು ಇದರಲ್ಲಿ ಬೆಂಗಳೂರಿನ ಮಹಾನಗರದಲ್ಲಿ ಸುಮಾರು 20 ಡಬಲ್ ಡೆಕ್ಕರ್ ಬಸ್ ಗಳು ಕಾರ್ಯನಿರ್ವಹಿಸುತ್ತವೆ ಎಂದರು.
ಬೆಂಗಳೂರಿನ ಕಲಾಸಿಪಾಳ್ಯ ಮತ್ತು ಮೆಜೆಸ್ಟಿಕ್ ಬಸ್ ನಿಲ್ದಾಣ ಬಿಟ್ಟರೆ ಅತಿ ಹೆಚ್ಚು ಬಸ್ಗಳು ಸಂಚಾರ ನಿರ್ವಹಿಸುವುದು ಅತ್ತಿಬೆಲೆಯಿಂದ ಹಾಗಾಗಿ ಅತ್ತಿಬೆಲೆ ಭಾಗದಲ್ಲಿ ಬಸ್ ನಿಲ್ದಾಣ ಮತ್ತು ಡಿಪೋನಿರ್ಮಾಣ ಮಾಡಲಾಗುತ್ತದೆ ಇನ್ನೂ ಸರ್ಜಾಪುರ ಬಸ್ ನಿಲ್ದಾಣ ಜಾಗವು ಕೋರ್ಟನಲ್ಲಿ ವ್ಯಾಜ್ಯ ಇದ್ದು ಇಲ್ಲಿನ ಸ್ಥಳೀಯ ಶಾಸಕರು ಮತ್ತು ಮುಖಂಡರು ಇತ್ಯರ್ಥ ಮಾಡಿಕೊಟ್ಟಳ್ಳಿ ಅತ್ಯ ಅಧುಧಿಕ ಮಾದರಿಯಲ್ಲಿ ಬಸ್ ನಿರ್ಮಾಣ ಮಾಡಿಕೊಡುತ್ತೇವೆ ಎಂದರು.
ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುವ ನೌಕರರು ಅಪಘಾತವಾಗಿ ಸಾವನ್ನಪ್ಪಿದರೆ ಒಂದು ಕೋಟಿ ರೂಪಾಯಿಗಳ ಅಪಘಾತ ವಿಮೆ ನೀಡಲು ಈಗಾಗಲೇ ತೀರ್ಮಾನಿಸಲಾಗಿದೆ. ಇದರಿಂದಾಗಿ ಬಿಎಂಟಿಸಿಯಲ್ಲಿ ಕಾರ್ಯ ನಿರ್ವಹಿಸುವ 28 ಸಾವಿರ ನೌಕರರ ಕುಟುಂಬಗಳಿಗೆ ಈ ವಿಮಾ ಸೌಲಭ್ಯ ದೊರೆಯಲಿದೆ ಇನ್ನೂ ಸಾಮಾನ್ಯವಾಗಿ ಸಾವನ್ನಪ್ಪಿದರೆ 10 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದರು.
ರಾಷ್ಟ್ರಕವಿ ಕುವೆಂಪುರವರ ಬಗ್ಗೆ ನಾಡಿನ ಪ್ರತಿಯೊಬ್ಬ ಜನತೆಗೂ ಅಪಾರವಾದ ಗೌರವವಿದೆ, ಪಠ್ಯ ಪುಸ್ತಕಗಳಲ್ಲಿ ಕುವೆಂಪುರವರ ಕವನ ಮತ್ತು ಪಠ್ಯವನ್ನು ತೆಗೆದಿದ್ದು ಬಿಜೆಪಿ ಪಕ್ಷದವರು, ಬಿಜೆಪಿಯವರಿಗೆ ಸಮಾನತೆಯ ಬಗ್ಗೆ ಅರಿವು ಇಲ್ಲಾ ಮತ್ತು ಕುವೆಂಪು ರವರ ಸಿದ್ದಂತಗಳು ಅವರಿಗೆ ಇಡಿಸುವುದಿಲ್ಲ ಹೀಗಾಗಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಇನ್ನೂ ಕೆ.ಎಸ್ ಈಶ್ವರಪ್ಪ ಮತ್ತು ಆರ್ ಅಶೋಕ್ ರವರ ತಲೆಯಲ್ಲಿ ಶೂನ್ಯ ಅಡಗಿದೆ ಹಾಗಾಗಿಯೇ ನಮ್ಮ ಬಜೆಟ್ ಅನ್ನು ಶೂನ್ಯ ಬಜೆಟ್
ಎಂದು ಹೇಳಲಾಗಿದೆ ಎಂದು ಕಿಡಿ ಕಾರಿದರು.ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ರಾಮಚಂದ್ರ, ಮಾಹಿತಿ ಮತ್ತು ತಂತ್ರಜ್ಞಾನ ನಿರ್ದೇಶಕರಾದ ಎಂ.ಶಿಲ್ಪ, ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಧ್ಯಕ್ಷೆ ಸುನೀತ ಶಶಿಧರ್, ಉಪಾದ್ಯಕ್ಷರಾದ ಎ.ಸತೀಶ್ ಕುಮಾರ್, ಮಾಜಿ ಅಧ್ಯಕ್ಷರಾದ ವೈ.ಶ್ರೀರಾಮಲು, ಶಂಭಯ್ಯ, ಎಸ್.ಎಂ. ಶ್ರೀನಿವಾಸ್, ಬುಡಗಪ್ಪ, ಸದಸ್ಯರಾದ ಡಾ|| ಮಂಜುನಾಥ್ ಸರ್ಜಾ, ಗಣೇಶ್, ಕಲಾವತಿ ಮೂರ್ತಿ ಕುಮಾರ್, ಗಾಯಿತ್ರಿ, ಆರ್.ಶ್ರೀನಿವಾಸ್, ಸರ್ಜಾಪುರ ಸಿಟಿಜನ್ ಪೋರಂ ಮುಖ್ಯಸ್ಥರಾದ ಎಸ್.ವಿ ಭರತ್ ಗೌಡ, ರಾಜೀವ್ ರಾಯ್, ನಿಶಾ ಚಕ್ರವರ್ತಿ, ಮುಖಂಡರಾದ ತಿಂಡ್ಲು ಸ್ವಾತೇಗೌಡರು, ರಘುಪತಿ ರೆಡ್ಡಿ, ಮೋಹನ್ ಬಾಬು, ಲಿಂಗಣ್ಣ ಹಾಗೂ ಮತ್ತಿತ್ತರರು ಹಾಜರಿದ್ದರು.