ಬೆಂಗಳೂರು: ಹೆಸರಾಂತ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ‘ಎರಡನೇ ವಿಶ್ವ ಕನ್ನಡ ಹಬ್ಬ’ದ ಲಾಂಛನ ಲೋಕಾರ್ಪಣೆ ಸಮಾರಂಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನೂತನ ಅಧ್ಯಕ್ಷರುಗಳಿಗೆ ಅಧಿಕಾರ ನೀಡಲಾಯಿತು. ಸುಮಾರು ವರ್ಷಗಳಿಂದ ಸಾಮಾಜಿಕವಾಗಿ ಸಾಕಷ್ಟು ಸೇವೆಯನ್ನು ಸಲ್ಲಿಸುತ್ತಾ, ವಿಶೇಷವಾಗಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ,
ಅವರಿಗಾದ ಅನ್ಯಾಯಗಳ ವಿರುದ್ಧ ಹೋರಾಟ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡಿರುವ ಶ್ರೀಮತಿ ಮೀನಾರಾಜ್ ರವರನ್ನು ಮಹಿಳಾ ರಾಜ್ಯ ಅಧ್ಯಕ್ಷರನ್ನಾಗಿ ರಾಜ್ಯ ಕಾರ್ಯಕಾರಿ ಮಂಡಳಿಯು ಆಯ್ಕೆ ಮಾಡಲಾಗಿರುತ್ತದೆ. ಆಯ್ಕೆಯಾದ ಇವರಿಗೆ ಮಾನ್ಯ ಸಚಿವರಾದ ಸಚಿವ ಶಿವರಾಜ್ ತಂಗಡಗಿಯವರು ಆದೇಶ ಪತ್ರ ನೀಡುವ ಮೂಲಕ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಮಹರ್ಷಿ ಡಾ. ಆನಂದ್ ಗುರೂಜಿ, ಅಧ್ಯಕ್ಷತೆ ಸಚಿವ ಶಿವರಾಜ್ ತಂಗಡಗಿಯವರು ವಹಿಸಿಕೊಂಡಿದ್ದರು. ಹಿರಿಯ ನಟ ದೊಡ್ಡಣ್ಣ, 2ನೇ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ್, ಖ್ಯಾತ ಸಾಹಿತಿ ಷಡಕ್ಷರಿ, ಗೋಪಾಲನ್ ಗ್ರೂಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಭಾಕರ್, ಕಲಾ ನವೀನ್, ಡಾ. ಪ್ರಸನ್ನ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.