ಹೆಸರಾಂತ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ‘ಎರಡನೇ ವಿಶ್ವ ಕನ್ನಡ ಹಬ್ಬ’ದ ಲಾಂಛನ ಲೋಕಾರ್ಪಣೆ ಸಮಾರಂಭದಲ್ಲಿ 2ನೇ ವಿಶ್ವ ಕನ್ನಡ ಹಬ್ಬದ ನಿರೂಪಕಿಯನ್ನಾಗಿ ಸವಿಪ್ರಕಾಶ್ ರವರನ್ನು ನೇಮಕ ಮಾಡಲಾಗಿದ್ದು, ಇವರಿಗೆ ಸಚಿವರಾದ ಸಚಿವ ಶಿವರಾಜ್ ತಂಗಡಗಿಯವರು ಆದೇಶ ಪತ್ರ ನೀಡುವ ಮೂಲಕ ಅಭಿನಂದನೆಗಳನ್ನು ತಿಳಿಸಿದರು.
ಸವಿಪ್ರಕಾಶ್ ರವರು ಸತತ ಆರು ವರ್ಷಗಳಿಂದ ಯುವ ಸಂಭ್ರಮ ಹಾಗೂ ದಸರಾ ವಿಶೇಷ ಕಾರ್ಯಕ್ರಮ ಸೇರಿದಂತೆ ಬಹಳಷ್ಟು ಪ್ರಾಡಕ್ಟ್ ಲಾಂಚ್ ಗಳನ್ನು ಹಾಗೂ ದೆಹಲಿ ಮುಂಬೈ ಇನ್ನಿತರ ರಾಜ್ಯಗಳಲ್ಲಿ ಕಾರ್ಯಕ್ರಮ ನಿರೂಪಿಸಿದ ಅನುಭವ ಹೊಂದಿದ್ದಾರೆ. ಹೆಸರಾಂತ ಗಾಯಕರಾಗಿ ರಾಜೇಶ್ ಕೃಷ್ಣನ್ ಶಮಿತಾ ಮಲ್ಲ ಚಂದನ್ ಶೆಟ್ಟಿ,
ನವೀನ್ ಸಜ್ಜು ಇನ್ನು ಅನೇಕ ಗಾಯಕರಗಳ ಸಂಗೀತ ರಸಂಜೆ ಕಾರ್ಯಕ್ರಮದ ನಿರೂಪಣೆಯ ಅನುಭವ ಪಡೆದಿರುವ ಇವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ನಿರೂಪಣೆ ಮಾಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅತ್ತ್ಯುತ್ತಮ ನಿರೂಪಕಿಯಾದ ಇವರನ್ನು 2ನೇ ವಿಶ್ವ ಕನ್ನಡ ಹಬ್ಬದ ನಿರೂಪಕಿಯಾಗಿ ಆಯ್ಕೆ ಮಾಡಲಾಗಿದ್ದು, ಇವರಿಗೆ ಸಂಸ್ಥೆ ಅಭಿನಂದನೆಗಳನ್ನು ತಿಳಿಸುತ್ತಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಮಹರ್ಷಿ ಡಾ. ಆನಂದ್ ಗುರೂಜಿ, ಅಧ್ಯಕ್ಷತೆ ಸಚಿವ ಶಿವರಾಜ್ ತಂಗಡಗಿಯವರು ವಹಿಸಿಕೊಂಡಿದ್ದರು. ಹಿರಿಯ ನಟ ದೊಡ್ಡಣ್ಣ, 2ನೇ ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷರಾದ ಡಾ.ಸಿ. ಸೋಮಶೇಖರ್, ಖ್ಯಾತ ಸಾಹಿತಿ ಷಡಕ್ಷರಿ, ಗೋಪಾಲನ್ ಗ್ರೂಪ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಪ್ರಭಾಕರ್, ಕಲಾ ನವೀನ್, ಡಾ. ಪ್ರಸನ್ನ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.