ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಸಿಂಗಪುರದಲ್ಲಿ ಆಯೋಜಿಸಿರುವ ‘2ನೇ ವಿಶ್ವ ಕನ್ನಡ ಹಬ್ಬ’ದ ಟ್ರೈಲರ್ ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿಯವರು ಕನ್ನಡ ಭಾಷೆ, ಸಾಹಿತ್ಯವನ್ನು, ತಾಯಿ ಭುವನೇಶ್ವರಿಯ ಕೀರ್ತಿ ಪತಾಕೆಯನ್ನು ಸಿಂಗಪುರದಲ್ಲಿ ಪಸರಿಸಲು ಹೊರಟಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಗೆ ಶುಭವಾಗಲಿ.
ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆಯವರಿಗೆ ಕನ್ನಡದ ಮೇಲಿರುವ ಅಪಾರ ಅಭಿಮಾನದ ಪ್ರತೀಕ ಈ ಕಾರ್ಯಕ್ರಮವಾಗಿದ್ದು, ಅನಿವಾಸಿ ಕನ್ನಡಿಗರ ಹಾಗೂ ಮೂಲ ಕನ್ನಡಿಗರ ಹೃದಯ ಬೆಸೆಯುವ ಈ ಕನ್ನಡ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಕಾರ್ಯಕ್ರಮ ಸಂಪೂರ್ಣ ಯಶಸ್ಸು ಕಾಣಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಶ್ವ ಕನ್ನಡ ಹಬ್ಬದ ಪದಾಧಿಕಾರಿಗಳಾದ ನಟಿ ರೂಪಿಕಾ, ರೇಣುಕಾನಂದ, ಪ್ರತಿಭಾ ಪಟವರ್ಧನ್, ಕಿಶೋರ್ ಕುಮಾರ್, ಚೈತ್ರಾ, ದೇವರಾಜ್ ಹಾಗೂ ಪವನ್ ರವರು ಜೊತೆಗಿದ್ದರು.