ಬೆಂಗಳೂರು: ಮಹಿಳೆಯರಿಗೆ ಬಹಳ ವರ್ಷಗಳಿಂದ ಮೀಸಲಾತಿ ನೀಡಬೇಕು ಎಂಬುದು ಕೂಗಾಗಿತ್ತು. ಈ ಬೇಡಿಕೆ ಈಡೇರುತ್ತಾ ಎಂಬ ಸಂಶಯ ಇತ್ತು. 15 ವರ್ಷಗಳ ಹಿಂದೆ ಪಾರ್ಲಿಮೆಂಟ್ನಲ್ಲಿ ಚರ್ಚೆಗೆ ಬಂದಾಗ ಬಿಲ್ ಹರಿದು ಹಾಕಿದ್ದರು. ಮಹಿಳೆಯರಿಗೆ ಮೀಸಲಾತಿ ನೀಡಬಾರದು ಎಂಬುದು ಅವರೆಲ್ಲಾ ನಿಲುವಾಗಿತ್ತು. ಮಹಿಳೆಯ ಮೀಸಲಾತಿ ಬಿಲ್ ನೆನಗುದಿಗೆ ಬಿದ್ದಿತ್ತು. ಯುಪಿಎ ಸರ್ಕಾರದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ನರೇಂದ್ರ ಮೋದಿ ಪ್ರಧಾನಿಗಳಾದ ಬಳಿಕ ಈ ಬಿಲ್ಗೆ ಮಾನ್ಯತೆ ಕೊಟ್ಟರು ಎಂದು ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ರೀತಿಯ ಸಂಭ್ರಮದ ವಿಚಾರದೊಂದಿಗೆ ಬಂದಿದ್ದೇವೆ. ಮಹಿಳೆಯರು ಸಬಲರಾಗಬೇಕೆಂದು ಒತ್ತು ಕೊಟ್ಟಿದ್ದಾರೆ. ಈಗ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿದ್ದಾರೆ. ನಾನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಸಚಿವೆ ಇದ್ದೇ. 2008 ರಲ್ಲಿ ನಾನು ಗ್ರಾಮೀಣಾಭಿವೃದ್ಧಿ ಸಚಿವೆ ಆಗಿದ್ದೇ. ಗ್ರಾಮ ಪಂಚಾಯತಿ ಅಧ್ಯಕ್ಷ ಯಾರು ಮಹಿಳೆಯರಾಗಿ ಉತ್ತಮ ಕೆಲಸ ಮಾಡುತ್ತಾರೆ ಅವರಿಗೆ ನಾನೇ ಅವಾರ್ಡ್ ಕೊಟ್ಟಿದ್ದೇನೆ. ಗ್ರಾಮ ಪಂಚಾಯತಿಯಲ್ಲೂ ಮೀಸಲಾತಿ ಇದೆ. ಮೀಸಲಾತಿ ಎಲ್ಲಾ ಹುದ್ದೆಗಳಿಗೂ ಬರುತ್ತದೆ. ಯಾರಿಗೆ ಶಿಕ್ಷಣವೇ ಇಲ್ಲವೇ ಇಲ್ಲ, ಅವರಿಗೆ ಆವಾರ್ಡ್ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷೆಗೆ ಗೊತ್ತಿತ್ತು, ನನ್ನ ಊರಿನಲ್ಲಿ ಯಾವ ಕೆಲಸ ಆಗಬೇಕು ಎಂದು. ಅಲ್ಲಿ ಶಿಕ್ಷಣ ಇಲ್ಲ. ಲೆಕ್ಕ ಗೊತ್ತಿಲ್ಲ. ಆದ್ರೆ, ಆಕೆಗೆ ಭಾವನೆ ಇತ್ತು. ಆ ಗ್ರಾಮ ಪಂಚಾಯತಿ ಅಧ್ಯಕ್ಷೆ ಆಗುವ ಕಾಮಗಾರಿಯ ನಿರ್ವಹಣೆ ಮಾಡಿದ್ದಳು. ಅವರಿಗೆ ಪ್ರಶಸ್ತಿ ಕೊಟ್ಟಿದ್ದೇವೆ. ಈಗ ಅದೇ ರೀತಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಎಲ್ಲೆಲ್ಲಿ ಮಹಿಳೆಯರು ಗೆದ್ದಿದ್ದಾರೆ. ಅವರೆಲ್ಲಾ ಸಾಧನೆ ಮಾಡಬೇಕು. ನಾನು ಇಂಧನ ಇಲಾಖೆ ಸಚಿವೆ ಆಗಿದ್ದೇನೆ.
ಮಹಿಳೆಯರಿಗೆ ಮೀಸಲಾತಿ ಬಿಲ್ ಪಾಸ್ ಸಚಿವ ಶೋಭಾ ಕರಂದ್ಲಾಜೆ ಸಂತಸ



