This is the title of the web page
This is the title of the web page

ಪೌರ ಕಾರ್ಮಿಕರು ನಮ್ಮೆಲ್ಲರ ಕಣ್ಣಿಗೆ ಕಾಣುವ ದೇವರು: ಸಚಿವ ವಿ.ಸೋಮಣ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ:ಅಗ್ರಹಾರ ದಾಸರಹಳ್ಳಿಯಲ್ಲಿ ಯಶ್ವಸಿನಿ ಫೌಂಡೇಷನ್ ಸಂಸ್ಥಾಪಕರು, ಸಮಾಜ ಸೇವಕರಾದ ಡಾ||ಎಂ.ಸೋಮಶೇಖರ್ ರವರು ಸಮಾಜ ಸೇವೆ ಗುರುತಿಸಿ, ವಸತಿ ಸಚಿವರಾದ ವಿ.ಸೋಮಣ್ಣರವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡರಾದ ತಿಪ್ಪೇಸ್ವಾಮಿರವರು ಶುಭಾ ಕೋರಿ, ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ನೂರಾರು ಪೌರ ಕಾರ್ಮಿಕರಿಗೆ ಉಲ್ಲಾನ್ ಕಂಬಳಿ ವಿತರಿಸಲಾಯಿತು.ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಕಾಯಕ ಮಹತ್ವ ಮತ್ತು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದಾಸೋಹ ಸಿದ್ದಾಂತವನ್ನು ಪಾಲಿಸುತ್ತಿರುವ ಎಂ.ಸೋಮಶೇಖರ್ ರವರು ಸರಳ,ಸಜ್ಞನ ವ್ಯಕ್ತಿತ್ವ.ಸಮಾಜ ನನಗೇನು ಕೊಟ್ಟಿದೆ ಏನ್ನುವುದಕ್ಕಿಂತ ಸಮಾಜಕ್ಕೆ ನಾನು ಏನು ಕೊಟ್ಟಿದ್ದೇನೆ ಎಂಬುದು ಮುಖ್ಯ.

ಕೊರೋನ ಸಾಂಕ್ರಮಿಕದಿಂದ ಸಂಕಷ್ಟದಲ್ಲಿ ಇದ್ದಾಗ ಪ್ರಾಣದ ಹಂಗು ತೊರೆದು ಸ್ವಚ್ಚತೆಗೆ ಆದ್ಯತೆ ಜನ ಜೀವ ಉಳಿಸಿದ ಪೌರ ಕಾರ್ಮಿಕರು ನಮ್ಮೆಲ್ಲರ ಕಣ್ಣಿಗೆ ಕಾಣುವ ದೇವರು .ಇದೇ ತಿಂಗಳು 16ತಾರೀಖು ದಾಸರಹಳ್ಳಿಯಲ್ಲಿ 305ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ರವರು ಮತ್ತು ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಬಷವರಾಜ್ ಎಸ್.ಬೊಮ್ಮಾಯಿರವರು ಲೋಕಾರ್ಪಣೆ ಮಾಡಲಿದ್ದಾರೆ.

ಮತದಾರ ಕೊಟ್ಟ ಒಂದು ಮತ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಬದಲಾವಣೆಯತ್ತ ಸಾಗಿದೆ ಸಾಗಿದೆ ಎಂದು ಹೇಳಿದರು.
ಎಂ.ಸೋಮಶೇಖರ್ ರವರು ಮಾತನಾಡಿ ಯಶ್ವಸಿನಿ ಫೌಂಡೇಷನ್ ಶಿಕ್ಷಣ, ಆರೋಗ್ಯ ಮತ್ತು ಪರಿಸರ ರಕ್ಷಣೆಗೆ ಸೇವೆ ಮಾಡುತ್ತಿದೆ.
ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿದ್ಯಾರ್ಥಿ ವೇತನ ಹಾಗೂ ಪರಿಸರ ಜಾಗೃತಿ ಅಭಿಯಾನ ಮತ್ತು ಸಸಿ ನೆಡುವ ಕಾರ್ಯಕ್ರಮ.

ಉಚಿತ ಆರೋಗ್ಯ ತಪಾಸಣೆ ಶಿಬಿರ ವಿವಿಧ ಸಮಾಜಮುಖಿ ಕಾರ್ಯಗಳು ಯಶ್ವಸಿನಿ ಫೌಂಡೇಷನ್ ಕಳೆದ ವರ್ಷಗಳಿಂದ ಸೇವೆ ಮಾಡುತ್ತಿದೆ ಎಂದು ಹೇಳಿದರು. ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಾಮಪ್ಪ, ಮೋಹನ್ ಕುಮಾರ್,ದಾಸೇಗೌಡ,ಶಿಲ್ಪ ಶ್ರೀಧರ್ ಬಿಜೆಪಿ ಮುಖಂಡರುಗಳಾದ ಕನಕಪುರ ರಾಜಣ್ಣವೇಣು, ರಾಜಪ್ಪ,ಕೊಳಗೇರಿ ನಿರ್ಮೂಲನ ಮಂಡಳಿ ನಿರ್ದೇಶಕರಾದ ಕ್ರಾಂತಿರಾಜುರವರು ಭಾಗವಹಿಸಿದ್ದರು.