ಬೆಂಗಳೂರು: ನಗರದಲ್ಲೇ ಪ್ರಪ್ರಥಮ ಬಾರಿಗೆ 120 ದಶಲಕ್ಷ ಲೀ. ಶುದ್ಧೀಕರಿಸಿದ ಬೆಂ.ಜಲಮಂಡಳಿಯ ತ್ಯಾಜ್ಯ ನೀರನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಂಡಹಳ್ಳಿ ಕೆರೆಗೆ ತುಂಬಿಸುವ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು, ವಸತಿ ಸಚಿವರಾದ ವಿ.ಸೋಮಣ್ಣ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಪರಿಸರದ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಪರಿಸರ ಉಳಿದರೆ ನಾಡು ಉಳಿಯುತ್ತದೆ, ಪರಿಸರ ಸ್ವಚ್ಚತೆ ಇದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬಾಳಿ ಬದುಕಬಹುದು.
ನಮ್ಮ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಉದ್ಯಾನವನಗಳನ್ನು ನವೀಕರಣ ಮಾಡಿ ಹಸಿರುನಿಂದ ಕಂಗೊಳಿಸುವಂತೆ ಪರಿಸರ ರಕ್ಷಣೆ ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡರ ಆಡಳಿತದ ಅವಧಿಯಲ್ಲಿ ನಗರದಲ್ಲಿ 250ಕ್ಕೂ ಹೆಚ್ಚು ಕೆರೆಗಳು ಇತ್ತು ಅದರೆ ಇಂದು ಕೆರೆಗಳು ಅಭಿವೃದ್ದಿ ಹೆಸರಿನಲ್ಲಿ ಮತ್ತು ಭೂಕಬಳಿಕೆದಾರರ ಪಾಲಾಗಿದೆ.
ಬಾಳಯ್ಯನ ಕೆರೆ ಭೂಕಬಳಿಕೆದಾರರ ವಶದಲ್ಲಿ ಇತ್ತು ಅದಿಚುಂಚನಗಿರಿ ಮಠ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದದ ಫಲದಿಂದ ಭೂಕಬಳಿಕೆದಾರರ ವಿರುದ್ದ ಹೋರಾಟ ಮಾಡಿ ಬಾಳಯ್ಯನ ಕೆರೆ ಉಳಿಸಲಾಯಿತು.
ನಾಯಂಡಹಳ್ಳಿ ಕೆರೆ 18ಎಕರೆ ಜಾಗದಲ್ಲಿ 3ಎಕರೆ ಒತ್ತುವರಿಯಾಗಿ 15ಎಕರೆ 4ಗಂಟೆ ಜಾಗ ಉಳಿದಿದೆ.
ಕೊಳಚೆ ನೀರು ನಾಯಂಡಹಳ್ಳಿ ಕೆರೆ ಹರಿದು ಬರುತ್ತಿತು ಕೆರೆ ಸಂರಕ್ಷಣೆ ಮಾಡಬೇಕು ವಿಶೇಷ ಯೋಜನೆ ರೂಪಿಸಿ, 120 ದಶಲಕ್ಷ ಲೀ ಶುದ್ದಿಕರಿಸಿದ ತ್ಯಾಜ್ಯ ನೀರನ್ನು ಬಿಡಲಾಗುತ್ತಿದೆ. ನಾಯಂಡಹಳ್ಳಿ ಕೆರೆ ಸುತ್ತ ಪಾದಚಾರಿಗಳಿಗೆ ವಾಕಿಂಗ್ ಟ್ರ್ಯಾಕ್ ಮತ್ತು ಮುಂದಿನ ದಿನದಲ್ಲಿ ಸಾರ್ವಜನಿಕರಿಗೆ ಕೆರೆ ವೀಕ್ಷಣೆ ಮಾಡಲು ದೋಣಿ ವ್ಯವಸ್ಥೆ ಮತ್ತು ನೂರಾರು ಸಸಿಗಳನ್ನು ನೆಟ್ಟಿ ಅಭಿವೃದ್ದಿ ಪಡಿಸಿ ಸಾರ್ವಜನಿಕರು ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.
ಕೆರೆಗಳ ಸಂರಕ್ಷಣೆಯಿಂದ ಭೂಮಿಯ ಕೆಳಭಾಗದಲ್ಲಿ ತೇವಾಂಶದಿಂದ ಸುತ್ತಮುತ್ತಲ ಪ್ರದೇಶದ ಗಿಡ,ಮರಗಳು ಸಮ್ಮದ್ದಿಯಾಗಿ ಬೆಳಯುತ್ತದೆ ಮತ್ತು ಬೋರ್ ವೆಲ್ ಗಳನ್ನು ಒತ್ತಿ ಹೋಗುವುದಿಲ್ಲ. ನಮ್ಮ ಕ್ಷೇತ್ರದ ಜನರಪ್ರೋತ್ಸಾಹ, ಸಹಕಾರದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ರಾಜ್ಯದ ಮಾದರಿ ಕ್ಷೇತ್ರ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಗೋವಿಂದರಾಜನಗರ ಬಿಜೆಪಿ ಮಂಡಲ ಅಧ್ಯಕ್ಷರಾದ ವಿಶ್ವನಾಥಗೌಡ, ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಜಯರಾಮ್, ನಿರ್ದೇಶಕರಾದ ಕ್ರಾಂತಿರಾಜು, ಮುಖ್ಯ ಅಭಿಯಂತರಾದ ಡೊಡ್ಡಯ್ಯ, ಕಾರ್ಯಪಾಲಕ ಅಭಿಯಂತರಾದ ಪ್ರಕಾಶ್, ವಾರ್ಡ್ ಅಧ್ಯಕ್ಷ ಹರೀಶ್, ಬಿ.ಜೆ.ಪಿ. ಮುಖಂಡರುಗಳಾದ ಮಂಡ್ಯ ವೆಂಕಟೇಶ್, ವಜ್ರಪ್ಪ, ಜಲಮಂಡಳಿ, ಬಿಬಿಎಂಪಿ ಅಧಿಕಾರಿಗಳು ಭಾಗವಹಿಸಿದ್ದರು.
Leave a Review